)
ATM Withdrawal Rules: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ನೂತನ ನಿಯಮಗಳನ್ನು ಜಾರಿಗೆ ತಂದಿದೆ. ಆರ್ಬಿಐನ ಈ ಹೊಸ ನಿಯಮಗಳಲ್ಲಿ ಎಟಿಎಂ ಉಚಿತ ವಹಿವಾಟುಗಳ ಮಿತಿ, ನಗದು ಹಣ ಹಿಂಪಡೆಯುವಿಕೆ ಸೇರಿದಂತೆ ಬ್ಯಾಂಕ್ಗಳ ಪರಿಷ್ಕೃತ ಶುಲ್ಕಗಳು ಕೂಡ ಸೇರಿವೆ. ಎಟಿಎಂ ಸಂಬಂಧಿಸಿದಂತೆ ಆರ್ಬಿಐ ಹೊಸ ನಿಯಮಗಳು ಯಾವುವು, ಇದರಿಂದ ಗ್ರಾಹಕರ ಮೇಲೆ ಏನೆಲ್ಲಾ ಪರಿಣಾಮ ಉಂಟಾಗಲಿದೆ ಎಂಬುದರ ಮಾಹಿತಿಗಾಗಿ ಮುಂದೆ ಓದಿ
ಎಟಿಎಂ ಸಂಬಂಧಿಸಿದಂತೆ ಆರ್ಬಿಐನ ಹೊಸ ನಿಯಮಗಳು:-
ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಉಚಿತ ಎಟಿಎಂ ವಹಿವಾಟುಗಳು, ನಗದು ಹಿಂಪಡೆಯುವಿಕೆ ಮಿತಿ, ಬ್ಯಾಂಕಿಂಗ್ ಶುಲ್ಕಗಳಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿದೆ.
ಉಚಿತ ಎಟಿಎಂ ವಹಿವಾಟು:
ಆರ್ಬಿಐ ಉಚಿತ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು ಮೆಟ್ರೋ ನಗರ, ಮೆಟ್ರೋ ಅಲ್ಲದ ನಗರಗಳಲ್ಲಿ ಫ್ರೀ ಎಟಿಎಂ ವಹಿವಾಟು ಎಷ್ಟಿದೆ? ಈ ಮಿತಿಯನ್ನು ಮೀರಿದರೆ ಏನಾಗುತ್ತದೆ ಎಂದು ತಿಳಿಸಲಾಗಿದೆ.
* ಮೆಟ್ರೋ ನಗರಗಳಲ್ಲಿ ಫ್ರೀ ಎಟಿಎಂ ವಹಿವಾಟು:
ಮೆಟ್ರೋ ನಗರಗಳಲ್ಲಿ ಬ್ಯಾಂಕ್ ಗ್ರಾಹಕರು ಪ್ರತಿ ತಿಂಗಳು ಮೂರು ಉಚಿತ ಎಟಿಎಂ ವಹಿವಾಟುಗಳನ್ನು ನೀಡಲಾಗುತ್ತದೆ. ಇದರಲ್ಲಿ ಹಣ ವಿತ್ ಡ್ರಾ ಮತ್ತು ಬ್ಯಾಲೆನ್ಸ್ ಚೆಕ್ ಮಾಡುವುದು ಕೂಡ ಸೇರಿದೆ.
* ಮೆಟ್ರೋ ಅಲ್ಲದ ನಗರಗಳಲ್ಲಿ ಉಚಿತ ಎಟಿಎಂ ವಹಿವಾಟು:
ಮೆಟ್ರೋ ಅಲ್ಲದ ನಗರಗಳಲ್ಲಿ ಬ್ಯಾಂಕ್ ಗ್ರಾಹಕರು ತಿಂಗಳಿಗೆ 5 ಉಚಿತ್ ಎಟಿಎಂ ವಹಿವಾಟುಗಳ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಎಟಿಎಂ ಉಚಿತ ವಹಿವಾಟಿನ ಮಿತಿ ಮೀರಿದರೆ ಏನಾಗುತ್ತೆ?
ಪ್ರತಿ ತಿಂಗಳು ಆರ್ಬಿಐ ನಿಯಮಾನುಸಾರ ಉಚಿತ ಎಟಿಎಂ ವಹಿವಾಟುಗಳ ಹೊರತಾಗಿ ಹೆಚ್ಚಿನ ವಹಿವಾಟು ನಡೆಸಿದರೆ ಇದಕ್ಕಾಗಿ ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ. ಪ್ರತಿ ಹೆಚ್ಚುವರಿ ಎಟಿಎಂ ವಹಿವಾಟಿಗೆ ಗರಿಷ್ಠ 23 ರೂ. + ಜಿಎಸ್ಟಿ ಅನ್ನು ಶುಲ್ಕವನ್ನು ವಿಧಿಸಲಾಗುತ್ತದೆ.
ಹಣಕಾಸೇತರ ಉದಾಹರಣೆಗೆ ಬ್ಯಾಲೆನ್ಸ್ ಚೆಕ್, ಸ್ಟೇಟ್ಮೆಂಟ್ ಪರಿಶೀಲನೆಯಂತಹ ವಹಿವಾಟಿಗೆ ಬ್ಯಾಂಕುಗಳು 11 ರೂ. ಶುಲ್ಕ ವಿಧಿಸುತ್ತವೆ.
ನಗದು ಠೇವಣಿ ಶುಲ್ಕ:
ಬ್ಯಾಂಕ್ಗಳು ಸಾಮಾನ್ಯವಾಗಿ ಬ್ಯಾಂಕಿನಲ್ಲಿ ನಗದು ಠೇವಣಿ ಮಾಡಲು ಮತ್ತು ಹಿಂಪಡೆಯಲು ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ, ಮಿತಿಗಿಂತ ಹೆಚ್ಚಿನ ಹಣಕಾಸು ವಹಿವಾಟು ನಡೆಸಿದರೆ ಆರ್ಬಿಐ ನಿಯಮಕ್ಕೆ ಅನುಗುಣವಾಗಿ ಬ್ಯಾಂಕ್ಗಳು ಶುಲ್ಕ ವಿಧಿಸುತ್ತವೆ.
ನಗದು ವಹಿವಾಟು ಮಿತಿ ಎಷ್ಟಿದೆ?
ನಿಯಮಗಳ ಪ್ರಕಾರ ವಾರ್ಷಿಕ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಅಥವಾ ಖಾತೆಯಿಂದ ಹಿಂಪಡೆಯಲು ಅವಕಾಶವಿದೆ. ಅದರೆ, ಇದಕ್ಕಾಗಿ ಗ್ರಾಹಕರು ತಮ್ಮ ಆಧಾರ್ ಮತ್ತು ಕಾರ್ಡ್ ಅನ್ನು ಒದಗಿಸುವುದು ಕಡ್ಡಾಯವಾಗಿದೆ.