ಆರ್‌ಬಿ‌ಐನಿಂದ ಶೀಘ್ರದಲ್ಲೇ ₹100, ₹200 ಮುಖಬೆಲೆಯ ನೋಟುಗಳು ಬಿಡುಗಡೆ... ಹಳೆಯ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್!

RBI: ಆರ್‌ಬಿ‌ಐ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಇರುವ ₹50, ₹100, ₹200  ಮುಖಬೆಲೆಯ ನೋಟುಗಳನ್ನು   ಶೀಘ್ರದಲ್ಲೇ  ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. 

Written by - Yashaswini V | Last Updated : Mar 13, 2025, 10:49 AM IST
  • ಶೀಘ್ರದಲ್ಲೇ ಮಾರುಕಟ್ಟೆ ಲಗ್ಗೆ ಇಡಲಿವೆ ₹100, ₹200 ಮುಖಬೆಲೆಯ ನೋಟುಗಳು
  • ಇತ್ತೀಚೆಗೆ ಆರ್‌ಬಿ‌ಐ ಗವರ್ನರ್ ಆಗಿ ಹುದ್ದೆ ಅಲಂಕರಿಸಿರುವ ಸಂಜಯ್ ಮಲ್ಹೋತ್ರಾ ಅವರ ಸಹಿ ಹೊಂದಿರುವ ನೋಟುಗಳು ಶೀಘ್ರದಲ್ಲೇ ಮಾರುಕಟ್ಟೆಗೆ
ಆರ್‌ಬಿ‌ಐನಿಂದ ಶೀಘ್ರದಲ್ಲೇ ₹100, ₹200 ಮುಖಬೆಲೆಯ ನೋಟುಗಳು ಬಿಡುಗಡೆ... ಹಳೆಯ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್!

RBI To Issue New Notes: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅತಿ ಶೀಘ್ರದಲ್ಲೇ ₹100, ₹200 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಿದೆ. ಇತ್ತೀಚೆಗೆ ಆರ್‌ಬಿ‌ಐ ಗವರ್ನರ್ ಆಗಿ ಹುದ್ದೆ ಅಲಂಕರಿಸಿರುವ ಸಂಜಯ್ ಮಲ್ಹೋತ್ರಾ ಅವರ ಸಹಿ ಹೊಂದಿರುವ ಈ ನೋಟುಗಳು ಮಹಾತ್ಮ ಗಾಂಧಿ (ಹೊಸ) ಸರಣಿಯ ಅಸ್ತಿತ್ವದಲ್ಲಿರುವ ನೋಟುಗಳಂತೆಯೇ ಇರಲಿದೆ ಎಂದು ತಿಳಿದುಬಂದಿದೆ. 

Add Zee News as a Preferred Source

ಹೊಸ ಮತ್ತು ಹಳೆಯ ನೋಟುಗಳ ವ್ಯತ್ಯಾಸವೇನು? 
ಆರ್‌ಬಿ‌ಐ ಪರಿಚಯಿಸಲಿರುವ ಹೊಸ ₹100, ₹200  ಮುಖಬೆಲೆಯ ನೋಟುಗಳಿಗೂ ಹಳೆಯ ನೋಟುಗಳಿಗೂ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಹೊಸ ನೋಟುಗಳು ಆರ್‌ಬಿ‌ಐ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಹೊಂದಿರುತ್ತವೆ. 

ಇದನ್ನೂ ಓದಿ- ಇಪಿಎಫ್ ಸದಸ್ಯರಿಗೆ ನಿವೃತ್ತಿ ಬಳಿಕ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...!

ವಾಸ್ತವವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ದೃಢೀಕರಣವನ್ನು ಕಾಯ್ದುಕೊಳ್ಳಲು ನಿಯತಕಾಲಿಕವಾಗಿ ಗವರ್ನರ್ ಸಹಿಯಿರುವ ಹೊಸ ನೋಟುಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಆರ್‌ಬಿ‌ಐ ಗವರ್ನರ್ ಆಗಿದ್ದ ಶಕ್ತಿಕಾಂತ್ ದಾಸ್ ಅವರ ಅಧಿಕಾರವಧಿ ಪೂರ್ಣಗೊಂಡ ನಂತರ ಇದೀಗ 1990ರ ಬ್ಯಾಚ್ ರಾಜಸ್ಥಾನ ಕೇಡರ್‌ನ  ಭಾರತೀಯಾ ಆಡಳಿತ ಸೇವಾ ಅಧಿಕಾರಿಯಾಗಿರುವ ಸಂಜಯ್ ಮಲ್ಹೋತ್ರಾ ಅವರು ಡಿಸೆಂಬರ್ 11, 2024ರಂದು ಆರ್‌ಬಿ‌ಐನ 26ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಸಂಜಯ್ ಮಲ್ಹೋತ್ರಾ ಅವರ ಸಹಿ ಹೊಂದಿರುವ ₹100, ₹200 ಕರೆನ್ಸಿಗಳು ಮಾರುಕಟ್ಟೆಗೆ ಬರಲು ಸಜ್ಜಾಗಿರುವುದು ಆರ್‌ಬಿ‌ಐನ ಕರೆನ್ಸಿ ನೋಟುಗಳನ್ನು ನವೀಕರಿಸುವ ನಿಯಮಿತ ಕ್ರಮದ ಭಾಗವಾಗಿದೆ. 

ಇದನ್ನೂ ಓದಿ- ದುಬೈ ಅಲ್ಲ... ನಮ್ಮ ರಾಜ್ಯದ ಪಕ್ಕದಲ್ಲೇ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು..!

ಹಳೆಯ ನೋಟುಗಳು ಏನಾಗುತ್ತವೆ: 
ಮಾರುಕಟ್ಟೆಗೆ ಹೊಸ ನೋಟುಗಳ ಪರಿಚಯವಾಗುತ್ತಿದ್ದಂತೆ ಹಳೆಯ ನೋಟುಗಳು ಚಲಾವಣೆಯಾಗುವುದಿಲ್ಲ ಎಂಬುದು ಕೆಲವರ ನಂಬಿಕೆ. ಆದರೆ,  ₹100, ₹200  ಮುಖಬೆಲೆಯ ಹೊಸ ನೋಟುಗಳು ಮಾರುಕಟ್ಟೆ ಪ್ರವೇಶಿಸಲಿವೆ, ಆದರೂ ಅಸ್ತಿತ್ವದಲ್ಲಿರುವ ಹಳೆಯ ನೋಟುಗಳು ಎಂದಿನಂತೆ ಕಾನೂನುಬದ್ಧವಾಗಿ ಚಲಾವಣೆಯಲ್ಲಿರುತ್ತವೆ ಎಂದು ಆರ್‌ಬಿ‌ಐ ಸ್ಪಷ್ಟಪಡಿಸಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News