)
Gold Price in 2026: ಪ್ರಸ್ತುತ ಆಕಾಶಕ್ಕೆ ಮುತ್ತಿಡುತ್ತಿರುವ ಚಿನ್ನದ ಬೆಲೆಯಿಂದಾಗಿ ಚಿನ್ನದ ಮೇಲೆ ಆಸೆ ದುಡ್ಡು ಕೊಡುವುದು ಕಷ್ಟ ಎನ್ನುವಂತಿತ್ತು ಬಂಗಾರ ತೆಗೆದುಕೊಳ್ಳಬೇಕು ಎನ್ನುವವರ ಪರಿಸ್ಥಿತಿ. ಈಗ ಬಂಗಾರದ ಬೆಲೆ ದಿಢೀರ್ ಅಂತಾ ಇಳಿಕೆಯಾಗಿದೆ. ಇದರಿಂದ ಈಗಾಗಾಗಲೇ ಹೂಡಿಕೆ ಉದ್ದೇಶದಿಂದ ಚಿನ್ನ ಖರೀದಿಸಿರುವವರಿಗೆ ಹೊಸ ರೀತಿಯ ತಲೆ ಬೇನೆ. ಇದೇ ರೀತಿ ಚಿನ್ನದ ಬೆಲೆ ಇನ್ನೂ ಕಮ್ಮಿಯಾದರೆ ಏನು ಮಾಡುವುದು ಎನ್ನುವ ಚಿಂತೆ.
ಬಹಳ ಮುಖ್ಯವಾಗಿ ಮುಂದಿನ ವರ್ಷ ಅಂದರೆ 2026ರಲ್ಲಿ ಬಂಗಾರದ ಬೆಲೆ ಇನ್ನೂ ಕಮ್ಮಿಯಾಗುತ್ತಾ ಅಥವಾ ಜಾಸ್ತಿಯಾಗುತ್ತಾ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ‘ಕಮ್ಮಿಯಾಗುವುದು ಎನ್ನುವುದು’ ಇದು ಚಿನ್ನವನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಸಿಹಿ ಸುದ್ದಿ. ಈಗಾಗಲೇ ಚಿನ್ನ ಖರೀದಿಸಿ ಬೆಲೆ ಜಾಸ್ತಿಯಾಗುತ್ತೆ ಎಂದು ಆಸೆಯಿಂದ ಕಾದುಕುಳಿತಿರುವವರಿಗೆ ಕಹಿ ಸುದ್ದಿ.
ಸದ್ಯಕ್ಕೆ ತಿಳಿದುಬರುತ್ತಿರುವ ಮಾಹಿತಿಗಳ ಪ್ರಕಾರ, 2026ರ ಜೂನ್ ತಿಂಗಳಷ್ಟೊತ್ತಿಗೆ ಬಂಗಾರದ ದರ 4,600 ಡಾಲರ್ ಆಗಬಹುದು ಎಂದು ANZ ಬ್ಯಾಂಕ್ ಅಂದಾಜು ಮಾಡಿದೆ. ಹಾಗೆಯೇ ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ತಗ್ಗಿಸಿದರೆ ವರ್ಷದ ದ್ವಿತೀಯಾರ್ಧದಲ್ಲಿ ಬಂಗಾರದ ಬೆಲೆ ಕಮ್ಮಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದೆ.
ಚಿನ್ನ ಖರೀದಿ ಮಾಡಬೇಕು ಎಂದುಕೊಳ್ಳುವವರು ಇನ್ನೊಂದೆರಡು ವರ್ಷ ಬಂಗಾರದ ಬೆಲೆ ಏರಿಕೆ ಮತ್ತು ಇಳಿಕೆ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ANZ ಬ್ಯಾಂಕ್ ಅಂದಾಜಿನ ಪ್ರಕಾರ, ಚಿನ್ನದ ಬೆಲೆಯಲ್ಲಿ ವ್ಯತ್ಯಯಗಳಾದರೆ ಭಾರತದ ಮಾರುಕಟ್ಟೆಯಲ್ಲಿ 2026ರ ಜೂನ್ ತಿಂಗಳೊಷ್ಟೊತ್ತಿಗೆ ಬಂಗಾರದ ಬೆಲೆ ಪ್ರತಿ ಗ್ರಾಂಗೆ ಸರಿ ಸುಮಾರು 12,280 ರೂಪಾಯಿ ಆಗಿರುವ ಸಾಧ್ಯತೆ ಇದೆ.
ಇದಲ್ಲದೆ ದೇಶೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಲೆ ಏರಿಕೆ ಮತ್ತು ಇಳಿಕೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಬಹುದು. ಇತ್ತೀಚೆಗೆ ಸ್ಪಾಟ್ ಚಿನ್ನದ ದರ ಔನ್ಸ್ ಒಂದಕ್ಕೆ 4,224.79 ಡಾಲರ್ ಆಗಿತ್ತು. ಕೆಲವೊಮ್ಮೆ 4,225.69 ಡಾಲರ್ ಕೂಡ ಆಗಿತ್ತು.
ಬಂಗಾರದ ಬೆಲೆ ಏರಿಕೆ, ಇಳಿಕೆಗೆ ಕಾರಣ?
ಪ್ರಪಂಚಾದಾದ್ಯಂತ ಕಂಡುಬರುತ್ತಿರುವ ಯುದ್ಧದ ವಾತಾವರಣ, ರಾಜಕೀಯ ಅನಿಶ್ಚಿತತೆ, ವ್ಯಾಪಾರ ಒಪ್ಪಂದಗಳಿಗೆ ಸಂಬಂಧಪಟ್ಟಂಥ ಅನಿಶ್ಚಿತತೆಯ ವಾತಾವರಣದಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದರಲ್ಲಿ ವ್ಯತ್ಯಾಸವಾಗುತ್ತಿದೆ. ಇದೆಲ್ಲದರ ನಡುವೆ ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರ ಕಮ್ಮಿ ಮಾಡಬಹುದು ಎಂಬ ನಿರೀಕ್ಷೆ ಇದ್ದು ಅದರಿಂದ ಕೂಡ ಬಂಗಾರದ ಬೆಲೆ ಏರಿಕೆ ಮತ್ತು ಇಳಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಡಾಲರ್ ಮೌಲ್ಯ ಸ್ವಲ್ಪ ಕಮ್ಮಿಯಾಗುವುದರಿಂದ ವಿದೇಶಿ ಖರೀದಿದಾರರಿಗೆ ಚಿನ್ನದ ಬೆಲೆ ಕಮ್ಮಿಯಾಗಲಿದೆ.
ಬೆಳ್ಳಿ ಬೆಲೆಯಲ್ಲಿ ಏನಾಗುತ್ತಿದೆ?
ANZ ಬ್ಯಾಂಕ್ ಅಂದಾಜಿನ ಪ್ರಕಾರ ಬೆಳ್ಳಿಯ ದರ 2026ರ ಮಧ್ಯಭಾಗದಲ್ಲಿ ಪ್ರತಿ ಔನ್ಸ್ 57.50 ಡಾಲರ್ ತಲುಪುವ ಸಾಧ್ಯತೆ ಇದೆ. ಬಂಗಾರದ ಬೆಲೆ ಏರಿಕೆ ಕೂಡ ಬೆಳ್ಳಿ ಬೆಲೆ ಏರಿಕೆ ಮತ್ತು ಇಳಿಕೆಯ ಮೇಲೆ ಪರಿಣಾಮ ಬೀರಲಿದೆ.