PM Kisan: ಈ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ
PM Kisan: ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರಿಗೆ 6,000 ರೂ.ಗಳನ್ನು ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ. ಆದರೆ, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೆಲವು ಷರತ್ತುಗಳನ್ನು ಪೂರೈಸುವುದು ಅಗತ್ಯವಾಗಿದೆ.
PM Kisan Samman Nidhi: ದೇಶದ ಬೆನ್ನೆಲುಬಾಗಿರುವ ರೈತರಿಗೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 6,000 ರೂ.ಗಳನ್ನು ಮೂರು ಕಂತುಗಳಲ್ಲಿ ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಆದರೆ, ಪಿಎಂ ಕಿಸಾನ್ ಯೋಜನೆಯ ಲಾಭ ಎಲ್ಲಾ ರೈತರಿಗೂ ಲಭ್ಯವಾಗುವುದಿಲ್ಲ. ಇದಕ್ಕಾಗಿ, ಕೆಲವು ಷರತ್ತುಗಳನ್ನು ಪೂರೈಸುವುದು ಅತ್ಯಗತ್ಯವಾಗಿದೆ. ಹಾಗಿದ್ದರೆ, ಯಾವುದಾ ಷರತ್ತುಗಳು, ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಯಲ್ಲಿ ಯಾರು ಫಲಾನುಭವಿ ಆಗಲು ಸಾಧ್ಯವಿಲ್ಲ ಎಂದು ತಿಳಿಯೋಣ...
ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಪೂರೈಸಬೇಕಾದ ಷರತ್ತುಗಳು:
ಯಾವುದೇ ಸರ್ಕಾರಿ ಯೋಜನೆಯ (Govt Schemes) ಪ್ರಯೋಜನವನ್ನು ಪಡೆಯಲು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅಂತೆಯೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Scheme) ಪ್ರಯೋಜನಗಳನ್ನು ಪಡೆಯಲು ಕೂಡ ಕೆಲವು ಅರ್ಹತೆಗಳನ್ನು ಹೊಂದಿರುವುದು ಅಗತ್ಯವಾಗಿದೆ.
ಇದನ್ನೂ ಓದಿ- PMAY 2024: ಬಡವರಿಗೆ ಉಚಿತ ಮನೆ ಯೋಜನೆಯಡಿ ರೂ. 1 ಲಕ್ಷ ಸಹಾಯಧನ..! ಹೀಗೆ ಅರ್ಜಿ ಸಲ್ಲಿಸಿ
ಇಂತಹ ರೈತರು ಪಿಎಂ-ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ:-
>> ಸಣ್ಣ ಮತ್ತು ಅತಿ ಸಣ್ಣ ರೈತರು ಕೇಂದ್ರ ಸರ್ಕಾರದ (Central Govt) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ.
>> ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ಅರ್ಹ ರೈತ ಕುಟುಂಬಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
>> ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು ಭಾರತೀಯ ಪ್ರಜೆಯಾಗಿರಬೇಕು.
ಇದನ್ನೂ ಓದಿ- Credit Card Balance ವರ್ಗಾವಣೆ ಯಾವಾಗ ಲಾಭದಾಯಕವೇ? ಇದರ ಅನುಕೂಲ-ಅನಾನುಕೂಲಗಳೇನು?
ಈ ರೈತರು ಪಿಎಂ ಕಿಸಾನ್ ಲಾಭ ಪಡೆಯಲು ಸಾಧ್ಯವಿಲ್ಲ!
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಕೆಲವು ವರ್ಗದ ರೈತರು ಪಿಎಂ ಕಿಸಾನ್ ಯೋಜನೆಯ (PM Kisan Scheme) ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಹಾಗಿದ್ದರೆ ಯಾರಿಗೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ನೋಡುವುದಾದರೆ...
* ಯಾರ ಕುಟುಂಬದ ಸದಸ್ಯರು ಈಗಾಗಲೇ ಈ ಯೋಜನೆಯ ಫಲಾನುಭವಿಯಾಗಿದ್ದಾರೆ.
* ಸ್ವಂತ ಸಾಗುವಳಿ ಭೂಮಿ ಇಲ್ಲದವರು.
* ಯಾವುದೇ ಸಾಂಸ್ಥಿಕ ಜಮೀನುದಾರರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಅನರ್ಹರಾಗಿರುತ್ತಾರೆ.
* ಸಾಂವಿಧಾನಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಪಿಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
* ಸರ್ಕಾರಿ ಸಚಿವಾಲಯ, ಇಲಾಖೆ ಅಥವಾ ಕಚೇರಿ ಮತ್ತು ಅದರ ಕ್ಷೇತ್ರ ಘಟಕದ ಅಧಿಕಾರಿಗಳು ಅಥವಾ ಉದ್ಯೋಗಿಗಳು ಪಿಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ.
* ಕುಟುಂಬದ ಸದಸ್ಯರು ಕೇಂದ್ರ/ರಾಜ್ಯದ ಮಾಜಿ/ಹಾಲಿ ಮಂತ್ರಿಗಳಾಗಿದ್ದರೆ.
* ಕುಟುಂಬದ ಸದಸ್ಯರು ಜಿಲ್ಲಾ ಪರಿಷತ್ತಿನ ಅಧ್ಯಕ್ಷರು, ಮಹಾನಗರ ಪಾಲಿಕೆಯ ಮೇಯರ್/ಇಂದಿನ/ಲೋಕಸಭೆ, ರಾಜ್ಯಸಭೆ, ವಿಧಾನಮಂಡಲದ ಮಾಜಿ ಸದಸ್ಯರಾಗಿದ್ದಲ್ಲಿ...
* ಮಾಸಿಕ ಪಿಂಚಣಿ 10,000 ರೂ. ಅಥವಾ ಅದಕ್ಕಿಂತ ಹೆಚ್ಚು (ನಾಲ್ಕನೇ ದರ್ಜೆಯ ನೌಕರರನ್ನು ಹೊರತುಪಡಿಸಿ) ಪಡೆಯುತ್ತಿರುವ ನಿವೃತ್ತ ಅಧಿಕಾರಿಗಳು/ ನಿವೃತ್ತ ಉದ್ಯೋಗಿಗಳು.
* ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಎಂಜಿನಿಯರ್‌ಗಳು, ವಕೀಲರು ಮತ್ತು ವಾಸ್ತುಶಿಲ್ಪಿಗಳಂತಹ ವೃತ್ತಿಪರರು.
* ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.