)
Pradhan Mantri Shram Yogi Maan Dhan Scheme: ವಾಸ್ತವವಾಗಿ ಸುಮಾರು 6 ವರ್ಷಗಳ ಹಿಂದೆ ಸರ್ಕಾರವು ʼಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆʼಯನ್ನು ಪ್ರಾರಂಭಿಸಿತು. ಈ ಯೋಜನೆಯು ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಸಹಕಾರಿ. ಬೀದಿ ವ್ಯಾಪಾರಿಗಳು, ಚಾಲಕರು, ರಿಕ್ಷಾ ಎಳೆಯುವವರು, ನಿರ್ಮಾಣ ಕಾರ್ಮಿಕರು, ಮನೆಕೆಲಸಗಾರರು, ಬೀಡಿ ಕಾರ್ಮಿಕರು, ಕೃಷಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ.
ʼಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆʼ (PM-SYM) ಅಡಿ 60 ವರ್ಷ ವಯಸ್ಸಿನ ನಂತರ ಕಾರ್ಮಿಕರಿಗೆ ತಿಂಗಳಿಗೆ 3,000 ರೂ. ಪಿಂಚಣಿಯನ್ನು ಖಾತ್ರಿಗೊಳಿಸುತ್ತದೆ. ಈ ಯೋಜನೆಯು ತಿಂಗಳಿಗೆ 15,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಕಾರ್ಮಿಕರಿಗೆ ಆಗಿದೆ. ಅಂದರೆ 18 ರಿಂದ 40 ವರ್ಷ ವಯಸ್ಸಿನ ಅಸಂಘಟಿತ ವಲಯದಲ್ಲಿ ತಿಂಗಳಿಗೆ 15,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಈ ಯೋಜನೆಗೆ ಸೇರಲು ಕೆಲಸಗಾರನು ತನ್ನ ವಯಸ್ಸಿಗೆ ಅನುಗುಣವಾಗಿ ಮಾಸಿಕ ಕೊಡುಗೆಯನ್ನು ಪಾವತಿಸಬೇಕಾಗುತ್ತದೆ. ಕೆಲಸಗಾರನು ದೇಣಿಗೆ ನೀಡುವ ಮೊತ್ತವನ್ನು ಸರ್ಕಾರವು ಖಾತೆಗೆ ಜಮಾ ಮಾಡುತ್ತದೆ. ಉದಾಹರಣೆಗೆ ಕೆಲಸಗಾರನು ತಿಂಗಳಿಗೆ 500 ರೂ. ಠೇವಣಿ ಇಟ್ಟರೆ, ಸರ್ಕಾರವು ಸಹ ಅದಕ್ಕೆ 500 ರೂ. ಠೇವಣಿ ಇಡುತ್ತದೆ. ಅಂದರೆ ಪ್ರತಿ ತಿಂಗಳು 1000 ರೂ. ಠೇವಣಿ ಇಡಲಾಗುತ್ತದೆ. ಈ ಯೋಜನೆಯ ಮತ್ತೊಂದು ವಿಶೇಷವೆಂದರೆ ನೀವು ಚಿಕ್ಕ ವಯಸ್ಸಿನಲ್ಲಿ ಸೇರಿದಷ್ಟೂ ನಿಮಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.
18 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದಕ್ಕೆ ಸೇರಿದರೆ, ಅವರು ಪ್ರತಿ ತಿಂಗಳು ಕೇವಲ 55 ರೂ. ಪಾವತಿಸಬೇಕಾಗುತ್ತದೆ. 40 ವರ್ಷ ವಯಸ್ಸಿನ ವ್ಯಕ್ತಿಗೆ ಮಾಸಿಕ ಕೊಡುಗೆ 200 ರೂ. ಆಗಿರುತ್ತದೆ. ಮಾಸಿಕ ಕೊಡುಗೆಯು ಫಲಾನುಭವಿಯ ವಯಸ್ಸನ್ನು ಅವಲಂಬಿಸಿರುತ್ತದೆ. ಇದು 55 ರಿಂದ 200 ರೂ.ಗಳವರೆಗೆ ಇರುತ್ತದೆ. ಈ ಯೋಜನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನಿರ್ವಹಿಸುತ್ತದೆ.
ಉದಾಹರಣೆಗೆ:
18ನೇ ವಯಸ್ಸಿನಲ್ಲಿ: ತಿಂಗಳಿಗೆ 55 ರೂ.
29ನೇ ವಯಸ್ಸಿನಲ್ಲಿ: ತಿಂಗಳಿಗೆ 100 ರೂ.
40ನೇ ವಯಸ್ಸಿನಲ್ಲಿ: ತಿಂಗಳಿಗೆ 200 ರೂ.
ಈ ಮೊತ್ತವನ್ನು 60 ವರ್ಷ ವಯಸ್ಸಿನವರೆಗೆ ಠೇವಣಿ ಇಡಬೇಕು. ಈ ಯೋಜನೆಯನ್ನು LIC, CSC ನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ https://maandhan.in/. ಗೆ ಭೇಟಿ ನೀಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ