)
Post Office PPF: ನಿಮ್ಮ ಬಳಿ ಸ್ವಲ್ಪ ಹಣವಿದ್ದರೆ ಏನು ಮಾಡುತ್ತೀರಿ? ನೀವು ಆ ಹಣದಿಂದ ಯಾವುದಾದರೂ ವ್ಯವಹಾರ ಮಾಡಬಹುದು. ಆ ಬ್ಯುಸಿನೆಸ್ ಯಶಸ್ವಿಯಾದರೆ ಪರವಾಗಿಲ್ಲ, ಇಲ್ಲದಿದ್ದರೆ ಎಲ್ಲಾ ಹಣವೂ ಕಳೆದುಹೋಗುತ್ತದೆ. ನೀವು ಅದೇ ಹಣವನ್ನ ಯಾರಿಗಾದರೂ ಬಡ್ಡಿಗೆ ನೀಡಬಹುದು, ಅವರು ಆ ಹಣವನ್ನ ಸಮಯಕ್ಕೆ ಹಿಂದಿರುಗಿಸಿದರೆ ಪರವಾಗಿಲ್ಲ, ಇಲ್ಲದಿದ್ದರೆ ಅದನ್ನ ಮರಳಿ ಪಡೆಯುವುದು ಕಷ್ಟ. ಅದೇ ಹಣದಿಂದ ನೀವು ಮಾರಾಟವಾಗದ ಭೂಮಿಯನ್ನ ಖರೀದಿಸಬಹುದು.. ಭವಿಷ್ಯದಲ್ಲಿ ಅದರ ಬೆಲೆ ಹೆಚ್ಚಾದರೆ ಪರವಾಗಿಲ್ಲ. ಒಂದು ವೇಳೆ ನೀವು ಅಂದುಕೊಂಡಷ್ಟು ಹಣ ಸಿಗದಿದ್ದರೆ ಏನು ಮಾಡುತ್ತೀರಿ? ನೀವು ಹೂಡಿಕೆ ಮಾಡಿದ ಭೂಮಿ ಬೇರೆಯವರ ಪಾಲಾದರೆ ನಿಮ್ಮ ಎಲ್ಲಾ ಹಣ ಕಳೆದುಹೋದಂತೆ. ಹಣ ಹೂಡಿಕೆಯ ಪ್ರತಿಯೊಂದು ಮಾರ್ಗದಲ್ಲೂ ಖಂಡಿತ ಅಪಾಯವಿದೆ. ನಿಮ್ಮ ಹಣ ಯಾವುದೇ ಅಪಾಯವಿಲ್ಲದೆ ಅಭಿವೃದ್ಧಿಯಾದರೆ, ಇದ್ದಕ್ಕಿದ್ದಂತೆಯೇ ನಿಮಗೆ 90 ಲಕ್ಷ ರೂಪಾಯಿ ಸಿಕ್ಕರೆ!? ಇದು ಉತ್ತಮವಲ್ಲವೇ.. ಈಗ ಯಾವುದೇ ರೀತಿಯ ಅಪಾಯವಿಲ್ಲದಂತಹ ಉತ್ತಮ ಉಳಿತಾಯ ಯೋಜನೆಯ ಬಗ್ಗೆ ತಿಳಿಯಿರಿ...
ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ.. ಸಂಪೂರ್ಣ ಭರವಸೆಯೊಂದಿಗೆ ಹೂಡಿಕೆಯ ಮೇಲೆ ಖಾತರಿಯ ಲಾಭವನ್ನ ನೀಡುವ ಅತ್ಯುತ್ತಮ ಯೋಜನೆ. ಅನೇಕ ಜನರು ಪಿಪಿಎಫ್ ಅನ್ನ ತಮ್ಮ ನಿವೃತ್ತಿ ಯೋಜನೆಗೆ ಉತ್ತಮ ಹೂಡಿಕೆ ಆಯ್ಕೆಯೆಂದು ಪರಿಗಣಿಸುತ್ತಾರೆ. ಸುರಕ್ಷಿತ ಆದಾಯ ಬಯಸುವವರಿಗೆ ಈ ಸಣ್ಣ ಉಳಿತಾಯ ಯೋಜನೆ ಉತ್ತಮವಾಗಿದೆ. ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ತನ್ನ ಬಡ್ಡಿದರಗಳನ್ನ ಬದಲಾಯಿಸುತ್ತದೆ. ಪ್ರಸ್ತುತ ಪಿಪಿಎಫ್ ಮೇಲಿನ ಬಡ್ಡಿದರವು ಶೇ.7.1ರಷ್ಟಿದೆ.
ನೀವು ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಕನಿಷ್ಠ 500 ರೂ. ಮತ್ತು ಗರಿಷ್ಠ 1 ಲಕ್ಷ ರೂ. ಹೂಡಿಕೆ ಮಾಡಬಹುದು. ಇದಲ್ಲದೆ ಸಾರ್ವಜನಿಕ ಭವಿಷ್ಯ ನಿಧಿಯ ಅಡಿಯಲ್ಲಿ ಮಾಡಿದ ಹೂಡಿಕೆಗಳು ತೆರಿಗೆ ವಿನಾಯಿತಿ ಹೊಂದಿರುತ್ತದೆ. ಈ ಯೋಜನೆಯು 15 ವರ್ಷಗಳವರೆಗೆ ಪೂರ್ಣಗೊಳ್ಳುತ್ತದೆ. ನಂತರ ಪ್ರತಿ 5 ವರ್ಷಗಳಿಗೊಮ್ಮೆ ಇದನ್ನ ವಿಸ್ತರಿಸಬಹುದು. ನೀವು ಪಿಪಿಎಫ್ ಮೂಲಕ 25 ವರ್ಷಗಳಲ್ಲಿ 90 ಲಕ್ಷ ರೂ. ನಿಧಿಯನ್ನ ರಚಿಸಲು ಬಯಸಿದರೆ.. ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳು 11 ಸಾವಿರ ರೂ. ಹೂಡಿಕೆ ಮಾಡಬೇಕು.
ಈ ಹೂಡಿಕೆ ವರ್ಷಕ್ಕೆ 1,32,000 ರೂ. ಆಗಿರುತ್ತದೆ. 15 ವರ್ಷಗಳ ನಂತರ ಮುಕ್ತಾಯ ಅವಧಿಯನ್ನ ವಿಸ್ತರಿಸಲು ನೀವು ಅಂಚೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಹೂಡಿಕೆಯು 25 ವರ್ಷಗಳಲ್ಲಿ 90,71,053 ರೂ.ಗಳ ಲಾಭವನ್ನ ನೀಡುತ್ತದೆ. ಇದರಲ್ಲಿ 33 ಲಕ್ಷ ರೂ.ಗಳ ಹೂಡಿಕೆ ಮೊತ್ತವೂ ಸೇರಿರುತ್ತದೆ. ಬಡ್ಡಿ ಆದಾಯವು 57,71,053 ರೂ. ಆಗಿರುತ್ತದೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)