)
ಕೇವಲ 200 ರೂ.ಗೆ ಖರೀದಿಸಿ ನೆಟ್ಟ ಈ ಸಸಿ, ವರ್ಷಗಳಲ್ಲಿಯೇ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೌದು, ಮಹಾಗನಿ ಮರಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದರ ಬಾಳಿಕೆ, ಶ್ರೀಮಂತ ಕೆಂಪು-ಕಂದು ಬಣ್ಣ ಮತ್ತು ಜಲನಿರೋಧಕ ಗುಣಗಳಿಂದಾಗಿ ಇದನ್ನು 'ಮರಗಳ ರಾಜ' ಎಂದು ಕೂಡಾ ಕರೆಯಲಾಗುತ್ತದೆ. ವಿದೇಶಗಳಲ್ಲಿ ಈ ಮರಕ್ಕೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಈ ಮರವನ್ನು 'ಹಣದ ಮರ' ಎಂದು ಕೂಡಾ ಕರೆಯಲಾಗುತ್ತದೆ. ಇದರ ಬೇಡಿಕೆ ಹೆಚ್ಚುತ್ತಿರುವಂತೆಯೇ ರೈತರು ತಮ್ಮ ಹೊಲಗಳಲ್ಲಿ ಮಹಾಗನಿಯನ್ನು ಬೆಳೆಸುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಗೆ ಹೋಲಿಸಿದರೆ ಇದು ಹೆಚ್ಚು ಲಾಭದಾಯಕ ಆದರೆ ಇದನು ಬೆಳೆಸಲು ಹೆಚ್ಚು ಶ್ರಮ ಪಡಬೇಕಾಗಿಲ್ಲ.
ಇದು ವಿಶೇಷವಾಗಿ ಪ್ರೀಮಿಯಂ ಪೀಠೋಪಕರಣಗಳು, ಸಂಗೀತ ಉಪಕರಣಗಳಾದ ಗಿಟಾರ್, ತಬಲಾ ಮತ್ತು ಹಾರ್ಮೋನಿಯಂನಂತಹ ಸಂಗೀತ ವಾದ್ಯಗಳನ್ನು ತಯಾರಿಸಲು ಬಳಕೆಯಾಗುತ್ತದೆ. ಹಡಗು ನಿರ್ಮಾಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳಲ್ಲಿಯೂ ಬಳಸಲು ಸೂಕ್ತವಾಗಿದೆ. ಸಂಪೂರ್ಣವಾಗಿ ಬೆಳೆದ ನಂತರ, ಮಹೋಗಾನಿ ಮರದ ಒಂದು ತಂಡು 1,500 ರಿಂದ ರೂ. 2,500 ರವರೆಗೆ ಬೆಲೆ ಬಾಳಬಹುದು.
ಈ ಮರ ಔಷಧೀಯ ಮೌಲ್ಯವನ್ನು ಕೂಡಾ ಹೊಂದಿದೆ. ಇದರ ಬೀಜಗಳು, ಎಲೆಗಳು ಮತ್ತು ತೊಗಟೆಯನ್ನು ಕ್ಯಾನ್ಸರ್, ಮಲೇರಿಯಾ, ಮಧುಮೇಹ ಮತ್ತು ಅತಿಸಾರ ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಎಲೆಗಳನ್ನು ಕೀಟನಾಶಕಗಳು, ಸಾಬೂನುಗಳು, ಬಣ್ಣಗಳು ಮತ್ತು ಸೊಳ್ಳೆ ನಿವಾರಕಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ. ವೈವಿಧ್ಯಮಯ ಉಪಯೋಗಗಳನ್ನು ಹೊಂದಿರುವ ಕಾರಣ ಈ ಮರದ ಮೌಲ್ಯ ಮತ್ತಷ್ಟು ಹೆಚ್ಚಿದೆ.
ಈ ಮರವನ್ನು ಕೇವಲ 200 ರೂ.ಗೆ ಆನ್ಲೈನ್ ನಲ್ಲಿ ಆರ್ಡರ್ ಮಾಡಬಹುದು. ಈ ನಿತ್ಯಹರಿದ್ವರ್ಣ ಪ್ರಭೇದವು 50 ರಿಂದ 60 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಸುಮಾರು 12 ವರ್ಷಗಳ ನಂತರ ಸಂಪೂರ್ಣವಾಗಿ ಪಕ್ವವಾಗುತ್ತದೆ. ದೀರ್ಘಾವಧಿಯ, ಕಡಿಮೆ ನಿರ್ವಹಣೆಯ ಹೂಡಿಕೆಯನ್ನು ಬಯಸುವವರಿಗೆ, ಮಹಾಗನಿ ಅತ್ಯುತ್ತಮ ಆಯ್ಕೆ.