ಲೈಸೆನ್ಸ್, ರಿಜಿಸ್ಟ್ರೇಶನ್ ಬೇಡವೇ ಬೇಡ: ಕೇವಲ ₹33,893 ಬೆಲೆಯ ಓಲಾ GIG ಎಲೆಕ್ಟ್ರಿಕ್ ಸ್ಕೂಟರ್

Ola GIG electric scooter: ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ, RTO ನೋಂದಣಿ ಬೇಡವೇ ಬೇಡ...  ಓಲಾ ಪರಿಚಯಿಸುತ್ತಿದೆ ಹೊಸ GIG ಎಲೆಕ್ಟ್ರಿಕ್ ಸ್ಕೂಟರ್. ಇದರ ಬೆಲೆ ಕೇವಲ 33,983 ರೂಪಾಯಿ ಮಾತ್ರ. 

Written by - Puttaraj K Alur | Last Updated : Apr 22, 2025, 09:33 PM IST
  • ಅದ್ಭುತ ವೈಶಿಷ್ಟ್ಯಗಳನ್ನ ಹೊಂದಿರುವ ಈ ಸ್ಕೂಟರ್‌ಗೆ ಲೈಸೆನ್ಸ್, ರಿಜಿಸ್ಟ್ರೇಶನ್ ಬೇಡ
  • ಲೈಸೆನ್ಸ್ ಬೇಡ, ಉತ್ತಮ ವೈಶಿಷ್ಟ್ಯಗಳು ಇರುವುದರಿಂದ ಓಲಾ ಕಿಕ್ ಒಳ್ಳೆಯ ಆಯ್ಕೆ
  • ಕೇವಲ ₹39,999ಕ್ಕೆ ಓಲಾ ಗಿಗ್ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿರಿ
ಲೈಸೆನ್ಸ್, ರಿಜಿಸ್ಟ್ರೇಶನ್ ಬೇಡವೇ ಬೇಡ: ಕೇವಲ ₹33,893 ಬೆಲೆಯ ಓಲಾ GIG ಎಲೆಕ್ಟ್ರಿಕ್ ಸ್ಕೂಟರ್

OLA GIG: ಕೇವಲ ₹39,999ಕ್ಕೆ ಓಲಾ ಗಿಗ್ ಎಂಬ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಸರಳ ಮತ್ತು ಕಡಿಮೆ ವೆಚ್ಚದ, ಲೈಸೆನ್ಸ್ ಮುಕ್ತ ವಾಹನ ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ. ಸರ್ಕಾರಿ ಸಬ್ಸಿಡಿ ಸಿಕ್ಕರೆ ಇದು ನಿಮಗೆ ಕೇವಲ ₹33,893ಕ್ಕೆ ಸಿಗುತ್ತದೆ. ಈ ಸ್ಕೂಟರ್‌ಗೆ ಯಾವುದೇ ರೀತಿಯ ನೋಂದಣಿ ಅಥವಾ ಲೈಸೆನ್ಸ್ ಬೇಕಿಲ್ಲ. ಸ್ಕೂಲ್-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಇದು ಉತ್ತಮ ಆಯ್ಕೆಯಾಗಿದೆ. 250W ಮೋಟಾರ್, 1.5 kWh ಬ್ಯಾಟರಿ ಇದ್ದು, ಒಂದು ಚಾರ್ಜ್‌ಗೆ 112 ಕಿ.ಮೀ. ಓಡುತ್ತದೆ. ಇದರ ಗರಿಷ್ಠ ವೇಗ 25 ಕಿ.ಮೀ./ಗಂಟೆ ಮತ್ತು ಕೇವಲ 4-5 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ.

Add Zee News as a Preferred Source

ಓಲಾ ಗಿಗ್ ಲೈಸೆನ್ಸ್ ಅಥವಾ ನೋಂದಣಿ ಬೇಕಿಲ್ಲ. ಕಡಿಮೆ ವೇಗದ ವಾಹನವಾದ್ದರಿಂದ RTOಗೆ ಹೋಗುವ ಅಗತ್ಯವಿರಲ್ಲ. ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಇದು ಸೂಕ್ತವಾಗಿದ್ದು, ಸುಲಭವಾಗಿ ಇದನ್ನ ಬಳಸಬಹುದು. ಆರಾಮದಾಯಕ ವಿನ್ಯಾಸವನ್ನು ಹೊಂದಿರುವ ಈ ಸ್ಕೂಟರ್ ಕಡಿಮೆ ನಿರ್ವಹಣೆ ವೆಚ್ಚ ಮತ್ತು ದಿನನಿತ್ಯದ ಪ್ರಯಾಣಕ್ಕೆ ಉತ್ತಮವಾಗಿದೆ. ಈ ಸ್ಕೂಟರ್‌ನಲ್ಲಿ ಟ್ಯೂಬ್‌ಲೆಸ್ ಟೈರ್‌ಗಳಿವೆ. ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದೆ. ಡಿಜಿಟಲ್ ಸ್ಪೀಡೋಮೀಟರ್, ಪುಶ್-ಬಟನ್ ಸ್ಟಾರ್ಟ್ ಇದೆ. ಮೊಬೈಲ್ ಚಾರ್ಜಿಂಗ್ ಪೋರ್ಟ್, ಆಂಟಿ-ಥೆಫ್ಟ್ ಅಲಾರ್ಮ್, ಸೀಟ್ ಕೆಳಗೆ ಸ್ಟೋರೇಜ್ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲಕ್ಷ ದಾಟಿದ ಬಂಗಾರದ ಮೌಲ್ಯ..! ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ದರ

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ದಿನನಿತ್ಯ ಪ್ರಯಾಣಿಕರು, ಡೆಲಿವರಿ ಮಾಡುವವರು, ಎರಡನೇ ವಾಹನ ಬಯಸುವವರಿಗೆ ಓಲಾ ಗಿಗ್ ಸೂಕ್ತ. ನಗರ ಪ್ರದೇಶದ ಟ್ರಾಫಿಕ್ ನಡುವೆ ಗ್ರಾಮೀಣ ಪ್ರದೇಶದಲ್ಲಿ ಈ ಸ್ಕೂಟರ್‌ಅನ್ನ ಸುಲಭಾಗಿ ಬಳಕೆ ಮಾಡಬಹುದು. 

ಈ ಸ್ಕೂಟರ್‌ ಬೆಲೆ ₹39,999 ಇದ್ದು, ಸಬ್ಸಿಡಿ ಸಿಕ್ಕರೆ ಕೇವಲ ₹33,893ಗೆ ಇದು ನಿಮ್ಮದಾಗಲಿದೆ. ನೀವು ಓಲಾ ವೆಬ್‌ಸೈಟ್‌ನಲ್ಲಿಯೂ ಬುಕಿಂಗ್ ಮಾಡಬಹುದು. EMI ಆಯ್ಕೆಗಳೂ ಇದ್ದು, ನೀವು ಅತೀ ಕಡಿಮೆ ಬೆಲೆಯ ಸ್ಕೂಟರ್ ನೋಡುತ್ತಿದ್ದರೆ ಓಲಾದ ಹೊಸ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. 

ಇದನ್ನೂ ಓದಿ: EPFO ಮಹತ್ವದ ಬದಲಾವಣೆ, ಪಿ‌ಎಫ್ ಪಡೆಯುವವರಿಗೆ ಗುಡ್ ನ್ಯೂಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News