ಲಾಭಕ್ಕಾಗಿ ಅಲ್ಲ, ಬದಲಾಗಿ ಸೇವೆಗಾಗಿ ಗುಲಾಬ್ ಶರ್ಬತ್ ಬಿಡುಗಡೆ ಮಾಡಿದ ಪತಂಜಲಿ : ಆರೋಗ್ಯ ಸಂಜೀವಿನಿ ಈ ಪಾನೀಯ

ಪತಂಜಲಿ  ಗುಲಾಬಿ ಸಿರಪ್, ಖುಸ್ ಮತ್ತು ಬೇಲ್ ಸಿರಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸಿರಪ್ ಅನ್ನು ಯಾವುದೇ ಲಾಭದ ಉದ್ದೇಶದಿಂದ ಬಿಡುಗಡೆ ಮಾಡಿಲ್ಲ ಬದಲಿಗೆ ಜನರ ಆರೋಗ್ಯ ಕಾಪಾಡುವ ಕಾಳಜಿಯಿಂದ ಹಿರ ತರಲಾಗಿದೆ ಎಂದು ಸಂಸ್ಥೆ ಹೇಳಿದೆ. 

Written by - Ranjitha R K | Last Updated : Apr 28, 2025, 01:28 PM IST
  • ಪತಂಜಲಿ, ಮತ್ತೊಮ್ಮೆ ತನ್ನ ಗುಲಾಬಿ ಸಿರಪ್ ಜೊತೆಗೆ ಖುಸ್ ಮತ್ತು ಬೇಲ್ ಸಿರಪ್
  • ಪತಂಜಲಿಯ ಆಯುರ್ವೇದ ಆಹಾರ ಪದ್ಧತಿ
  • ಉತ್ತಮ ಪದಾರ್ಥಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಹೆಸರುವಾಸಿ
ಲಾಭಕ್ಕಾಗಿ ಅಲ್ಲ, ಬದಲಾಗಿ ಸೇವೆಗಾಗಿ ಗುಲಾಬ್ ಶರ್ಬತ್ ಬಿಡುಗಡೆ ಮಾಡಿದ ಪತಂಜಲಿ : ಆರೋಗ್ಯ ಸಂಜೀವಿನಿ ಈ ಪಾನೀಯ

ಬಾಬಾ ರಾಮದೇವ್ ಪ್ರಾರಂಭಿಸಿದ ಆಯುರ್ವೇದ ಕಂಪನಿಯಾದ ಪತಂಜಲಿ, ಮತ್ತೊಮ್ಮೆ ತನ್ನ ಗುಲಾಬಿ ಸಿರಪ್ ಜೊತೆಗೆ ಖುಸ್ ಮತ್ತು ಬೇಲ್ ಸಿರಪ್ ಪೂರೈಕೆಯನ್ನು ಹೆಚ್ಚಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಉಷ್ಣತೆಯ ನಡುವೆ ಜನರ ಆರೋಗ್ಯವನ್ನು ಕಾಪಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಪತಂಜಲಿ ತನ್ನ ಆಯುರ್ವೇದ ಆಹಾರ ಪದ್ಧತಿ ಮತ್ತು ಉತ್ತಮ ಪದಾರ್ಥಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.

Add Zee News as a Preferred Source

ಪತಂಜಲಿ ಆಯುರ್ವೇದದ ಆರಂಭದಲ್ಲಿ, ಯೋಗ ಗುರು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ, ಪತಂಜಲಿಯು ಆಯುರ್ವೇದದ ಪ್ರಯೋಜನಗಳನ್ನು ಜನರಿಗೆ ನೀಡುವ ಮತ್ತು ಅವರ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಉತ್ಪನ್ನಗಳನ್ನು ತಯಾರಿಸುವುದಾಗಿ ಹೇಳಿದ್ದರು. ಇಲ್ಲಿ ಪತಂಜಲಿಯ ಗುರಿ ಕೇವಲ ಲಾಭ ಗಳಿಸುವುದಲ್ಲ ಜನರ ಆರೋಗ್ಯ ಕಾಪಾಡುವುದು. 

ಇದನ್ನೂ ಓದಿ : Akshaya Tritiya: 2014 ರಲ್ಲಿ ಅಕ್ಷಯ ತೃತೀಯದಂದು ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ..? ಅಬ್ಬಬ್ಬಾ.. ಹತ್ತು ವರ್ಷಗಳಲ್ಲಿ ಆಭರಣ ಬೆಲೆಯ ಮೇಲೆ ಏರಿಕೆಯಾಗಿದ್ದು ಇಷ್ಟೊಂದಾ..?

ಲಾಭಕ್ಕಿಂತ ಮೊದಲು ಜನರ ಆರೋಗ್ಯವೇ ಮೊದಲ ಆದ್ಯತೆ : 
ಇಂದು, ಪತಂಜಲಿ FMCG ಜಗತ್ತಿನಲ್ಲಿ ಒಂದು ದೊಡ್ಡ ಕಂಪನಿಯಾಗಿದೆ. ಪತಂಜಲಿ ಬಯಸಿದರೆ, ಕೋಕಾ ಕೋಲಾದಂತಹ ಕಾರ್ಬೊನೇಟೆಡ್ ಅಥವಾ ಸೋಡಾ ಆಧಾರಿತ ಪಾನೀಯಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಬಹುದಿತ್ತು. ಇದರಿಂದಾಗಿ ಅದು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಮತ್ತು ಹೆಚ್ಚಿನ ಲಾಭವನ್ನು ಪಡೆಯುತ್ತಿತ್ತು. ಆದರೆ ಪತಂಜಲಿ ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ  ಸರಿಯಾದ ಮಾರ್ಗವನ್ನು ಅಳವಡಿಸಿಕೊಂಡಿದೆ. ಪತಂಜಲಿ ಕಂಪನಿಯು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಗುಲಾಬ್ ಶರ್ಬತ್, ಖುಸ್ ಶರ್ಬತ್ ಮತ್ತು ಬೆಲ್ ಶರ್ಬತ್ ನಂತಹ ಪಾನೀಯಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಜನರಿಗೆ ಆರೋಗ್ಯ ಪ್ರಯೋಜನ ನೀಡುವುದರ ಜೊತೆಗೆ ಕೈ ಗೆಟಕುವ ದರದಲ್ಲಿ ಲಭ್ಯವಿದೆ ಎನ್ನುವುದು ಗಮನಿಸಬೇಕಾದ ವಿಷಯ.  

ಗುಲಾಬಿ ಸಿರಪ್‌ನ ವಿಶೇಷತೆ :
ಪತಂಜಲಿಯ ಗುಲಾಬಿ ಸಿರಪ್ ಬಗ್ಗೆ ಹೇಳುವುದಾದರೆ, ಇದನ್ನು ನಿಜವಾದ ಗುಲಾಬಿ ದಳಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದು ಅತ್ಯಂತ ಕಡಿಮೆ  ಸಕ್ಕರೆಯನ್ನು ಒಳಗೊಂಡಿದೆ. ಆಯುರ್ವೇದದ ಪ್ರಕಾರ, ಈ ಶರಬತ್ತು ಮನಸ್ಸಿಗೆ ಶಾಂತಿಯನ್ನು ನೀಡುವುದರ ಜೊತೆಗೆ ದೇಹವನ್ನು ತಂಪಾಗಿಸುತ್ತದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಪನಿಗಳಿಗೆ ಸೇರಿದ ಗುಲಾಬಿ ರುಚಿಯ ಪಾನೀಯಗಳು ಲಭ್ಯವಿದೆ. ಅವುಗಳಲ್ಲಿ ಬಣ್ಣ ಮತ್ತು ಪರಿಮಳ ಮಾತ್ರ ಇರುತ್ತವೆ. ಆದರೆ ಪತಂಜಲಿ ಸಿರಪ್ ಆರೋಗ್ಯಕ್ಕೆ ಒಳ್ಳೆಯದು ಜೊತೆಗೆ  ಕುಡಿಯಲು ರುಚಿಕರವೂ ಆಗಿದೆ. ಇದನ್ನು ತಣ್ಣೀರು ಅಥವಾ ಹಾಲಿನಲ್ಲಿ ಬೆರೆಸಿ ಸುಲಭವಾಗಿ ಸೇವಿಸಬಹುದು.

ಇದನ್ನೂ ಓದಿ :  ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ನೀಡಲಿದೆ 2 ಲಕ್ಷ ರೂಪಾಯಿ! ಪಡೆಯಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ

ಗುಲಾಬಿ ಸಿರಪ್ ಕುಡಿಯುವುದರಿಂದಾಗುವ ಪ್ರಯೋಜನಗಳು :
ಪತಂಜಲಿ ತನ್ನ ಗುಲಾಬಿ ಸಿರಪ್ ಅನ್ನು ಹಳೆಯ ಸಾಂಪ್ರದಾಯಿಕ ಮತ್ತು ಆಯುರ್ವೇದ ವಿಧಾನವನ್ನು ಬಳಸಿ ತಯಾರಿಸಲಾಗಿದೆ. ಇದಕ್ಕಾಗಿ ಗುಲಾಬಿಗಳನ್ನು ನೇರವಾಗಿ ರೈತರಿಂದ ಖರೀದಿಸಲಾಗುತ್ತದೆ. ಇದರಿಂದಾಗಿ ಹೂವುಗಳು ತಾಜಾ ಮತ್ತು ಉತ್ತಮವಾಗಿರುತ್ತವೆ. ಇದು ಶರಬಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಶರಬತ್ತಿನಲ್ಲಿ ಗುಲಾಬಿಯ ಜೊತೆಗೆ ಇತರ ಕೆಲವು ಆಯುರ್ವೇದ ಗಿಡಮೂಲಿಕೆಗಳನ್ನು ಕೂಡಾ ಬೆರೆಸಲಾಗುತ್ತದೆ. ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News