)
PM Kisan Update: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಒಂದಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 21ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ 10 ಕೋಟಿ ರೈತರಿಗೆ ಕಾಯುವಿಕೆ ಕೊನೆಗೊಳ್ಳಲಿದೆ. ಏಕೆಂದರೆ ಶೀಘ್ರದಲ್ಲೇ ತಲಾ ₹ 2,000 ಅವರ ಖಾತೆಗಳಿಗೆ ಜಮಾ ಆಗಲಿದೆ. ದೀಪಾವಳಿಗೂ ಮೊದಲೇ ಪಿಎಂ ಕಿಸಾನ್ ಹಣ (ತಲಾ ₹2,000) ಖಾತೆಗೆ ಜಮಾ ಆಗಲಿದೆ. ಆದರೆ, ಇದಕ್ಕಾಗಿ, ಫಲಾನುಭವಿಗಳು ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
2025ರ ಆಗಸ್ಟ್ 02 ರಂದು ಪಿಎಂ ಕಿಸಾನ್ ನ 20ನೇ ಕಂತನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದು, ದೇಶಾದ್ಯಂತ 97 ಮಿಲಿಯನ್ ರೈತರಿಗೆ ಸುಮಾರು ₹ 20,500 ಕೋಟಿ ನೇರ ಆರ್ಥಿಕ ನೆರವು ನೀಡಲಾಗಿದೆ.
ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಮುಂದಿನ ಕಂತಿನ ಹಣವನ್ನು ಪಡೆಯಲು ರೈತರು ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆ ಸೇರಿದಂತೆ ಇತರ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ತಮ್ಮ ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಆಯ್ಕೆಯನ್ನು ಸಕ್ರಿಯಗೊಳಿಸುವುದರ ಜೊತೆಗೆ ಆಧಾರ್-ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕೊಡ ಅಗತ್ಯವಾಗಿದೆ.
ಯಾವಾಗ ಖಾತೆ ಸೇರುತ್ತೆ ಪಿಎಂ ಕಿಸಾನ್ ಹಣ?
ಪಿಎಂ ಕಿಸಾನ್ ಫಲಾನುಭವಿಗಳಿಗೆ ಬರಬೇಕಿರುವ 21ನೇ ಕಂತಿನ ಹಣ ಯಾವ ದಿನಾಂಕದಂದು ಬಿಡುಗಡೆ ಆಗಲಿದೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳನ್ನೂ ಸರ್ಕಾರ ಒದಗಿಸಿಲ್ಲ. ಆದರೆ, ದಸರಾ ಬಳಿಕ ದೀಪಾವಳಿ ಹಬ್ಬಕ್ಕೂ ಮೊದಲು ಪಿಎಂ ಕಿಸಾನ್ ಹಣ ಬಿಡುಗಡೆ ಆಗಲಿದೆ ಎಂದು ಮಾಹಿತಿ ಲಬ್ಯಾವಾಗಿದೆ. ಮೋದಿ ಸರ್ಕಾರ, ಶೀಘ್ರದಲ್ಲೇ ಹಣ ಬಿಡುಗಡೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.
2019 ರಲ್ಲಿ ಪ್ರಾರಂಭವಾದ ಮಹಾತ್ವಾಕಾಂಕ್ಷೆಯ ಪಿಎಂ ಕಿಸಾನ್ ಯೋಜನೆಯಡಿ ಮೂರು ಸಮಾನ ಕಂತುಗಳಲ್ಲಿ ರೈತರು ವಾರ್ಷಿಕ ₹6,000 ಮೊತ್ತವನ್ನು ಪಡೆಯುತ್ತಾರೆ. ದೇಶಾದ್ಯಂತ 90 ದಶಲಕ್ಷಕ್ಕೂ ಹೆಚ್ಚು ರೈತರು ಇದರ ಪ್ರಯೋಜನವನ್ನು ಪಡೆಯುತ್ತಿದ್ದು, ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಈ ಹಣವನ್ನು ವರ್ಗಾಯಿಸಲಾಗುತ್ತದೆ. ಯೋಜನೆಯ ನಿಯಮಗಳ ಪ್ರಕಾರ, ಮೊದಲ ಕಂತು ಏಪ್ರಿಲ್ ಮತ್ತು ಜುಲೈ ನಡುವೆ, ಎರಡನೇ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ಮತ್ತು ಮೂರನೇ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ- ರೇಷನ್ ಕಾರ್ಡ್ ಕ್ಯಾನ್ಸಲ್ ಆದ್ರೆ ಭಯಬೇಡ: ಈ ಕೆಲಸ ಮಾಡಿ