ಯಾವುದೇ ರೈಡ್‌ ಬುಕ್ ಮಾಡದ ವ್ಯಕ್ತಿಗೆ‌ ₹4,66,000 ಶುಲ್ಕ ವಿಧಿಸಿದ ಉಬರ್;‌ ಇದು ಹೊಸ ರೀತಿಯ ಹಗರಣ!!

ಯಾವುದೇ ರೀತಿಯ ರೈಡ್‌ ಮಾಡದ ನನಗೆ ಈ ರೀತಿ ದುಬಾರಿ ಶುಲ್ಕ ವಿಧಿಸಿರುವುದು ಬೇಸರ ತರಿಸಿದೆ. ಈ ಹೊಸ ಹಗರಣದ ಜನರಲ್ಲಿ ಅರಿವು ಮೂಡಿಸಲು ನಾನು ಸೋಷಿಯಲ್‌ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಗ್ರಾಹಕರು ತಮ್ಮ ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

Written by - Puttaraj K Alur | Last Updated : Apr 28, 2025, 04:19 PM IST
  • ಉಬರ್‌ನಲ್ಲಿ ನಡೆಯುತ್ತಿದೆ ಹೊಸ ರೀತಿ ವಂಚನೆ
  • ನಿಮ್ಮ ಬಳಿಯು ಕಂಪನಿಯ ಉಬರ್‌ ಅಕೌಂಟ್‌ ಇದ್ದ ಎಚ್ಚರ
  • ಯಾವುದೇ ರೈಡ್‌ ಮಾಡದ ಗ್ರಾಹಕನಿಗೆ ₹4,66,000 ಶುಲ್ಕ
ಯಾವುದೇ ರೈಡ್‌ ಬುಕ್ ಮಾಡದ ವ್ಯಕ್ತಿಗೆ‌ ₹4,66,000 ಶುಲ್ಕ ವಿಧಿಸಿದ ಉಬರ್;‌ ಇದು ಹೊಸ ರೀತಿಯ ಹಗರಣ!!

Uber Scam: ಯಾವುದೇ ರೈಡ್‌ ಬುಕ್‌ ಮಾಡದ ಗ್ರಾಹಕರೊಬ್ಬರಿಗೆ ಉಬರ್‌ (Uber) ಬರೋಬ್ಬರಿ ₹4,66,000 ಶುಲ್ಕ ವಿಧಿಸಿರುವ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಶುಲ್ಕವನ್ನ ಕಂಡು ವ್ಯಕ್ತಿ ಶಾಕ್‌ ಆಗಿದ್ದಾರೆ. ಈಗ ಹೊಸ ರೀತಿಯ ಹಗರಣ ನಡೆಯುತ್ತಿದೆ. ವಂಚಕರು ನಿಮಗೆ ಗೊತ್ತಿಲ್ಲದೆಯೇ ನಿಮ್ಮ ಮೊಬೈಲ್‌ ಸಂಖ್ಯೆಯನ್ನ ನಕಲು ಮಾಡಿ ಉಬರ್‌ ಐಡಿ ಕ್ರಿಯೇಟ್‌ ಮಾಡಿ UBERನಲ್ಲಿ ರೈಡ್‌ಗಳನ್ನು ಬುಕ್ ಮಾಡಲಾಗುತ್ತಿದೆ. ಕೇವಲ 2 ನಿಮಿಷಗಳ ಕಾಲ ನಡೆಯಬಹುದಾದ ರೈಡ್‌ಗೆ ಹೆಚ್ಚಿನ ಮೊತ್ತವನ್ನು ವಿಧಿಸಲಾಗುತ್ತಿದೆ. ನಾವೆಲ್ಲರೂ ವಾಸಿಸುತ್ತಿರುವ ವೇಗದ ಡಿಜಿಟಲೀಕರಣಗೊಂಡ ಈ ಸಮಾಜದಲ್ಲಿ, ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆ ಸೇರಿದಂತೆ ಯಾವುದೂ ಖಾಸಗಿಯಾಗಿ ಉಳಿಯುತ್ತಿಲ್ಲ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಕರು ಯಾವುದೇ ಸಮಯದಲ್ಲಿ ಎಗರಿಸಬಹುದು. ಹೀಗಾಗಿ ಬಹಳ ಎಚ್ಚರಿಕೆ ವಹಿಸುವುದು ಸೂಕ್ತ.
ಕಹಿ ಅನುಭವ ಬಿಚ್ಚಿಟ್ಟ ಗ್ರಾಹಕ!

Add Zee News as a Preferred Source

ಉಬರ್‌ ವಿಧಿಸಿದ ದುಬಾರಿ ಶುಲ್ಕದಿಂದ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರು ತಮ್ಮ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ. ʼಈ ವಾರಾಂತ್ಯವು ನನಗೆ ತುಂಬಾ ಕಷ್ಟಕರವಾಗಿತ್ತು. ಆಟೋ-ಟ್ಯಾಕ್ಸಿ ಬುಕ್ಕಿಂಗ್ ಆ್ಯಪ್ UBERನಿಂದ ಶನಿವಾರ ಬೆಳಗ್ಗೆ 4.30ಕ್ಕೆ ನನ್ನ ಮೊಬೈಲ್‌ಗೆ ಉಬರ್‌ ರೈಡ್‌ನ ಸಂದೇಶವೊಂದು ಬಂದಿತ್ತು. ನಾನು ಇನ್ನೂ ನಿದ್ರಿಸುತ್ತಿದ್ದೆ, ಆದರೆ ಬಂದಿರುವ ಸಂದೇಶವನ್ನ ನಿದ್ರೆಗಣ್ಣಿನಿಂದಲೇ ಓದಿದೆ. ಆ ಸಂದೇಶವನ್ನ ಕಂಡು ನನಗೆ ಗೊಂದಲವುಂಟಾಯಿತು. ನಾನು ಏನಾದರೂ ತಪ್ಪಾಗಿ ಉಬರ್‌ನಲ್ಲಿ ರೈಡ್‌ ಬುಕ್‌ ಮಡಿದ್ದೇನೆಯೇ ಅಂತಾ ಯೋಚಿಸುತ್ತಾ ʼಪಿನ್ʼ ಮೇಲೆ ಟ್ಯಾಪ್‌ ಮಾಡಿದೆ. ಸಂದೇಶವು ನನ್ನನ್ನು ಉಬರ್‌ ಲಾಗಿನ್‌ ಪುಟಕ್ಕೆ ಮರುನಿರ್ದೇಶಿಸಿ ನನ್ನ ಫೋನ್‌ ಸಂಖ್ಯೆಯನ್ನ ಲಾಗಿನ್‌ ಮಾಡಲು ಕೇಳಿತು. ಅರ್ಧ ನಿದ್ದೆಯಲ್ಲಿಯೇ ನಾನು ಸಂಖ್ಯೆಯನ್ನ ನಮೂದಿಸಿ ಫೋನ್‌ ಆಫ್‌ ಮಾಡಿ ಮತ್ತೆ ನಿದ್ರೆಗೆ ಜಾರಿದೆ.

ಇದನ್ನೂ ಓದಿ: ಲಾಭಕ್ಕಾಗಿ ಅಲ್ಲ, ಬದಲಾಗಿ ಸೇವೆಗಾಗಿ ಗುಲಾಬ್ ಶರ್ಬತ್ ಬಿಡುಗಡೆ ಮಾಡಿದ ಪತಂಜಲಿ : ಆರೋಗ್ಯ ಸಂಜೀವಿನಿ ಈ ಪಾನೀಯ

ಕೆಲವು ಗಂಟೆಗಳ ನಂತರ ಬೆಳಗ್ಗೆ 11 ಗಂಟೆಯ ಸುಮಾರಿಗೆ UBER ಚಾಲಕನಿಂದ ನನಗೆ ಕರೆ ಬಂತು.. ಪಂಜಾಬ್‌ಗೆ ನನ್ನ ಇಂಟರ್‌ಸಿಟಿ ಸವಾರಿ ಬುಕ್ ಆಗಿದ್ದು, ತಾನು ಪಿಕ್-ಅಪ್ ಸ್ಥಳದಲ್ಲಿ ಕಾಯುತ್ತಿದ್ದೇನೆಂದು ಹೇಳಿದರು. ಈ ಕರೆಯಿಂದ ಗೊಂದಲಕ್ಕೊಳಗಾದ ನಾನು, ಯಾವುದೇ ರೈಡ್‌ ಬುಕ್ ಮಾಡಿಲ್ಲವೆಂದು ತಿಳಿಸಿದೆ. ಆದರೆ ನನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ರೈಡ್‌ ಬುಕ್‌ ಆಗಿತ್ತು. ಅದು ಹೇಗೆ ಬುಕ್‌ ಆಗಿತ್ತು ಅಂತಾ ನನಗೂ ತಿಳಿದಿರಲಿಲ್ಲ.  

ಶನಿವಾರ ಬೆಳಗಿನ ಆ ಕರೆಯ ನಂತರ ವಾರಾಂತ್ಯದಲ್ಲಿ ನನಗೆ ಕನಿಷ್ಠ 40 ಕರೆಗಳು ಬಂದವು. ಕೆಲವು ಕರೆಗಳು ರಾತ್ರಿ 1.30 ಅಥವಾ 2.30ಕ್ಕೆ ಬಂದರೆ, ಕೆಲವು ಬೆಳಗ್ಗೆ 5 ಗಂಟೆಗೆ ಬಂದವು. 40 ಕರೆಗಳಲ್ಲಿ ನಾನು ಕನಿಷ್ಠ 10 ಕರೆಗಳಿಗೆ ಉತ್ತರಿಸಿದೆ. ನಾನು ಯಾವುದೇ ರೈಡ್ ಬುಕ್ ಮಾಡಿಲ್ಲ ಅಂತಾ ಚಾಲಕರಿಗೆ ನಾನು ತಿಳಿಸಿದ್ದೆ. ಕೆಲವರು ಓಕೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ನೀವೇ ಬುಕ್‌ ಮಾಡಿ ಈ ರೀತಿ ಏಕೆ ಮಾಡ್ತಾ ಇದ್ದೀರಿ ಅಂತಾ ಗದರಿಸಿದ್ದರು. ಚಾಲಕರಿಂದ ನಿರಂತರವಾಗಿ ಕರೆ ಬರುತ್ತಿದ್ದ ಕಾರಣ ನಾನು ಅಪ್ಲಿಕೇಷನ್‌ ಅನ್‌ಇನ್‌ಸ್ಟಾಲ್‌ ಮಾಡಲು ಪ್ರಯತ್ನಿಸಿದೆ. ಆದರೆ ಅದನ್ನ ಅನ್‌ಇನ್‌ಸ್ಟಾಲ್‌ ಮಾಡಲು ಸಾಧ್ಯವಾಗಲಿಲ್ಲʼವೆಂದು ಹೇಳಿದ್ದಾರೆ. 

ಇದನ್ನೂ ಓದಿ: Akshaya Tritiya: 2014 ರಲ್ಲಿ ಅಕ್ಷಯ ತೃತೀಯದಂದು ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ..? ಅಬ್ಬಬ್ಬಾ.. ಹತ್ತು ವರ್ಷಗಳಲ್ಲಿ ಆಭರಣ ಬೆಲೆಯ ಮೇಲೆ ಏರಿಕೆಯಾಗಿದ್ದು ಇಷ್ಟೊಂದಾ..?

ಯಾವುದೇ ರೈಡ್‌ ಮಾಡದಿದ್ದರೂ 4.6 ಲಕ್ಷ ರೂ. ಶುಲ್ಕ!

ʼಒಂದು ನನ್ನ ಕಚೇರಿಯ ನಿರ್ವಾಹಕರಿಂದ ನನಗೆ ಕರೆ ಬಂತು. UBERನಲ್ಲಿ ನನ್ನ ಕಾರ್ಪೊರೇಟ್ ಖಾತೆಗೆ 4.6 ಲಕ್ಷ ರೂ. ಶುಲ್ಕ ವಿಧಿಸಲಾಗಿದೆ ಎಂದು ಅವರು ಹೇಳಿದರು. ಈ ವಿಷಯ ತಿಳಿದು ನನಗೆ ಶಾಕ್‌ ಉಂಟಾಗಿತ್ತು. ಅಂದಹಾಗೆ 2018ರಲ್ಲಿ ನನ್ನ UBER ಅಪ್ಲಿಕೇಶನ್‌ಗೆ ನನ್ನ ಕಂಪನಿಯ ಖಾತೆಯನ್ನು ಲಿಂಕ್ ಮಾಡಲಾಗಿತ್ತು. ನಾನು ಅಧಿಕೃತ ಕೆಲಸಕ್ಕೆ ಹೋಗಬೇಕಾದಾಗ ಮಾತ್ರ ಆ ಖಾತೆಯನ್ನು ಬಳಸುತ್ತಿದ್ದೆ. ಕೋವಿಡ್ ಸಾಂಕ್ರಾಮಿಕ ನಂತರ ನಾನು ಆ ಖಾತೆಯನ್ನ ಬಳಸುವುದನ್ನ ನಿಲ್ಲಿಸಿದ್ದೆ. ಆದರೆ ನನ್ನ ಅಪ್ಲಿಕೇಶನ್‌ನಿಂದ ಆಕೆ ಅಕೌಂಟ್‌ಅನ್ನ ತೆಗೆದಿರಲಿಲ್ಲ. ಕಳೆದ 2 ವರ್ಷಗಳಿಂದ ಶನಿವಾರದವರೆಗೆ ಕಂಪನಿಗೆ ಯಾವುದೇ ಟ್ರಿಪ್‌ನ ಬಿಲ್ ಮಾಡಿಲ್ಲ. ಆದರೆ ಕೆಲವೇ ದಿನಗಳ ಅಂತರದಲ್ಲಿ ಹೆಚ್ಚಿನ ಟ್ರಿಪ್‌ಗಳನ್ನು ಬುಕ್ ಮಾಡಲಾಗಿತ್ತು. 2 ಕಿ.ಮೀ ಅಥವಾ ಅದಕ್ಕಿಂತ ಕಡಿಮೆ ದೂರಕ್ಕೆ ಸುಮಾರು 4,000 ರಿಂದ 8,000 ರೂ.ಗಳಷ್ಟು ದುಬಾರಿ ಶುಲ್ಕವನ್ನ ವಿಧಿಸಲಾಗಿತ್ತು. ಕಂಪನಿಯು ಈಗ ನನ್ನ ಮೊಬೈಲ್‌ ಸಂಖ್ಯೆಯನ್ನ ಅಪ್ಲಿಕೇಷನ್‌ನಲ್ಲಿ ತೆಗೆದುಹಾಕಿದೆ. ಆದರೆ ಕ್ಯಾಬ್‌ ಕಂಪನಿಯಿಂದ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲʼವೆಂದು ಗ್ರಾಹಕರು ತಿಳಿಸಿದ್ದಾರೆ. 

ಯಾವುದೇ ರೀತಿಯ ರೈಡ್‌ ಮಾಡದ ನನಗೆ ಈ ರೀತಿ ದುಬಾರಿ ಶುಲ್ಕವನ್ನು ವಿಧಿಸಿರುವುದು ಬೇಸರ ತರಿಸಿದೆ. ಈ ಹೊಸ ಹಗರಣದ ಜನರಲ್ಲಿ ಅರಿವು ಮೂಡಿಸಲು ನಾನು ಸೋಷಿಯಲ್‌ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ. ಯಾರೇ ಆಗಲಿ ಕಂಪನಿಯ ಖಾತೆಯನ್ನ ಹೊಂದಿದ್ದರೆ ಒಂದು ಸರಿ ಪರಿಶೀಲಿಸಿ. ಏಕೆಂದರೆ ನಿಮ್ಮ ಅಕೌಂಟ್‌ ಮೂಲಕವೂ ಫೇಕ್‌ ರೈಡ್‌ಗಳು ಬುಕ್‌ ಆಗಿ ದುಬಾರಿ ಶುಲ್ಕ ವಿಧಿಸುತ್ತಿರಬಹುದು. ಅದೃಷ್ಟವಶಾತ್, ಕಂಪನಿಯ ಖಾತೆಯಿಂದ ಅಥವಾ ನನ್ನ ಖಾತೆಯಿಂದ ಯಾವುದೇ ಹಣ ಡೆಬಿಟ್ ಆಗಿಲ್ಲ. ಈಗಾಗಲೇ ನಾನು ಈ ಬಗ್ಗೆ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದೇನೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಗ್ರಾಹಕರು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News