RBI Rule : ನಿಮ್ಮ ಬಳಿಯೂ ಟೇಪ್ ಅಂಟಿಸಿರುವ ನೋಟುಗಳಿವೆಯೇ? ಹಾಗಿದ್ದರೆ ಇಲ್ಲಿ ಬಳಸಿ, ಪೂರ್ತಿ ಹಣ ಪಡೆಯಿರಿ

ಭಾರತೀಯ ರಿಸರ್ವ್ ಬ್ಯಾಂಕ್ 2017 ರ ಕರೆನ್ಸಿ ನೋಟ್ ವಿನಿಮಯ  ನಿಯಮಗಳ ಪ್ರಕಾರ, ಎಟಿಎಂನಲ್ಲಿ ಹರಿದ ನೋಟುಗಳು ಸಿಕ್ಕಿದರೆ, ಅವುಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಮತ್ತು ಯಾವುದೇ ಸರ್ಕಾರಿ ಬ್ಯಾಂಕ್‌ಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. 

Written by - Ranjitha R K | Last Updated : Sep 22, 2021, 06:38 PM IST
  • ಹರಿದ ನೋಟುಗಳನ್ನು ಬ್ಯಾಂಕಿನಿಂದ ವಿನಿಮಯ ಮಾಡಿಕೊಳ್ಳಬಹುದು
  • ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸು ಬ್ಯಾಂಕ್ ವಂತಿಲ್ಲ
  • ಬ್ಯಾಂಕ್ ನೋಟುಗಳನ್ನು ಬದಲಾಯಿಸಲು ಈ ಪ್ರಕ್ರಿಯೆಯನ್ನು ಅನುಸರಿಸಿ
RBI Rule : ನಿಮ್ಮ ಬಳಿಯೂ ಟೇಪ್ ಅಂಟಿಸಿರುವ  ನೋಟುಗಳಿವೆಯೇ? ಹಾಗಿದ್ದರೆ ಇಲ್ಲಿ ಬಳಸಿ, ಪೂರ್ತಿ ಹಣ ಪಡೆಯಿರಿ  title=
ಹರಿದ ನೋಟುಗಳನ್ನು ಬ್ಯಾಂಕಿನಿಂದ ವಿನಿಮಯ ಮಾಡಿಕೊಳ್ಳಬಹುದು (file photo)

ನವದೆಹಲಿ :  RBI Rule : ಕೆಲವೊಮ್ಮೆ ನಿಮಗೆ ಹರಿದ ಅಥವಾ ಟೇಪ್ ನಿಂದ ಅಂಟಿಸಿರುವ ನೋಟುಗಳು ಸಿಕ್ಕಿರಬಹುದು. ಈ ರೀತಿ ಹರಿದ ನೊಟನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ, ಆರ್ ಬಿಐ (RBI) ಈ ರೀತಿ ಟೇಪ್ ಅಂಟಿಸಿರುವ ನೋಟುಗಳನ್ನು  ಬದಲಿಸಲು ನಿಯಮಗಳನ್ನು ಜಾರಿ ಮಾಡಿದೆ. ಬ್ಯಾಂಕ್ ನಿಯಮಗಳ (RBI Rules) ಪ್ರಕಾರ, ಈ ನೋಟುಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳಬಹುದು ಮತ್ತು ಪೂರ್ಣ ಹಣವನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನ ಹೇಳಿದೆ. 

ಬ್ಯಾಂಕಿನ ನಿಯಮಗಳೇನು?
ಭಾರತೀಯ ರಿಸರ್ವ್ ಬ್ಯಾಂಕ್ (RBI) 2017 ರ ಕರೆನ್ಸಿ ನೋಟ್ ವಿನಿಮಯ  ನಿಯಮಗಳ ಪ್ರಕಾರ, ಎಟಿಎಂನಲ್ಲಿ (ATM) ಹರಿದ ನೋಟುಗಳು ಸಿಕ್ಕಿದರೆ, ಅವುಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಮತ್ತು ಯಾವುದೇ ಸರ್ಕಾರಿ ಬ್ಯಾಂಕ್‌ಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. ಇಂತಹ ನೋಟುಗಳನ್ನು ತೆಗೆದುಕೊಳ್ಳಲು ಬ್ಯಾಂಕುಗಳು ನಿರಾಕರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ : Atal Pension Yojana : ಸರ್ಕಾರದ ಈ ಯೋಜನೆಯಲ್ಲಿ ಪ್ರತಿ ತಿಂಗಳು ₹210 ಠೇವಣಿ ಮಾಡಿ ವೃದ್ಧಾಪ್ಯದಲ್ಲಿ ಪಡೆಯಿರಿ ತಿಂಗಳಿಗೆ ₹5000 ಪಿಂಚಣಿ!

ನೋಟು ಬದಲಿಸುವ ವಿಧಾನ :
ನಿಮ್ಮ ನೋಟು ತುಂಡುಗಳಾಗಿ ಹರಿದು ಹೋದರೂ, ಬ್ಯಾಂಕ್ (Bank) ಅದನ್ನು ಬದಲಾಯಿಸುತ್ತದೆ. ಹರಿದ ನೋಟುಗಳ ಯಾವುದೇ ಭಾಗ ಕಾಣೆಯಾಗಿದ್ದರೂ ಅದನ್ನು ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ, ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ, ನೀವು ಸರ್ಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವಾ ಆರ್‌ಬಿಐನ (RBI) ಇಶ್ಯೂ ಆಫೀಸ್‌ಗೆ ಹೋಗುವ ಮೂಲಕ ಬದಲಾಯಿಸಬಹುದು.

ಮರಳಿ ಪಡೆಯಬಹುದು ಸಂಪೂರ್ಣ ಹಣ : 
ನೀವು ಸಂಪೂರ್ಣ ಹಣವನ್ನು ಮರಳಿ ಪಡೆಯುತ್ತೀರೋ ಇಲ್ಲವೋ ಎಂಬುದು ನಿಮ್ಮ ನೋಟಿನ ಸ್ಥಿತಿ ಮತ್ತು ನೋಟ್ ಮೌಲ್ಯವನ್ನು ಅವಲಂಬಿಸಿರುತ್ತದೆ. ಕೆಲವು ವಿರೂಪಗೊಂಡ ನೋಟುಗಳ ಮೇಲೆ  ಪೂರ್ಣ ಹಣ ಮರುಪಾವತಿಯಾದರೆ, ನೋಟು ಹೆಚ್ಚು ಹರಿದುಹೋದರೆ ನೀವು ಶೇಕಡಾವಾರು ಹಣವನ್ನು ಮಾತ್ರ ಮರಳಿ ಪಡೆಯುತ್ತೀರಿ. 

ಇದನ್ನೂ ಓದಿ :7th Pay Commission : ನಿವೃತ್ತ ನೌಕರರು ತಮ್ಮ ಹಿರಿಯರಿಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿದ್ದಾರೆ? ನಿಯಮಗಳು ಯಾವವು ಎಂಬುದನ್ನು ನೋಡಿ!

ದೂರು ನೀಡುವುದು ಹೇಗೆ ?
ಹರಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಬ್ಯಾಂಕ್ ನಿಮಗೆ ನಿರಾಕರಿಸಿದರೆ,  ಅದರ ಬಗ್ಗೆ https://crcf.sbi.co.in/ccf/ ನಲ್ಲಿ ಜನರಲ್ ಬ್ಯಾಂಕಿಂಗ್ // Cash Related category ಯಲ್ಲಿದೂರು ನೀಡಬಹುದು. State bank of India ATM ಗಾಗಿ ಈ ಲಿಂಕ್ ಬಳಸಬಹುದು. ಅನೇಕ ವರದಿಗಳ ಪ್ರಕಾರ, ಎಟಿಎಂಗಳಿಂದ ವಿಕೃತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಬ್ಯಾಂಕ್ ನಿರಾಕರಿಸುವುದಿಲ್ಲ. ಇದರ ಹೊರತಾಗಿಯೂ, ಬ್ಯಾಂಕುಗಳು ನಿಯಮಗಳನ್ನು ಉಲ್ಲಂಘಿಸಿದರೆ, ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರ ದೂರಿನ ಆಧಾರದ ಮೇಲೆ, ಬ್ಯಾಂಕ್ ಕೂಡ 10 ಸಾವಿರದವರೆಗೆ ಹಾನಿಯನ್ನು ಪಾವತಿಸಬೇಕಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News