Post Office Scheme : ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ, ವರ್ಷಕ್ಕೆ 6600 ಬಡ್ಡಿ ಪಡೆಯಿರಿ
ಅಂಚೆ ಕಚೇರಿಯ ಹೂಡಿಕೆಯಲ್ಲೇ ಜನರಿಗೆ ಒಳ್ಳೆ ಆದಾಯ ಸಿಗುತ್ತಿದೆ. ವರ್ಷದ ಅವಧಿಗೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ, ತಿಂಗಳಿಗೆ ನಿಮಗೆ 550 ರೂಪಾಯಿ ಬಡ್ಡಿ ಸಿಗಲಿದೆ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ 6600 ರೂಪಾಯಿ ಸಿಗಲಿದೆ.
ಬೆಂಗಳೂರು : ಹೂಡಿಕೆಗೆ ಉತ್ತಮ ಬಡ್ಡಿ ನೀಡುವಲ್ಲಿ ಈಗ ಬ್ಯಾಂಕ್ ಗಿಂತ ಅಂಚೆ ಕಚೇರಿಗಳೇ ಪರವಾಗಿಲ್ಲ. ಅಂಚೆ ಕಚೇರಿಯ ಹೂಡಿಕೆಯಲ್ಲೇ (Post office investment) ಜನರಿಗೆ ಒಳ್ಳೆ ಆದಾಯ ಸಿಗುತ್ತಿದೆ. ನಿಮಗೆ ತಿಂಗಳಿಗೆ ಒಂದಷ್ಟು ನಿಶ್ಚಿತ ಆದಾಯ ಬೇಕು ಎಂದಾದರೆ, ಅಂಚೆ ಕಚೇರಿಯ ಮಾಸಿಕ ಆದಾಯ ಸ್ಕೀಮ್ (Monthly income scheme) ಮೇಲೆ ಹೂಡಿಕೆ ಮಾಡಬಹುದು.
ಒಂದು ಲಕ್ಷಕ್ಕೆ ಎಷ್ಟು ಆದಾಯ..?
ನೀವು 5 ವರ್ಷದ ಅವಧಿಗೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ, ತಿಂಗಳಿಗೆ ನಿಮಗೆ 550 ರೂಪಾಯಿ ಬಡ್ಡಿ (Interest) ಸಿಗಲಿದೆ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ 6600 ರೂಪಾಯಿ ಸಿಗಲಿದೆ. ಇದರಲ್ಲಿ ಶೇ. 6.6ರ ಪ್ರಮಾಣದಲ್ಲಿ ಬಡ್ಡಿ ಸಿಗಲಿದೆ. 5 ವರ್ಷದ ಬಳಿಕ ನಿಮಗೆ ಮೂಲಧನ ಸಿಗಲಿದೆ. ಬೇಕಾದರೆ ಮೂಲಧನದ ಮೆಚ್ಯೂರಿಟಿ (Maturity) ಅವಧಿಯನ್ನು ವಿಸ್ತರಣೆ ಮಾಡಬಹುದು. ವಿಸ್ತರಣೆ ಮಾಡಿದಷ್ಟು ಕಾಲ ನಿಮಗೆ ಬಡ್ಡಿ ಸಿಗುತ್ತದೆ. ಈ ಸ್ಕೀಮ್ನಲ್ಲಿ (Scheme) ಗರಿಷ್ಠ 4.5 ಲಕ್ಷ ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದರೆ, (Joint account)9 ಲಕ್ಷ ರೂಪಾಯಿ ಗರಿಷ್ಠ ಮಿತಿ ಯಾಗಿದೆ. 9 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ 4,950 ರೂಪಾಯಿ ಬಡ್ಡಿ ಸಿಗಲಿದೆ.
ಇದನ್ನೂ ಓದಿ : RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel
ಯಾರೆಲ್ಲಾ ಈ ಸ್ಕೀಮ್ ಮಾಡಿಸಬಹುದು.?
18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಸ್ಕೀಮ್ ಮಾಡಬಹುದು. 10 ವರ್ಷ ಮೇಲ್ಟಟ್ಟ ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದು. ಹತ್ತು ವರ್ಷಕ್ಕಿಂತ ಕಡಿಮೆ ಇದ್ದರೆ ಆ ಮಕ್ಕಳ ಪೋಷಕರ ಹೆಸರಿನಲ್ಲಿ ಖಾತೆ ತೆರೆಯಬಹುದು.
ಮನೆಯಲ್ಲಿ ಕುಳಿತೇ ಖಾತೆ ತೆರೆಯಬಹುದು:
ಮನೆಯಲ್ಲಿ ಕುಳಿತೇ ಖಾತೆ ತೆರೆಯಲು ಹೀಗೆ ಮಾಡಿ.
1. ಮೊಬೈಲಿನಲ್ಲಿ (Mobile) ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ ಆಪ್ ಓಪನ್ ಮಾಡಿ
2. ಅದರಲ್ಲಿ ಒಪನ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ.
3. ನಂತರ ಪ್ಯಾನ್ ಕಾರ್ಡ್ (Pancard) ಅಥವಾ ಆಧಾರ್ ನಂಬರ್ (Aadhaar) ನಮೂದಿಸಿ
4. ರಿಜಿಸ್ಟರ್ಡ್ ಪೋನ್ ನಂಬರ ಲ್ಲಿ ಬರುವ ಒಟಿಪಿ ಹಾಕಿ
5. ನಾಮಿನಿ ಸೇರಿ ನಿಮ್ಮ ವೈಯುಕ್ತಿಕ ಮಾಹಿತಿಗಳನ್ನು ಹಾಕಿ
6. ಎಲ್ಲಾ ಮಾಹಿತಿ ಹಾಕಿದ ಮೇಲೆ Submit ಬಟನ್ ಕ್ಲಿಕ್ ಮಾಡಿ
7. ಸ್ವಲ್ಪ ಹೊತ್ತಿನಲ್ಲಿ ಅಂಚೆ ಕಚೇರಿಯಲ್ಲಿ (Post office) ನಿಮ್ಮ ಖಾತೆ ಓಪನ್ ಆಗಿರುತ್ತದೆ.
8. ಡಿಜಿಟಲ್ ಸೇವಿಂಗ್ಸ್ ಖಾತೆ ಒಂದು ವರ್ಷಕಷ್ಟೇ ಸೀಮಿತ ಇರುತ್ತದೆ
9. ಬಯೋಮೆಟ್ರಿಕ್ ಪ್ರಮಾಣ ಪೂರ್ಣಗೊಂಡ ಮೇಲಷ್ಟೇ ಇದು ಮತ್ತೆ ಚಾಲ್ತಿಗೆ ಬರುತ್ತದೆ.
ಇದನ್ನೂ ಓದಿ : LIC Policy : ಕಡಿಮೆ ಹೂಡಿಕೆ ಅಧಿಕ ಲಾಭ, ಬಂದಿದೆ ಎಲ್ಐ ಸಿಯ ಹೊಸ ಪಾಲಿಸಿ ಬಿಮಾ ಜ್ಯೋತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.