ಸಮಾಜದ ಪ್ರಮುಖ ಸಮಸ್ಯೆಗಳ ಮೇಲೆ ಪತಂಜಲಿಯ CSR ಗಮನ : ಸಾಮಾಜಿಕ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಕಂಪನಿ

ಪತಂಜಲಿ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಚಟುವಟಿಕೆಗಳ ಮೂಲಕ ಜನರ ಆರೋಗ್ಯ ಸುಧಾರಣೆ, ಹಳ್ಳಿಗಳನ್ನು ಅಭಿವೃದ್ಧಿಪಡಿಸುವುದು, ಪರಿಸರವನ್ನು ಉಳಿಸುವುದು ಮತ್ತು ಶಿಕ್ಷಣವನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ.

Written by - Ranjitha R K | Last Updated : Apr 7, 2025, 01:09 PM IST
  • ಪತಂಜಲಿ ಆಯುರ್ವೇದ ಲಿಮಿಟೆಡ್, ಭಾರತದ ಜನಪ್ರಿಯ ಕಂಪನಿಯಾಗಿದೆ.
  • ಆರೋಗ್ಯ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ.
  • ಪತಂಜಲಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ
ಸಮಾಜದ ಪ್ರಮುಖ ಸಮಸ್ಯೆಗಳ ಮೇಲೆ ಪತಂಜಲಿಯ CSR ಗಮನ : ಸಾಮಾಜಿಕ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಕಂಪನಿ

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಪ್ರಾರಂಭಿಸಿದ ಪತಂಜಲಿ ಆಯುರ್ವೇದ ಲಿಮಿಟೆಡ್, ಭಾರತದ ಜನಪ್ರಿಯ ಕಂಪನಿಯಾಗಿದೆ.ಇದು ಆರೋಗ್ಯ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಆಯುರ್ವೇದ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಈ ಕಂಪನಿಯು ಹೆಸರುವಾಸಿಯಾಗಿದೆ. ಇಷ್ಟು ಮಾತ್ರವಲ್ಲದೆ ಸಮಾಜದ ಕಲ್ಯಾಣಕ್ಕಾಗಿಯೂ ಈ ಕಂಪನಿ ಕೆಲಸ ಮಾಡುತ್ತದೆ. ಪತಂಜಲಿ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಚಟುವಟಿಕೆಗಳ ಮೂಲಕ ಜನರ ಆರೋಗ್ಯ ಸುಧಾರಣೆ, ಹಳ್ಳಿಗಳನ್ನು ಅಭಿವೃದ್ಧಿಪಡಿಸುವುದು, ಪರಿಸರವನ್ನು ಉಳಿಸುವುದು ಮತ್ತು ಶಿಕ್ಷಣವನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ.

Add Zee News as a Preferred Source

ಪತಂಜಲಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) :
ಪತಂಜಲಿಯ CSR ವಿಧಾನವು 'ಆರೋಗ್ಯ ಮತ್ತು ಸ್ವಾಸ್ಥ್ಯದ ಮೂಲಕ ಸಮಾಜವನ್ನು ಪರಿವರ್ತಿಸುವ' ಧ್ಯೇಯವನ್ನು ಹೊಂದಿದೆ. ಇದರ ಉಪಕ್ರಮಗಳು ಬಡವರು ಮತ್ತು ನಿರ್ಗತಿಕರ ಸಬಲೀಕರಣ, ಪರಿಸರವನ್ನು ಉಳಿಸುವುದು ಮತ್ತು ಭಾರತದ ಪ್ರಾಚೀನ ಸಂಪ್ರದಾಯಗಳಾದ ಆಯುರ್ವೇದ ಮತ್ತು ಯೋಗವನ್ನು ಸಂರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಕಂಪನಿಯು ತನ್ನ ಸಾಮಾಜಿಕ ಸೇವಾ ಕಾರ್ಯವನ್ನು ತನ್ನ ವ್ಯವಹಾರದೊಂದಿಗೆ ಸಂಯೋಜಿಸುತ್ತದೆ. ಈ ಮೂಲಕ ತನ್ನ ಕೆಲಸ ಕಾರ್ಯಗಳಿಂದ ಸಮಾಜ ಮತ್ತು ಪರಿಸರಕ್ಕೆ ಪ್ರಯೋಜನವನ್ನು ನೀಡುತ್ತವೆ.

ಇದನ್ನೂ ಓದಿ : ತೆರಿಗೆ ಇಲ್ಲದೆ ಕಡಿಮೆ ಬೆಲೆಗೆ ಇಲ್ಲಿಂದ ಚಿನ್ನ ಖರೀದಿಸಬಹುದು!ಬೆಲೆಯೂ ಅಗ್ಗ, ಬಂಗಾರವೂ ಶುದ್ದ

ಭಾರತದಲ್ಲಿ ಪತಂಜಲಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳು :
1. ಆಯುರ್ವೇದ ಮತ್ತು ಯೋಗವನ್ನು ಉತ್ತೇಜಿಸುವುದು

ಪತಂಜಲಿ ಆಯುರ್ವೇದ ಔಷಧ ಮತ್ತು ಯೋಗವನ್ನು ಉತ್ತೇಜಿಸುವ ಮತ್ತು ಜನರ ಆರೋಗ್ಯ ಕಾಪಾಡುವತ್ತ ವಿಶೇಷ ಗಮನ ಹರಿಸುವ ದೊಡ್ಡ ಕಂಪನಿಯಾಗಿದೆ.

ಉಚಿತ ಯೋಗ ಶಿಬಿರ : ಬಾಬಾ ರಾಮದೇವ್ ಭಾರತದಾದ್ಯಂತ ಉಚಿತ ಯೋಗ ಶಿಬಿರಗಳನ್ನು ಆಯೋಜಿಸುತ್ತಾರೆ. ಅಲ್ಲಿ ಬಂದು ಜನರು ಯೋಗ ಕಲಿಯುವ ಮೂಲಕ ತಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಸಿಕೊಳ್ಳುತ್ತಾರೆ. ಲಕ್ಷಾಂತರ ಜನರು ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ  ಯೋಗ ಶಿಬಿರದ ಪ್ರಯೋಜನಗಳನ್ನು ಪಡೆಯುತ್ತಾರೆ. 

ಆಯುರ್ವೇದ ಸಂಶೋಧನಾ ಕೇಂದ್ರ : ಪತಂಜಲಿಯು ಹರಿದ್ವಾರದಲ್ಲಿ ಒಂದು ದೊಡ್ಡ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಅಲ್ಲಿ ಆಯುರ್ವೇದ ಔಷಧಗಳು ಮತ್ತು ಉತ್ಪನ್ನಗಳನ್ನು ಪರೀಕ್ಷಿಸಲಾಗುತ್ತದೆ.  ಈ ಮೂಲಕ ತಾವು ತಯಾರಿಸಿರುವ ಉತ್ಪನ್ನಗಳು ಸರಿಯಾಗಿ ಕಾರ್ಯ ನಿರ್ವಹೊಇಸುತ್ತವೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ.
 
2. ಗ್ರಾಮಗಳ ಅಭಿವೃದ್ಧಿ ಮತ್ತು ರೈತರಿಗೆ ಸಹಾಯ :
ರೈತರು ಮತ್ತು ಹಳ್ಳಿಗಳ ಪ್ರಗತಿಯು ಪತಂಜಲಿಯ ಸಾಮಾಜಿಕ ಸೇವೆಯ ದೊಡ್ಡ ಭಾಗವಾಗಿದೆ.

ಸಾವಯವ ಕೃಷಿಯನ್ನು ಉತ್ತೇಜಿಸುವುದು : ರೈತರು ನೈಸರ್ಗಿಕ ಕೃಷಿ ವಿಧಾನಗಳನ್ನು ಅನುಸರಿಸುವುದನ್ನು ಅಭ್ಯಾಸ ಮಾಡಲು ಪತಂಜಲಿ ರೈತರನ್ನು ಪ್ರೇರೇಪಿಸುತ್ತದೆ.ಅವರಿಗೆ ತರಬೇತಿ, ಉತ್ತಮ ಬೀಜಗಳು ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವುದರ ಜೊತೆಗೆ ಬೆಳೆಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Explainer: ಇಂದಿನ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ಏಕೆ, ಹೇಗೆ? ಒಂದು ಸಂಪೂರ್ಣ ವಿಶ್ಲೇಷಣೆ

ಉದ್ಯೋಗಾವಕಾಶಗಳು : ಪತಂಜಲಿ ಹಳ್ಳಿಗಳಲ್ಲಿ ಕಾರ್ಖಾನೆಗಳು ಮತ್ತು ಉತ್ಪಾದನಾ ಕೇಂದ್ರಗಳನ್ನು ತೆರೆಯುವ ಮೂಲಕ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತದೆ. ಇದರಿಂದ ಗ್ರಾಮದ ಆರ್ಥಿಕ ಸ್ಥಿತಿಯನ್ನು ಬಲಪಡಿಸಬಹುದು.

ಗಿಡಮೂಲಿಕೆ ಕೃಷಿ ಉಪಕ್ರಮ : ಪತಂಜಲಿ ರೈತರಿಗೆ ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವ ವಿಧಾನವನ್ನು ಕಲಿಸುತ್ತದೆ. ಇದರಿಂದಾಗಿ ಅವರ ಆದಾಯ ಹೆಚ್ಚಾಗುತ್ತದೆ. ಪತಂಜಲಿ ಉತ್ತಮ ಗುಣಮಟ್ಟದ ಗಿಡಮೂಲಿಕೆ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. 

3. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ :
ಪತಂಜಲಿ ವಿಶೇಷವಾಗಿ ಉತ್ತಮ ಶಿಕ್ಷಣವನ್ನು ಒದಗಿಸುವುದು ಮತ್ತು ಅಗತ್ಯವಿರುವ ಜನರಿಗೆ ಹೊಸ ಕೌಶಲ್ಯಗಳನ್ನು ಕಲಿಸುವುದರತ್ತ ಗಮನ ಹರಿಸುತ್ತದೆ. 

ಆಚಾರ್ಯಕುಲಂ ಶಾಲೆ : ಇದು ಪತಂಜಲಿಯ ಶಾಲೆಯಾಗಿದ್ದು, ಇಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ವೈದಿಕ ಜ್ಞಾನ, ಯೋಗ ಮತ್ತು ನೈತಿಕ ಶಿಕ್ಷಣವನ್ನು ನೀಡಲಾಗುತ್ತದೆ. ಇಲ್ಲಿ ಮಕ್ಕಳು ಅಧ್ಯಯನದ ಜೊತೆಗೆ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ. 

ಪತಂಜಲಿ ಗುರುಕುಲ : ಈ ಸಂಸ್ಥೆಗಳ ಉದ್ದೇಶ ಪ್ರಾಚೀನ ಗುರುಕುಲ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವುದು. ವಿದ್ಯಾರ್ಥಿಗಳಿಗೆ ಆಧುನಿಕ ಮತ್ತು ಸಾಂಪ್ರದಾಯಿಕ ಶಿಕ್ಷಣ ಎರಡನ್ನೂ ನೀಡುವ ಸ್ಥಳ.

ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು : ಪತಂಜಲಿ ಮಕ್ಕಳಿಗೆ ಆಹಾರ ಸಂಸ್ಕರಣೆ, ಆಯುರ್ವೇದ ಮತ್ತು ಯೋಗದಂತಹ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡುತ್ತದೆ, ಇದರಿಂದ ಅವರು ಉತ್ತಮ ಉದ್ಯೋಗಗಳನ್ನು ಪಡೆಯಬಹುದು ಅಥವಾ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು.

4. ಆರೋಗ್ಯ ರಕ್ಷಣೆ ಮತ್ತು ಸ್ವಾಸ್ಥ್ಯ :
ಪತಂಜಲಿ ಸಂಸ್ಥೆಯು ಅಗತ್ಯವಿರುವ ಜನರಿಗೆ ಅಗ್ಗದ ಮತ್ತು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಹೆಚ್ಚಿನ ಗಮನ ಹರಿಸುತ್ತದೆ.

ಉಚಿತ ಆರೋಗ್ಯ ತಪಾಸಣೆ : ಪತಂಜಲಿ ಆರ್ಥಿಕವಾಗಿ ದುರ್ಬಲರು ಮತ್ತು ನಿರ್ಗತಿಕರಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ.ಅಲ್ಲಿ ಅವರು ವೈದ್ಯರ ಸಲಹೆ ಮತ್ತು ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಾರೆ.

ಕಡಿಮೆ ದರದಲ್ಲಿ ಆಯುರ್ವೇದ ಔಷಧಿಗಳು : ಪತಂಜಲಿ ತನ್ನ ಆಯುರ್ವೇದ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಹೆಚ್ಚಿನ ಗಮನ ಹರಿಸುತ್ತದೆ.  ಇದರಿಂದಾಗಿ ಸಾಮಾನ್ಯ ಜನರು ಸಹ ಅವುಗಳನ್ನು ಸುಲಭವಾಗಿ ಬಳಸಬಹುದು.

ಆಸ್ಪತ್ರೆ : ಪತಂಜಲಿಯು ಆಯುರ್ವೇದ ಮತ್ತು ಅಲೋಪತಿ ಚಿಕಿತ್ಸೆಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಆಸ್ಪತ್ರೆಗಳನ್ನು ನಡೆಸುತ್ತಿದೆ. 

ಪತಂಜಲಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಆಧರಿಸಿವೆ. ಕಂಪನಿಯು ಆರೋಗ್ಯ, ಶಿಕ್ಷಣ ಮತ್ತು ಗ್ರಾಮಗಳ ಅಭಿವೃದ್ಧಿಯ ಸುಧಾರಣೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಇದರಿಂದಾಗಿ ದೇಶದ ಅಭಿವೃದ್ಧಿಯ ಮೇಲೆ ಉತ್ತಮ ಪರಿಣಾಮ ಬೀರಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News