)
ಆದಾಯವನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಖರವಾಗಿ ಉತ್ತಮ ಆದಾಯವನ್ನು ಗಳಿಸಬಹುದು. ಅದರಲ್ಲಿಯೂ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯ ಗಳಿಸಲು ಸರಿಯಾದ ಮಾರ್ಗ. ಇಲ್ಲಿ ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡಿ ಕೊಡುವ ಅದ್ಭುತ ಯೋಜನೆ ಇದು.
ನೀವು ದೀರ್ಘಾವಧಿಯ ಹೂಡಿಕೆಯ ಮೇಲೆ ಉತ್ತಮ ಬಡ್ಡಿಯನ್ನು ಪಡೆಯಬಹುದಾದ ಉತ್ತಮ ಯೋಜನೆಯನ್ನು ಹುಡುಕುತ್ತಿದ್ದರೆ, ಕಿಸಾನ್ ವಿಕಾಸ್ ಪತ್ರ (KVP) ಉತ್ತಮ ಆಯ್ಕೆಯಾಗಿದೆ. ಇದನ್ನು ಅಂಚೆ ಕಚೇರಿಯ ಉಳಿತಾಯ ಯೋಜನೆ ಎಂದು ಪರಿಗಣಿಸಲಾಗುತ್ತದೆ. ಈ ಯೋಜನೆಯ ಅತ್ಯಂತ ವಿಶೇಷವಾದ ವಿಷಯವೆಂದರೆ ಇದರಲ್ಲಿ ಹೂಡಿಕೆ ಮಾಡಿದ ಮೊತ್ತವು 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ ಅಂದರೆ ಡಬಲ್ ಆಗುತ್ತದೆ.
ಯಾರು KVP ಖಾತೆಯನ್ನು ತೆರೆಯಬಹುದು? :
ಕಿಸಾನ್ ವಿಕಾಸ್ ಪತ್ರ ಯೋಜನೆಯಡಿಯಲ್ಲಿ, ಯಾವುದೇ ವಯಸ್ಸಿವನರು ಒಬ್ಬಂಟಿಯಾಗಿ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು. ಇದಲ್ಲದೆ, 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸಹ ತಮ್ಮ ಹೆಸರಿನಲ್ಲಿ KVP ಖಾತೆಯನ್ನು ತೆರೆಯಬಹುದು. ಇದಲ್ಲದೆ, ಅಪ್ರಾಪ್ತರ ಮತ್ತು ಮಾನಸಿಕ ಅಸ್ಥಿರ ವ್ಯಕ್ತಿಯ ಪೋಷಕರು ಸಹ ಖಾತೆಯನ್ನು ತೆರೆಯಬಹುದು.
1000 ರೂಪಾಯಿಗಳಿಂದ ಹೂಡಿಕೆ :
ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿಗಳಿಂದ ಹೂಡಿಕೆ ಮಾಡಬಹುದು. ಇದರಲ್ಲಿರುವ ಒಂದು ವಿಶೇಷವೆಂದರೆ KVP ಯಲ್ಲಿ ಎಷ್ಟು ಬೇಕಾದರೂ ಹಣವನ್ನು ಹೂಡಿಕೆ ಮಾಡಬಹುದು ಇಲ್ಲಿ ಮಾಡುವ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ.
ಹೂಡಿಕೆಯ ಮೊತ್ತವು 115 ತಿಂಗಳಲ್ಲಿ ಡಬಲ್ :
KVPಯಲ್ಲಿ ಮಾಡಿದ ಹೂಡಿಕೆ ಮೇಲೆ 7.5% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಮೊತ್ತವು 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂದರೆ ನೀವು 1 ಲಕ್ಷ ರೂ. ಹೂಡಿಕೆ ಮಾಡಿದರೆ, 115 ತಿಂಗಳ ನಂತರ 2 ಲಕ್ಷ ರೂ. ಸಿಗುತ್ತದೆ. KVP ಖಾತೆಯಲ್ಲಿ 10 ಲಕ್ಷ ರೂ. ಠೇವಣಿ ಇಟ್ಟರೆ, 20 ಲಕ್ಷ ರೂ.ಗೆ ಪರಿವರ್ತಿಸಬಹುದು.