ನಾನು ನಂದಿನಿ… ನಿಮ್ಮ ಮನೆ ಬಾಗಿಲಿಗೆ ಬರ್ತೀನಿ, ಇಡ್ಲಿ, ದೋಸೆ ಹಿಟ್ಟು ತರ್ತೀನಿ…

KMF Nandini: ಕಳೆದ ವರ್ಷ ನಂದಿನಿ ಬ್ರಾಂಡ್ ಪರಿಚಯಿಸಿದ್ದ ಇಡ್ಲಿ ಮತ್ತು ದೋಸೆ ಹಿಟ್ಟಿಗೆ ಭಾರೀ ಬೇಡಿಕೆ ಬಂದಿದೆ. ಅದರಿಂದಾಗಿ ಈಗ ಕೆಎಂಎಫ್ ಏಪ್ರಿಲ್ 1ನೇ ತಾರೀಖಿನಿಂದ ಮನೆ ಬಾಗಿಲಿಗೆ ಇಡ್ಲಿ ಮತ್ತು ದೋಸೆ ಹಿಟ್ಟು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದೆ. 

Written by - Yashaswini V | Last Updated : Mar 26, 2025, 11:26 AM IST
  • ಸದ್ಯ ಬೆಂಗಳೂರು ಒಂದರಲ್ಲಿ 4,600 ಕೆಜಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ವ್ಯಾಪಾರವಾಗುತ್ತಿತ್ತು.
  • ಈಗ 15,000 ಕೆಜಿ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪಾದಿಸಲು ನಿರ್ಧರಿಸಲಾಗಿದೆ.
  • 450 ಗ್ರಾಂ ಹಿಟ್ಟಿಗೆ 40 ರೂಪಾಯಿ ಮತ್ತು 900 ಗ್ರಾಂ ಹಿಟ್ಟಿಗೆ 80 ರೂಪಾಯಿ ದರ ನಿಗದಿ ಮಾಡಲಾಗಿದೆ.
ನಾನು ನಂದಿನಿ… ನಿಮ್ಮ ಮನೆ ಬಾಗಿಲಿಗೆ ಬರ್ತೀನಿ, ಇಡ್ಲಿ, ದೋಸೆ ಹಿಟ್ಟು ತರ್ತೀನಿ…

KMF Nandini In E-Commerce: ಕೆಎಂಎಫ್ ನಂದಿನಿ ಮೂಲಕ ಪರಿಚಯಿಸಿರುವ ಹಾಲು, ಮೊಸರಿನಿಂದ ಹಿಡಿದು ಎಲ್ಲಾ ಪದಾರ್ಥಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಅದಕ್ಕಾಗಿ ಸಿಕ್ಕಾಪಟ್ಟೆ ಜನಪ್ರಿಯವಾಗಿವೆ. ಈಗ ನಂದಿನಿ ಏಪ್ರಿಲ್ 1ನೇ ತಾರೀಖಿನಿಂದ ಮನೆ ಮನೆಗೆ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದೆ. 

Add Zee News as a Preferred Source

ಬಹುಶಃ ಇಡೀ ದೇಶದಲ್ಲಿ ಸರ್ಕಾರಿ ಸಾಮ್ಯದ ಸಂಸ್ಥೆಯೊಂದು ಪರಿಚಯಿಸಿದ ಎಲ್ಲಾ ಪದಾರ್ಥಗಳಿಗೂ ಕೆಎಂಎಫ್ ಗೆ ಸಿಕ್ಕಂತ ಜನಮನ್ನಣೆ ಸಿಕ್ಕಿಲ್ಲ. ನಂದಿನಿ ಅದಕ್ಕೆ ಭಿನ್ನ. ಕೆಲ ದಿನಗಳ ಹಿಂದೆ ನಂದಿನಿ ಬ್ರಾಂಡ್ ಪರಿಚಯಿಸಿದ್ದ ಇಡ್ಲಿ ಮತ್ತು ದೋಸೆ ಹಿಟ್ಟಿಗೆ ಭಾರೀ ಬೇಡಿಕೆ ನಿರ್ಮಾಣವಾಗಿತ್ತು. ಅದರಿಂದಾಗಿ ಈಗ ಕೆಎಂಎಫ್ ಏಪ್ರಿಲ್ 1ನೇ ತಾರೀಖಿನಿಂದ ಮನೆ ಬಾಗಿಲಿಗೆ ಇಡ್ಲಿ ಮತ್ತು ದೋಸೆ ಹಿಟ್ಟು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದೆ. 

ಇದನ್ನೂ ಓದಿ- ಯುಗಾದಿ ಹಬ್ಬಕ್ಕೂ ಮೊದಲೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ

ಬೆಂಗಳೂರಿನ ನಂದಿನಿ ಬೂತ್ ಗಳಲ್ಲಿ ಮಾತ್ರ ಇಡ್ಲಿ, ದೋಸೆ ಹಿಟ್ಟು ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಜನರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಅದರಿಂದಾಗಿ ಈಗ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪಾದನೆಯನ್ನು ಹೆಚ್ಚಳ ಮಾಡಿ ಬೇರೆ ಜಿಲ್ಲೆಗಳಲ್ಲೂ ವ್ಯಾಪಾರ ಮಾಡಲು ಕೆಎಂಎಫ್ ಮುಂದಾಗಿದೆ. ಸದ್ಯ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ಆನ್ ಲೈನ್ ನಲ್ಲಿ ಲಭ್ಯ ಇರುವುದಿಲ್ಲ. ಆದುದರಿಂದ ಇ-ಕಾಮರ್ಸ್ ಕಂಪನಿಗಳ ಮೂಲಕ ಮನೆ ಮನೆಗೆ ಇಡ್ಲಿ ಹಾಗು ದೋಸೆ ಹಿಟ್ಟು ಪೂರೈಸಲು ನಿರ್ಧರಿಸಲಾಗಿದೆ. 

ಇದನ್ನೂ ಓದಿ- ರಾಜಧಾನಿ ಬೆಂಗಳೂರು ಜನರಿಗೆ ಶಾಕ್ ಮೇಲೆ ಶಾಕ್! ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ!

ಸದ್ಯ ಬೆಂಗಳೂರು ಒಂದರಲ್ಲಿ 4,600 ಕೆಜಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ವ್ಯಾಪಾರವಾಗುತ್ತಿತ್ತು. ಮೊದಲ ಹಂತದಲ್ಲಿ 15,000 ಕೆಜಿ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪಾದಿಸಲು ನಿರ್ಧರಿಸಲಾಗಿದೆ. 450 ಗ್ರಾಂ ಹಿಟ್ಟಿಗೆ 40 ರೂಪಾಯಿ ಮತ್ತು 900 ಗ್ರಾಂ ಹಿಟ್ಟಿಗೆ 80 ರೂಪಾಯಿ ದರ ನಿಗದಿ ಮಾಡಲಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News