ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ; ಸಂಪೂರ್ಣ ಮಾಹಿತಿ ಇಲ್ಲಿದೆ

Post Office Scheme: ಕಿಸಾನ್ ವಿಕಾಸ್ ಪತ್ರವು ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿ ನಿಮ್ಮ ಹಣವು ನೇರವಾಗಿ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ನೀವು ಎಷ್ಟೇ ಮೊತ್ತದ ಹಣ ಹೂಡಿಕೆ ಮಾಡಿದರೂ ಅದು ದ್ವಿಗುಣಗೊಳ್ಳುತ್ತದೆ.

Written by - Puttaraj K Alur | Last Updated : Apr 23, 2025, 04:22 PM IST
  • ಕಿಸಾನ್ ವಿಕಾಸ್ ಪತ್ರವು ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿ ನಿಮ್ಮ ಹಣ ಡಬಲ್‌ ಆಗುತ್ತೆ
  • ಕೆವಿಪಿ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಶೇ.7.5 ರಷ್ಟು ಬಡ್ಡಿ ದೊರೆಯುತ್ತದೆ
  • ಕೆವಿಪಿ ಯೋಜನೆಯಲ್ಲಿ ನೀವು ಎಷ್ಟು ಮೊತ್ತದ ಹಣವನ್ನಾದರೂ ಹೂಡಿಕೆ ಮಾಡಬಹುದು
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ; ಸಂಪೂರ್ಣ ಮಾಹಿತಿ ಇಲ್ಲಿದೆ

Post Office Scheme: ಅಂಚೆ ಕಚೇರಿ ತನ್ನ ಗ್ರಾಹಕರಿಗಾಗಿ ವಿವಿಧ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡಿದ ನಂತರ, ಎಲ್ಲಾ ಬ್ಯಾಂಕುಗಳು ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿದ್ದರೂ, ಅಂಚೆ ಕಚೇರಿ ತನ್ನ ಯಾವುದೇ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿಲ್ಲ. ಅಂಚೆ ಕಚೇರಿಯು ನಿಮ್ಮ ಹಣವನ್ನು ನೇರವಾಗಿ ದ್ವಿಗುಣಗೊಳಿಸುವ ಅಂದರೆ ಹಣ ಡಬಲ್‌ ಮಾಡುವ ಯೋಜನೆಯನ್ನು ಹೊಂದಿದೆ. ಇಂದು ನಾವು ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP) ಯೋಜನೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದರಲ್ಲಿ ನಿಮ್ಮ ಹಣವು ನಿಗದಿತ ಅವಧಿಯಲ್ಲಿ ನೇರವಾಗಿ ಡಬಲ್‌ ಆಗುತ್ತದೆ.  

Add Zee News as a Preferred Source

ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಹೊಸ ಸೌಲಭ್ಯ ಪ್ರಾರಂಭಿಸಿದ Income Tax ವಿಭಾಗ : ಇವರಿಗೆ ಆಗುವುದು ಹೆಚ್ಚಿನ ಅನುಕೂಲ ! ಬಳಸುವ ವಿಧಾನ ಹೇಗೆ ?

KVP ಯೋಜನೆಯಲ್ಲಿ ಶೇ.7.5 ರಷ್ಟು ಬಡ್ಡಿ  

ಕಿಸಾನ್ ವಿಕಾಸ್ ಪತ್ರವು ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿ ನಿಮ್ಮ ಹಣವು ನೇರವಾಗಿ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ನೀವು ಯಾವುದೇ ಹಣ ಹೂಡಿಕೆ ಮಾಡಿದರೂ ಅದು ದ್ವಿಗುಣಗೊಳ್ಳುತ್ತದೆ. ಈಗ ನೀವು ಅದರಲ್ಲಿ 1 ಲಕ್ಷ ರೂ. ಹೂಡಿಕೆ ಮಾಡುತ್ತಿರಲಿ ಅಥವಾ 1 ಕೋಟಿ ರೂ. ಹೂಡಿಕೆ ಮಾಡುತ್ತಿರಲಿ. ಅಂಚೆ ಕಚೇರಿಯ ಕೆವಿಪಿ ಯೋಜನೆಯಲ್ಲಿ lump sum ಹೂಡಿಕೆ ಮಾಡಲಾಗುತ್ತದೆ. ಪ್ರಸ್ತುತ ಈ ಯೋಜನೆಗೆ ಶೇ.7.5ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನೀವು ಕನಿಷ್ಠ 1000 ರೂ.ಗಳನ್ನು ಠೇವಣಿ ಇಡಬಹುದು. ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಅಂದರೆ ನೀವು ಎಷ್ಟು ಬೇಕಾದರೂ ಅದರಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: EPFO: Job ಬದಲಿಸಿದ ಕೂಡಲೇ ಈ ಕೆಲಸ ಮಾಡಿ, ಇಲ್ಲವೇ ಸಿಗಲ್ಲ ಈ ಸೌಲಭ್ಯ!

9 ವರ್ಷ 7 ತಿಂಗಳುಗಳಲ್ಲಿ ಪಕ್ವವಾಗುತ್ತದೆ

ಈ ಅಂಚೆ ಕಚೇರಿ ಯೋಜನೆಯು 115 ತಿಂಗಳುಗಳಲ್ಲಿ ಅಂದರೆ 9 ವರ್ಷ 7 ತಿಂಗಳುಗಳಲ್ಲಿ ಪಕ್ವವಾಗುತ್ತದೆ. ಅಂದರೆ ಈ ಯೋಜನೆಯಲ್ಲಿ ನಿಮ್ಮ ಹಣವು 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಇದು ಸ್ಥಿರ ರಿಟರ್ನ್ ಯೋಜನೆಯಾಗಿದ್ದು, ಇದರಲ್ಲಿ ಪೂರ್ಣ ಖಾತರಿಯೊಂದಿಗೆ ಸ್ಥಿರ ರಿಟರ್ನ್‌ಗಳು ಲಭ್ಯವಿದೆ. ಈ ಯೋಜನೆಯಲ್ಲಿ ಒಂದೇ ಖಾತೆಯ ಜೊತೆಗೆ, ಜಂಟಿ ಖಾತೆಯನ್ನು ಸಹ ತೆರೆಯಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ 3 ವ್ಯಕ್ತಿಗಳ ಹೆಸರುಗಳನ್ನು ಸೇರಿಸಬಹುದು. ಇದು ಅಂಚೆ ಕಚೇರಿ ಯೋಜನೆಯಾಗಿದ್ದು, ಅಂಚೆ ಕಚೇರಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತದೆ. ಅಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News