)
New GST Rates 2025: ದೀಪಗಳ ಹಬ್ಬ ದೀಪಾವಳಿಗೂ ಮೊದಲು 'ಜಿಎಸ್ಟಿ ಪರಿಷ್ಕರಣೆ' ಜನಸಾಮಾನ್ಯರ ಬದುಕಿನಲ್ಲಿ ಹೊಸ ಬೆಳಕು ತಂದಿದೆ. ಜೆಎಸ್ಟಿ ದರ ಪರಿಷ್ಕರಣೆಯಿಂದ ಬೈಕ್ಗಳು, ಕಾರುಗಳ ಬೆಲೆಯೂ ಸಹ ಗಮನಾರ್ಹವಾಗಿ ಕಡಿಮೆಯಾಗಿದ್ದು ಸಾಮಾನ್ಯ ಜನತೆಗೆ ದೊಡ್ಡ ಪರಿಹಾರವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ದೇಶದ ಪ್ರಸಿದ್ಧ ಉದ್ಯಮಿ ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಸ್ವಾಗತಿಸಿದ್ದಾರೆ.
ಜೆಎಸ್ಟಿ ಹೊಸ ದರಗಳು:
ಸೆ.03ರಂದು ನಡೆದ 56ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್ಟಿ ಮಂಡಳಿಯು ಸರ್ಕಾರದ ಪ್ರಮುಖ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಜಿಎಸ್ಟಿ ಸ್ಲ್ಯಾಬ್ನಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿದೆ. ಪ್ರಸ್ತುತ, ಸರಕು ಮತ್ತು ಸೇವಾ ತೆರಿಗೆ ದರಗಳಲ್ಲಿ 12% ಮತ್ತು 28% ಜೆಎಸ್ಟಿ ದರಗಳನ್ನು ತೆಗೆದುಹಾಕಲಾಗಿದ್ದು, 5% ಮತ್ತು 18% ಜಿಎಸ್ಟಿ ದರಗಳನ್ನು ಮಾತ್ರ ಕಾಯ್ದುಕೊಳ್ಳಲಾಗಿದೆ. ಆಟೋ ವಲಯಕ್ಕೂ ಬಿಗ್ ಬೂಸ್ಟ್ ನೀಡಿರುವ ಕೇಂದ್ರ ಸರ್ಕಾರ ಕೆಲವು ವಿಭಾಗಗಳಲ್ಲಿ ಜಿಎಸ್ಟಿ ದರವನ್ನು 28% ನಿಂದ 18%ಗೆ ಇಳಿಕೆ ಮಾಡಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆ ಮೂಲಕ ಇದನ್ನು ಸ್ವಾಗತಿಸಿರುವ ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತೊಂದು ಬೇಡಿಕೆಯನ್ನು ಪ್ರಸ್ತುತಪಡಿಸಿದ್ದಾರೆ.
ಜಿಎಸ್ಟಿ ದರ ಪರಿಷ್ಕರಣೆಯನ್ನು ಆನಂದ್ ಮಹೀಂದ್ರ, "ನಾವು ಈಗ ಯುದ್ಧದಲ್ಲಿ ಸೇರಿಕೊಂಡಿದ್ದೇವೆ... ಹೆಚ್ಚು ವೇಗವಾಗಿ ಸುಧಾರಣೆಗಳು ಬಳಕೆ ಮತ್ತು ಹೂಡಿಕೆಯನ್ನು ಬಿಡುಗಡೆ ಮಾಡುವ ಖಚಿತವಾದ ಮಾರ್ಗವಾಗಿದೆ". ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಯು ಭಾರತದ ಆರ್ಥಿಕ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ದೊಡ್ಡ ಪ್ರಯಾಣದ ಆರಂಭವಾಗಿದೆ. "ಅವುಗಳು ಆರ್ಥಿಕತೆಯನ್ನು ವಿಸ್ತರಿಸುತ್ತವೆ ಮತ್ತು ಜಗತ್ತಿನಲ್ಲಿ ಭಾರತದ ಧ್ವನಿಯನ್ನು ವರ್ಧಿಸುತ್ತವೆ. ಆದರೆ ಸ್ವಾಮಿ ವಿವೇಕಾನಂದರ 'ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿ ತಲುಪುವವರೆಗೆ ನಿಲ್ಲಬೇಡಿ' ಎಂಬ ಉಪದೇಶವನ್ನು ನೆನಪಿಸಿಕೊಳ್ಳೋಣ ಎಂದು ಬರೆದಿರುವ ಅವರು ದಯವಿಟ್ಟು ಹೆಚ್ಚಿನ ಸುಧಾರಣೆಗಳು... ಎಂದು ಬರೆಯುತ್ತಾ ಸರ್ಕಾರದಿಂದ ಇನ್ನೂ ಹೆಚ್ಚಿನ ದರ ಕಡಿತದ ನಿರೀಕ್ಷೆಯ ಬಗ್ಗೆ ಮನವಿ ಮಾಡಿದ್ದಾರೆ.
We have now joined the battle…
More and faster reforms are the surest way to unleash consumption and investment.
Those, in turn, will expand the economy and amplify India’s voice in the world.But let’s remember the famous exhortation of Swami Vivekananda:
“Arise, awake, and… https://t.co/rDoRtjsCw1— anand mahindra (@anandmahindra) September 3, 2025
ಜಿಎಸ್ಟಿ ಹೊಸ ದರಗಳಿಂದ ಕೈಗುಟುವ ದರದಲ್ಲಿ ಲಭ್ಯವಾಗಲಿವೆ ವಾಹನಗಳು:
ಜಿಎಸ್ಟಿ ದರ ಪರಿಷ್ಕರಣೆಯಲ್ಲಿ ಕಾರು ವಿಭಾಗದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಈ ಬದಲಾವಣೆಯು ದೊಡ್ಡ ಸೆಡಾನ್ ಅಥವಾ ಎಸ್ಯುವಿಗಳನ್ನು ಖರೀದಿಸಲು ಯೋಚಿಸುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿ ಎಂತಲೇ ಹೇಳಲಾಗುತ್ತಿದೆ.
ಯಾವ ವಾಹನಗಳ ಬೆಲೆ ಎಷ್ಟು ಕಡಿಮೆ ಆಗಲಿದೆ?
>> ಸರಕು ಸಾಗಣೆಗೆ ಮೋಟಾರು ವಾಹನಗಳ ಜಿಎಸ್ಟಿ ದರ: 28% → 18%
>> ಮೋಟಾರ್ ಸೈಕಲ್ಗಳು (350cc ಮತ್ತು ಅದಕ್ಕಿಂತ ಕಡಿಮೆ): 28% → 18%.
>> ತ್ರಿಚಕ್ರ ವಾಹನಗಳು: 28% → 18%.
>> ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಎಲ್ಪಿಜಿ, ಸಿಎನ್ಜಿ ಕಾರುಗಳು (1200 ಸಿಸಿ ಮತ್ತು 4000 ಎಂಎಂ ವರೆಗೆ): 28% → 18%.
>> ಡೀಸೆಲ್ ಮತ್ತು ಡೀಸೆಲ್ ಹೈಬ್ರಿಡ್ ಕಾರುಗಳು (1500 ಸಿಸಿ ಮತ್ತು 4000 ಎಂಎಂ ವರೆಗೆ): 28% → 18% ಗೆ ಇಳಿಕೆಯಾಗಿದೆ.