)
Post Office SCSS : ಅಂಚೆ ಕಚೇರಿ ಇದೀಗ ನಿವೃತ್ತಿಯ ನಂತರ ಬಡ್ಡಿಯಿಂದ ಸ್ಥಿರ ಆದಾಯ ಪಡೆಯಲು ಬಯಸುವವರಿಗೆ ಅದ್ಭುತ ಹೂಡಿಕೆಯ ಅವಕಾಶ ನೀಡುತ್ತಿದೆ. ಸಿನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ (SCSS) ಮೂಲಕ, ಕೇವಲ ಐದು ವರ್ಷಗಳಲ್ಲಿ ₹12.3 ಲಕ್ಷಕ್ಕೂ ಹೆಚ್ಚು ಬಡ್ಡಿ ಗಳಿಸಲು ಸಾಧ್ಯವಿದೆ. ಈ ಯೋಜನೆ ಪ್ರಸ್ತುತ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತಿದೆ. ಉದಾಹರಣೆಗೆ, ₹30 ಲಕ್ಷ ಹೂಡಿಕೆಗೆ, ಪ್ರತಿ ತಿಂಗಳು ಸರಿಸುಮಾರು ₹20,500 ಬಡ್ಡಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ, ಅಥವಾ ವಾರ್ಷಿಕವಾಗಿ ₹2.46 ಲಕ್ಷ ಬಡ್ಡಿ ಲಭ್ಯವಾಗುತ್ತದೆ.
ಹೆಚ್ಚಿನ ಸ್ಥಿರತೆ ಇಲ್ಲದ ಬ್ಯಾಂಕ್ FDಗಳು ಸಾಮಾನ್ಯವಾಗಿ 6–7% ಬಡ್ಡಿ ನೀಡುತ್ತವೆ. ಆದರೆ SCSS ಯೋಜನೆಯು ಸರ್ಕಾರಿ ಖಾತರಿ ಒದಗಿಸುತ್ತಿದ್ದು, ಯಾವುದೇ ಅಪಾಯವಿಲ್ಲದೆ ನಿರ್ಧಿಷ್ಟ ಆದಾಯವನ್ನು ನೀಡುತ್ತದೆ. ಹೀಗಾಗಿ ನಿವೃತ್ತಿ ನಂತರ ಆರ್ಥಿಕ ಭದ್ರತೆ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ. ಹಿಂದೆ ಈ ಯೋಜನೆ ₹15 ಲಕ್ಷದವರೆಗೆ ಮಾತ್ರ ಹೂಡಿಕೆಗೆ ಅವಕಾಶ ನೀಡುತ್ತಿದ್ದರೆ, ಇದೀಗ ಸರ್ಕಾರ ಮಿತಿಯನ್ನು ₹30 ಲಕ್ಷಕ್ಕೆ ಹೆಚ್ಚಿಸಿದೆ. ಇದರಿಂದ ಹೂಡಿಕೆದಾರರು ಹೆಚ್ಚು ಲಾಭ ಪಡೆಯಬಹುದು. ಗಂಡ–ಹೆಂಡತಿ ಇಬ್ಬರೂ ಖಾತೆ ತೆರೆಯುವ ಮೂಲಕ ಪ್ರಯೋಜನವನ್ನು ಇನ್ನಷ್ಟು ಹೆಚ್ಚಿಸಬಹುದು.
ಹೂಡಿಕೆದಾರರ ಸಂಪೂರ್ಣ ಬಂಡವಾಳ ಸುರಕ್ಷಿತವಾಗಿದ್ದು, ಬಡ್ಡಿ ಹಣ ಸಮಯಕ್ಕೆ ಸರಿಯಾಗಿ ನೀಡಲಾಗುತ್ತದೆ. ಐದು ವರ್ಷಗಳ ನಂತರ ಹೂಡಿಕೆಯನ್ನು ವಿಸ್ತರಿಸುವ ಅವಕಾಶವಿರುವುದರಿಂದ, ಲಾಭವನ್ನು ಮುಂದುವರಿಸಲು ಸಾಧ್ಯವಿದೆ. ಇನ್ನೊಂದು ವಿಶೇಷ ಲಾಭವೆಂದರೆ, SCSS ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿತಾಯ ಕೂಡ ಲಭಿಸುತ್ತದೆ. ಬಡ್ಡಿಗೆ ತೆರಿಗೆ ವಿಧಿಸಬಹುದು ಆದರೆ ಒಟ್ಟಾರೆ ತೆರಿಗೆ ಹೊಣೆಗಾರಿಕೆ ಕಡಿಮೆಯಾಗುತ್ತದೆ. ಹೀಗಾಗಿ, ನಿವೃತ್ತಿ ಜೀವನದಲ್ಲಿ ಚಿಂತೆಯಿಲ್ಲದೆ, ಸ್ಥಿರ ಆದಾಯ ಮತ್ತು ಸುರಕ್ಷಿತ ಹೂಡಿಕೆ ಬಯಸುವವರಿಗೆ SCSS ಯೋಜನೆ ಅತ್ಯಂತ ಉತ್ತಮ ಆಯ್ಕೆ ಎಂದು ಹೇಳಬಹುದು.