)
savings scheme: ನಿಮ್ಮ ಹಣವನ್ನು ಸುರಕ್ಷಿತವಾಗಿ ಠೇವಣಿ ಇಡಲು ಇರುವ ಸರಿಯಾದ ಜಾಗವೇ ಅಂಚೆ ಕಛೇರಿ. ಬಹಳಷ್ಟು ಜನರಿಗೆ ಅಂಚೆ ಕಛೇರಿಯಲ್ಲಿನ ಪ್ರಮುಖ ಯೋಜನೆಗಳಾದ Time Deposit (TD) ಅಥವಾ ಫಿಕ್ಸ್ಡ್ ಡೆಪಾಸಿಟ್ (FD) ಮಾಹಿತಿ ಇರುವುದಿಲ್ಲ. ನಾವು ಹೇಳುವ ಈ ಪ್ಲಾನ್ನಿಂದ ನೀವು ಕೇವಲ ಠೇವಣಿಯಿಂದಲೇ ₹45,573 ರಷ್ಟು ಬಡ್ಡಿ ಗಳಿಸಬಹುದಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂಚೆ ಇಲಾಖೆಯು ಶುರುಮಾಡುದ ಈ ಈ ಯೋಜನೆಯು ಇತರ ಬ್ಯಾಂಕ್ಗಳಲ್ಲಿ ಇರುವ ಫಿಕ್ಸ್ಡ್ ಡೆಪಾಸಿಟ್ಗಳಂತೆಯೇ. ಇದು ಭಾರತದ ಸರ್ಕಾರದ ಭದ್ರತೆ ಹೊಂದಿರುವ ಯೋಜನೆಯಾಗಿದೆ. ಆದ್ದರಿಂದ ಇದರಲ್ಲಿ ಹಣ ಹೂಡಿಕೆ ಮಾಡಿವುದು ಸಂಪೂರ್ಣ ಸೇಫ್ ಆಗಿದೆ. ಇದರ ಬಡ್ಡಿದರಗಳು ಪ್ರತಿವರ್ಷ ಸರ್ಕಾರದಿಂದ ನಿಗದಿಯಾಗುತ್ತವೆ.
₹1 ಲಕ್ಷ ಠೇವಣಿಗೆ ಎಷ್ಟು ಲಾಭ ಸಿಗುತ್ತದೆ?
ಇದರನುಸಾರ ನೀವೆನಾದರೂ ₹1,00,000 ರೂಪಾಯಿಗಳನ್ನು 5 ವರ್ಷಗಳ ಕಾಲ ಅಂಚೆ ಕಚೇರಿಯಲ್ಲಿ Time Deposit ರೂಪದಲ್ಲಿ ಠೇವಣಿ ಇಟ್ಟರೆ, 5 ವರ್ಷದ ಕಾಲಾವಧಿಗೆ ಇದರ ಪ್ರಸ್ತುತ ಬಡ್ಡಿದರವು ಸುಮಾರು 7.5% ವಾರ್ಷಿಕ ಆಗುತ್ತದೆ. ಇದರಂತೆ ಲೆಕ್ಕ ಹಾಕಿದರೆ, 5 ವರ್ಷಗಳಾದ ನಂತರ ನೀವು ಒಟ್ಟು ₹1,45,573 ಪಡೆಯಬಹುದು. ನೀವು ಹೋಡಿಕೆ ಮಾಡಿದ ಹಣಕ್ಕೆ ಬರೊಬ್ಬರಿ ₹45,573 ರಷ್ಟು ಮೊತ್ತ ನಿಮಗೆ ಬಡ್ಡಿಯ ರೂಪದಲ್ಲಿ ಲಾಭವಾಗುತ್ತದೆ.
ವರ್ಷಗಳ ಅನುಸಾರ ಎಷ್ಟು ಬಡ್ಡಿ ಏರುತ್ತದೆ?
ಹೊಸ ಬಡ್ಡಿ ದರದ ಪ್ರಕಾರ ನೀವು 1 ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿಟ್ಟರೆ, ನಿಮಗೆ ಸಿಗುವ ಒಟ್ಟು ಹಣ ಹೀಗಿದೆ:
1 ವರ್ಷಕ್ಕೆ: ₹1,06,900
2 ವರ್ಷಕ್ಕೆ: ₹1,14,241
3 ವರ್ಷಕ್ಕೆ: ₹1,22,078
5 ವರ್ಷಕ್ಕೆ: ₹1,45,573 (7.7% ಬಡ್ಡಿಯಲ್ಲಿ)
ಈ ರೀತಿಯಲ್ಲಿ ಈ ಯೋಜನೆಯಿಂದ ವ್ಯವಸ್ಥಿತವಾಗಿ ಸಾರ್ವಜನಿಜರಿಗೆ ಐದು ವರ್ಷಗಳ ಠೇವಣಿಯಲ್ಲಿ ಅತ್ಯುತ್ತಮ ಲಾಭ ಸಿಗುತ್ತದೆ. ನಿಮ್ಮ ಹಣಕ್ಕೆ ತ್ರೈಮಾಸಿಕವಾಗಿ (ಪ್ರತಿ ಮೂರು ತಿಂಗಳಿಗೆ) ಚಕ್ರಬಡ್ಡಿ ಲೆಕ್ಕ ಹಾಕಲಾಗುತ್ತದೆ. ಇದಕ್ಕನುಗುಣವಾಗಿ ನೀವು ಎಷ್ಟು ವರ್ಷಗಳ ಕಾಲ ಹಣವನ್ನು ಠೇವಣಿ ಮಾಡುತ್ತೀರಿ ಅನ್ನುವುದರ ಮೇಲೆ ಬಡ್ಡಿ ದರ ಹೆಚ್ಚಾಗುತ್ತಾ ಹೋಗುತ್ತದೆ.
ಸೂಚನೆ: ಬಡ್ಡಿದರಗಳಲ್ಲಿ ಸಮಯಾನುಸಾರ ಬದಲಾವಣೆ ಆಗಬಹುದು. ಯಾವ ಸಮಯದಲ್ಲಿ ನೀವು ಠೇವಣಿ ಇಡುತ್ತೀರೋ ಆ ಸಮಯದ ಬಡ್ಡಿದರ ಪ್ರಕಾರ ಲಾಭ ಸಿಗುತ್ತದೆ.