Car Loan Interest Rate : ಕಾರು ಖರೀದಿ ಪ್ರತಿಯೊಬ್ಬರ ಕನಸಾಗಿರುತ್ತದೆ. ಹೊಸ ಕಾರು ಖರೀದಿಸಬೇಕಾದರೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಲಕ್ಷಗಟ್ಟಲೆ ಖರ್ಚು ಮಾಡಿ ಒಂದೇ ಸಲ ಕಾರು ಖರೀದಿಸುವುದು ಸುಲಭದ ಮಾತಲ್ಲ. ಕಾರು, ಬೈಕು ಅಥವಾ ಸ್ಕೂಟರ್ ಖರೀದಿಸಲು ವಾಹನ ಸಾಲ ಸೌಲಭ್ಯ ಸುಲಭ ಮಾರ್ಗವಾಗಿದೆ. ಸಾಮಾನ್ಯವಾಗಿ  ವಾಹನ ಸಾಲವನ್ನು ಬಳಸಿಯೇ ಕಾರು ಖರೀದಿಸಲಾಗುತ್ತದೆ. ಆದರೆ ಸಾಲವನ್ನು ಪಡೆಯುವಾಗ  ಕೆಲವು ವಿಷಯಗಳನ್ನು ಕಡೆಗಣಿಸಲಾಗುತ್ತದೆ. ಇದರಿಂದಾಗಿ ನಂತರ ತೊಂದರೆ ಅನುಭವಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾರು ಸಾಲವನ್ನು ತೆಗೆದುಕೊಳ್ಳುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 


COMMERCIAL BREAK
SCROLL TO CONTINUE READING

ಬಜೆಟ್‌ ಮೀರಿ ಹೋಗುವುದು : 
ಸಾಲ ಪಡೆಯುವುದು ಸುಲಭ.  ಸುಲಭವಾಗಿ ಸಾಲ ಸಿಗುತ್ತದೆ ಎನ್ನುವ ಕಾರಣಕ್ಕೆ ಅದೆಷ್ಟೋ ಜನ ಬಜೆಟ್ ಮೀರಿ ಸಾಲ ಪಡೆಯುತ್ತಾರೆ. ಹೀಗಾದಾಗ ಸಾಲ ಮರುಪಾವತಿ ವೇಳೆ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಮರುಪಾವತಿಯನ್ನು ಕೂಡಾ ಗಮನದಲ್ಲಿಟ್ಟುಕೊಂಡು ಸಾಲ ಪಡೆದುಕೊಳ್ಳಿ. 


ಇದನ್ನೂ ಓದಿ : Aadhaar Card Update: ಫ್ರೀ ರೇಷನ್ ಪಡೆಯುವವರಿಗೆ UIDAI ನೀಡಿದೆ ಗುಡ್ ನ್ಯೂಸ್


ಕ್ರೆಡಿಟ್ ಸ್ಕೋರ್  ಪರಿಶೀಲನೆ :
ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಕೈಗೆಟುಕುವ ಬಡ್ಡಿ ದರದಲ್ಲಿ ಕಾರು ಸಾಲವನ್ನು ಪಡೆಯಬಹುದು. ಹೀಗಾಗಿ ಕಾರ್ ಲೋನ್ ತೆಗೆದುಕೊಳ್ಳುವ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಬಹುದು. 


ದೀರ್ಘಾವಧಿಯ  ಸಾಲ :
ಹೆಚ್ಚು ಅವಧಿಗೆ ಸಾಲವನ್ನು ತೆಗೆದುಕೊಂಡರೆ, ಪ್ರತಿ ತಿಂಗಳು ಕಡಿಮೆ EMI ಪಾವತಿಸಬೇಕಾಗುತ್ತದೆ ಎನ್ನುವುದು ಸಾಮಾನ್ಯ ಲೆಕ್ಕಾಚಾರ. ಹೀಗಾದಾಗ EMI ಮೊತ್ತವು ಕಡಿಮೆಯಾಗುತ್ತದೆ ನಿಜ. ಆದರೆ ಈ ಕಾರಣದಿಂದಾಗಿ ಸಾಲಗಾರನು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಲದ ಅವಧಿಯ ಬಗ್ಗೆ  ಸಹ ಕಾಳಜಿ ವಹಿಸಬೇಕು.


ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಕುಸಿತ ಕಂಡ ಅಡಿಕೆ ಧಾರಣೆ..!


ಲೋನ್ ಕಂಪ್ಯಾರಿಸನ್ ನಿರ್ಲಕ್ಷ್ಯ : 
ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲಗಳ ಮೇಲೆ ಭಿನ್ನ ಭಿನ್ನ ರೂಪದಲ್ಲಿ  ಬಡ್ಡಿದರಗಳನ್ನು ವಿಧಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕಾರು ಸಾಲವನ್ನು ತೆಗೆದುಕೊಳ್ಳುವಾಗ, ಸಾಲದ ಮೇಲಿನ ಬಡ್ಡಿ ದರವನ್ನು ಹೋಲಿಕೆ ಮಾಡಿ ನೋಡಬೇಕು. ಸಾಲದ ಮೇಲಿನ ಬಡ್ಡಿ ದರವನ್ನು ಹೋಲಿಕೆ ಮಾಡದೇ ಹೋದರೆ ನಷ್ಟ ಅನುಭವಿಸಬೇಕಾಗುತ್ತದೆ. 


ನೋ ಡೌನ್ ಪೇಮೆಂಟ್ ಆಯ್ಕೆ :  
ಡೌನ್ ಪೇಮೆಂಟ್ ಮಾಡದೆಯೇ ಹೊಸ ಕಾರನ್ನು ಖರೀದಿಸುವ  ಆಯ್ಕೆಯನ್ನು ಎಲ್ಲರೂ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂದರೆ ಒಂದು ರೂಪಾಯಿಯನ್ನೂ ಕೊಡದೆ ಕಾರನ್ನು ಶೋರೂಮ್‌ನಿಂದ ಖರೀದಿಸುವುದು. ಝೀರೋ ಡೌನ್ ಪೇಮೆಂಟ್ ಅಂದರೆ ಭವಿಷ್ಯದ EMIಗಳಲ್ಲಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಇದರ ಪರಿಣಾಮ ಅಧಿಕ  ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.