)
Post Office MIS scheme: ಭಾರತೀಯ ಅಂಚೆ ಕಚೇರಿ ದೇಶದ ಜನಸಾಮಾನ್ಯರ ವಿಶ್ವಾಸ ಗಳಿಸಿರುವ ಒಂದು ಪ್ರಮುಖ ಸಂಸ್ಥೆ. ಅಂಚೆ ಕಚೇರಿಯು ಜನರಿಗೆ ಸಣ್ಣ ಉಳಿತಾಯ ಮತ್ತು ಸುರಕ್ಷಿತ ಹೂಡಿಕೆಗಳ ಹಲವು ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ಮರುಕಳಿಸುವ ಠೇವಣಿ (RD), ಸ್ಥಿರ ಠೇವಣಿ (FD), ಸಾರ್ವಜನಿಕ ಭವಿಷ್ಯ ನಿಧಿ (PPF), ಕಿಸಾನ್ ವಿಕಾಸ್ ಪತ್ರ (KVP) ಮತ್ತು ಇತರ ಅಪಾಯರಹಿತ ಯೋಜನೆಗಳು ಸೇರಿವೆ.
ಈ ಎಲ್ಲಾ ಯೋಜನೆಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಒಂದು ಯೋಜನೆ ಎಂದರೆ ಮಾಸಿಕ ಆದಾಯ ಯೋಜನೆ (Monthly Income Scheme - MIS). ಈ ಯೋಜನೆ ಸಾಮಾನ್ಯ ಜನರಿಗೆ ಮಾರುಕಟ್ಟೆಯ ಅಪಾಯವಿಲ್ಲದೆ ಪ್ರತಿ ತಿಂಗಳು ಖಚಿತ ಆದಾಯ ನೀಡುವ ವಿಶೇಷತೆ ಹೊಂದಿದೆ. ಅಂದರೆ, ನೀವು ಒಂದು ಬಾರಿ ಹಣವನ್ನು ಠೇವಣಿ ಇಟ್ಟರೆ, ಅದರ ಮೇಲೆ ಪ್ರತೀ ತಿಂಗಳು ಬಡ್ಡಿ ರೂಪದಲ್ಲಿ ಸ್ಥಿರ ಆದಾಯ ನಿಮ್ಮ ಖಾತೆಗೆ ಬರುತ್ತದೆ.
ಈ ಯೋಜನೆ ಅಂಚೆ ಕಚೇರಿಯಲ್ಲಿಯೇ ಲಭ್ಯ. ನೀವು ಈ ಯೋಜನೆಯಲ್ಲಿ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದರೆ, ಆ ಮೊತ್ತದ ಮೇಲೆ ಪ್ರತಿ ತಿಂಗಳು ಬಡ್ಡಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಈ ಯೋಜನೆಯಲ್ಲಿ ವಾರ್ಷಿಕ ಶೇಕಡಾ 7.4% ಬಡ್ಡಿದರ ನೀಡಲಾಗುತ್ತಿದೆ. ಹೂಡಿಕೆದಾರರು ಕನಿಷ್ಠ ₹1,000 ಠೇವಣಿಯಿಂದ ಖಾತೆಯನ್ನು ತೆರೆಯಬಹುದು.
ಒಬ್ಬರ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ವರೆಗೆ ಮತ್ತು ಜಂಟಿ ಖಾತೆಯಲ್ಲಿ (ಮೂರು ಜನರ ಹೆಸರಿನಲ್ಲಿ) ₹15 ಲಕ್ಷ ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ನೀವು ನಿಮ್ಮ ಪತ್ನಿಯೊಂದಿಗೆ ಜಂಟಿ ಖಾತೆಯಲ್ಲಿ ₹10 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಸುಮಾರು ₹6,167 ಬಡ್ಡಿ ಪಡೆಯಬಹುದು. ಅದೇ ರೀತಿ ಗರಿಷ್ಠ ₹15 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹9,250 ವರೆಗೆ ಸ್ಥಿರ ಆದಾಯ ಪಡೆಯಬಹುದು. ಇದು ಸಂಪೂರ್ಣ ಖಚಿತ ಮತ್ತು ಯಾವುದೇ ಮಾರುಕಟ್ಟೆ ಅಪಾಯವಿಲ್ಲದ ಆದಾಯ.
ಪಾವತಿ ಅವಧಿ ಮತ್ತು ಸುರಕ್ಷತೆ
ಈ ಯೋಜನೆಯ ಅವಧಿ ಐದು ವರ್ಷಗಳವರೆ ಮಾಡಬಹುದು. ನಂತರ ನಿಮ್ಮ ಸಂಪೂರ್ಣ ಹೂಡಿಕೆ ಮೊತ್ತವನ್ನು ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ. ಮಧ್ಯಂತರದಲ್ಲಿ ಬಡ್ಡಿ ಮಾತ್ರ ಪ್ರತಿ ತಿಂಗಳು ದೊರೆಯುತ್ತದೆ. ಇದನ್ನು ಬಳಸಲು ನೀವು ಅಂಚೆ ಕಚೇರಿಯ ಉಳಿತಾಯ ಖಾತೆ (Post Office Savings Account) ಇರಬೇಕು. ಯೋಜನೆ ಸರಳವಾಗಿದ್ದು, ಯಾವುದೇ ಜಟಿಲ ನಿಯಮಗಳಿಲ್ಲ. ಹೂಡಿಕೆ ಸುರಕ್ಷಿತವಾಗಿದ್ದು, ಸರ್ಕಾರದ ಆಶ್ರಯದಲ್ಲಿರುವುದರಿಂದ ಯಾವುದೇ ಅಪಾಯ ಇಲ್ಲ.
ಯಾರಿಗಾಗಿ ಈ ಯೋಜನೆ ಸೂಕ್ತ?
ಈ ಯೋಜನೆ ನಿವೃತ್ತ ವ್ಯಕ್ತಿಗಳು, ಗೃಹಿಣಿಯರು, ಅಥವಾ ಸ್ಥಿರ ಆದಾಯವನ್ನು ಬಯಸುವ ಯಾರಿಗಾದರೂ ಅತ್ಯುತ್ತಮ. ಹೂಡಿಕೆ ಮಾಡಿದ ನಂತರ ಮಾರುಕಟ್ಟೆ ಏರಿಳಿತದಿಂದ ಯಾವುದೇ ಪರಿಣಾಮವಿಲ್ಲದೆ ಪ್ರತೀ ತಿಂಗಳು ಖಚಿತ ಬಡ್ಡಿ ಸಿಗುತ್ತದೆ.