Pension Payment Rule: ಸರ್ಕಾರಿ ನೌಕರರು, ಪಿಂಚಣಿದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ನಿವೃತ್ತ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಪಿಂಚಣಿ ಬರದಿದ್ದರೆ, ಇಲ್ಲವೇ ಅದರ ಬಾಕಿ ಹಣವನ್ನು ಸರಿಯಾದ ಸಮಯಕ್ಕೆ ಪಾವಟಿಸದಿದ್ದರೆ ಸಂಬಂಧಪಟ್ಟ ಬ್ಯಾಂಕ್ ನಿಗದಿತ ದಿನಾಂಕದಿಂದ ಬಾಕಿ ಒತ್ತಡ ಮೇಲೆ ವಾರ್ಷಿಕ ಶೇ. 8ರಷ್ಟು ದರದಲ್ಲಿ ಬಡ್ಡಿಯನ್ನು ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಆರ್‌ಬಿಐ ಸುತ್ತೋಲೆಯ ಪ್ರಕಾರ, ಪಿಂಚಣಿದಾರರಿಗೆ ನಿಗದಿತ ಸಮಯದಲ್ಲಿ ಪಿಂಚಣಿ ಹಣ ಕೈ ಸೇರುತ್ತಿಲ್ಲ ಎಂಬ ದೂರುಗಳು ನಿರಂತರವಾಗಿ ಬರುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, 01 ಅಕ್ಟೋಬರ್ 2008ರಿಂದ ಎಲ್ಲಾ ವಿಳಂಬಿತ ಪಿಂಚಣಿ ಪಾವತಿಗಳಿಗೆ ಈ ನಿಯಮ ಅನ್ವಯಿಸುತ್ತದೆ.
ಪ್ರತ್ಯೇಕವಾಗಿ ಕ್ಲೈಮ್ ಮಾಡುವ ಅಗತ್ಯವಿಲ್ಲ:
ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ಪಿಂಚಣಿ ಮತ್ತು ಪಿಂಚಣಿ ಬಾಕಿಯನ್ನು ಖಾತೆಗೆ ಜಮಾ ಮಾಡಿದ ದಿನದಂತೆ ಬಡ್ಡಿ ಮೊತ್ತವನ್ನು ಸಹ ಬ್ಯಾಂಕ್‌ಗಳು ಜಮಾ ಮಾಡಬೇಕಾಗುತ್ತದೆ. ಇದಕ್ಕಾಗಿ ಪಿಂಚಣಿದಾರರು ಪ್ರತ್ಯೇಕವಾಗಿ ಕ್ಲೈಮ್ ಮಾಡುವ ಅಗತ್ಯವಿಲ್ಲ.
ಇದನ್ನೂ ಓದಿ- 'ಶೋಕಿಗಾಗಿ ಕಂಪನಿ ಹಣ ಬಳಕೆ..' Gensol ಮೇಲೆ ಸೆಬಿ ಪ್ರಹಾರ!
ಮುಂದಿನ ತಿಂಗಳಿನಿಂದಲೇ ಹೊಸ ನಿಯಮ ಜಾರಿ:
ಆರ್‌ಬಿಐ ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ ಮುಂದಿನ ತಿಂಗಳಿನಿಂದಲೇ ಪಿಂಚಣಿ ಪಾವತಿಯಲ್ಲಿ ಈ ಹೊಸ ನಿಯಮ ಜಾರಿಯಾಗಲಿದ್ದು, ಇದರ ಪ್ರಯೋಜನವನ್ನು ಪಡೆಯಲು ಪಿಂಚಣಿ ಆದೇಶಗಳ ಪ್ರತಿಯನ್ನು ತಕ್ಷಣವೇ ಪಡೆಯಲು ಕಾರ್ಯವಿಧಾನವನ್ನು ಸಿದ್ದಪಡಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.
ಹಿರಿಯ ಪಿಂಚಣಿದಾರರಿಗೆ ವಿಶೇಷ ವ್ಯವಸ್ಥೆ:
ಪಿಂಚಣಿದಾರರಿಗೆ ಉತ್ತಮ ಗ್ರಾಹಕ ಸೇವೆಯನ್ನು ಒದಗಿಸುವಂತೆ ಆದೇಶಿಸಿರುವ ಆರ್‌ಬಿಐ, ವಿಶೇಷವಾಗಿ ಹಿರಿಯ ಪಿಂಚಣಿದಾರರೊಂದಿಗೆ ಸಹಾನುಭೂತಿಯಿಂಡ್ ನಡೆದುಕೊಳ್ಳುವಂತೆ ತಿಳಿಸಿದೆ. ಬಲು ಮುಖ್ಯವಾಗಿ ಬ್ಯಾಂಕಿಗೆ ಬರಲು ಸಾಧ್ಯವಾಗದ ಅಥವಾ ಹೆಸರಿನಲ್ಲಿ ಸಹಿ ಹಾಕಲು ಸಾಧ್ಯವಾಗದಿದ್ದರೆ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ (ಇದರಲ್ಲಿ ಒಬ್ಬರು ಬ್ಯಾಂಕ್ ಅಧಿಕಾರಿಯಾಗಿರಬೇಕು) ಹೆಬ್ಬೆರಳು ಅಥವಾ ಪಾದದ ಮುದ್ರೆಯನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.
ಇದನ್ನೂ ಓದಿ- ಕ್ರೆಡಿಟ್ ಕಾರ್ಡ್ ಬಳಸದೆ ಇಡುವುದರಿಂದ ಆಗುವ ಪರಿಣಾಮಗಳು
ಇಂತಹವರಿಗೆ ಡಿಜಿಟಲ್ ಜೀವ ಪ್ರಮಾಣಪತ್ರವೂ ಮಾನ್ಯ:
ಆರ್‌ಬಿಐ ಹೊಸ ಸುತ್ತೋಲೆಯ ಪ್ರಕಾರ, 70ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರು ಮನೆಯಲ್ಲಿಯೇ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಸೌಲಭ್ಯವನ್ನು ಎಲ್ಲಾ ಬ್ಯಾಂಕ್‌ಗಳು ಒದಗಿಸಬೇಕು. ಒಂದೊಮ್ಮೆ ಅವರು ಡಿಜಿಟಲ್ ಜೀವನ ಪ್ರಮಾಣಪಾತ್ರವನ್ನು ಸಹ ಮಾನ್ಯವೆಂದು ಪರಿಗಣಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ಗಳು ಎಲ್ಲಾ ಮಾರ್ಗಸೂಚಿಗಳನ್ನು ಬ್ಯಾಂಕ್‌ನ ನೋಟೀಸ್ ಬೋರ್ಡ್‌ನಲ್ಲಿ ಹಾಕಬೇಕು ಎಂದು ತಿಳಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









