)
Post Office savings scheme: ಅಂಚೆ ಕಚೇರಿಯು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂಬ ವಿಶಿಷ್ಟ ಉಳಿತಾಯ ಯೋಜನೆಯನ್ನ ನೀಡುತ್ತದೆ. ಭಾರತ ಸರ್ಕಾರದ ಬೆಂಬಲದೊಂದಿಗೆ ಈ ಯೋಜನೆಯು ಸುರಕ್ಷಿತ ಹೂಡಿಕೆಗಳು ಮತ್ತು ಖಾತರಿಯ ಆದಾಯವನ್ನ ನೀಡುತ್ತದೆ. ಮಧ್ಯಮ ವರ್ಗ ಮತ್ತು ಸಣ್ಣ ಹೂಡಿಕೆದಾರರಿಗೆ ಇದು ಉತ್ತಮ ಹೂಡಿಕೆ ಸಾಧನವಾಗಿದೆ. ಈ ಯೋಜನೆಯು ಮಾರುಕಟ್ಟೆಯ ಏರಿಳಿತಗಳಿಂದ ಮುಕ್ತವಾಗಿದೆ.
ಪೋಸ್ಟ್ ಆಫೀಸ್ NSC ಯೋಜನೆಯ ಹೂಡಿಕೆ ಅವಧಿ 5 ವರ್ಷಗಳು. ಕನಿಷ್ಠ ಹೂಡಿಕೆ ಮೊತ್ತ ₹1,000. ಇಲ್ಲಿ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಬಡ್ಡಿದರವನ್ನ ಭಾರತ ಸರ್ಕಾರವು ತ್ರೈಮಾಸಿಕಕ್ಕೆ ಒಮ್ಮೆ ಪರಿಶೀಲಿಸುತ್ತದೆ.
ಅಧಿಕೃತ ವೆಬ್ಸೈಟ್ ಪ್ರಕಾರ, ಈ ಯೋಜನೆಯಲ್ಲಿ ಹೂಡಿಕೆದಾರರು ಭಾರತದ ನಿವಾಸಿಗಳಾಗಿರಬೇಕು. ಅನಿವಾಸಿ ಭಾರತೀಯರು (NRI ಗಳು), ಹಿಂದೂ ಅವಿಭಜಿತ ಕುಟುಂಬಗಳು (HUF ಗಳು), ಟ್ರಸ್ಟ್ಗಳು ಮತ್ತು ಕಂಪನಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಲ್ಲ.
ಅಂಚೆ ಕಚೇರಿಯ NSC ಉಳಿತಾಯ ಯೋಜನೆಯು ಪ್ರಸ್ತುತ ವಾರ್ಷಿಕ ಶೇ.7.7ರ ಬಡ್ಡಿದರವನ್ನ ನೀಡುತ್ತದೆ. ಇದರ ಆಧಾರದ ಮೇಲೆ ನೀವು ಈ ಯೋಜನೆಯಲ್ಲಿ ₹350,000 ಠೇವಣಿ ಇಟ್ಟರೆ, ಅವಧಿ ಮುಗಿದ ನಂತರ ಅಂದರೆ 5 ವರ್ಷಗಳಲ್ಲಿ ₹157,162ರ ಖಾತರಿಯ ಲಾಭವನ್ನ ನೀವು ಪಡೆಯುತ್ತೀರಿ. ಹೀಗಾಗಿ ನಿಮಗೆ ಒಟ್ಟು ₹507,162 ದೊಡ್ಡ ಮೊತ್ತ ಸಿಗುತ್ತದೆ.
ಅಂಚೆ ಕಚೇರಿಯ NSC ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. NSC ಐದು ವರ್ಷಗಳ ಲಾಕ್-ಇನ್ ಅವಧಿಯನ್ನ ಹೊಂದಿದೆ. NSCಗಳು ಸ್ಥಿರ ಬಡ್ಡಿಯನ್ನ ನೀಡುತ್ತವೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)