)
ನವದೆಹಲಿ: ಇತ್ತೀಚಿಗೆ ಕೋಬ್ರಾಪೋಸ್ಟ್ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಕುರಿತಾಗಿ ಮಾಡಿರುವ 28,874 ಕೋಟಿಗೂ ಹೆಚ್ಚಿನ ಬ್ಯಾಂಕಿಂಗ್ ವಂಚನೆ ಆರೋಪಗಳಿಗೆ ರಿಲಯನ್ಸ್ ಎಡಿಎ ಗ್ರೂಪ್ ತಿರುಗೇಟು ನೀಡಿದೆ.
ಕೋಬ್ರಾಪೋಸ್ಟ್ ವರದಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಎಡಿಎ ಗ್ರೂಪ್ 'ಈ ಆರೋಪಗಳು ದಾರಿ ತಪ್ಪಿಸುವ ಹಾಗೂ ದುರುದ್ದೇಶದಿಂದ ಕೂಡಿರುವ ಆ ಅಭಿಯಾನದ ಭಾಗವಾಗಿವೆ,ಹಾಗಾಗಿ ಇದನ್ನು ಕಂಪನಿಯು ತೀವ್ರವಾಗಿ ಖಂಡಿಸಿಸುತ್ತದೆ ಎಂದು ಹೇಳಿದೆ.
ಕೋಬ್ರಾಪೋಸ್ಟ್ ನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಗ್ರೂಪ್' ನಾಮನಿರ್ದೇಶಿತ ವ್ಯಕ್ತಿಗಳು ಮತ್ತು ಸಂಬಂಧಿತ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುವ ಕೆಲವು ಕಾರ್ಪೊರೇಟ್ ಪ್ರತಿಸ್ಪರ್ಧಿಗಳು ಉದ್ದೇಶಪೂರ್ವಕವಾಗಿ ಮತ್ತು ನಿರಂತರವಾದ ಸುಳ್ಳು ಪ್ರಚಾರ, ತಪ್ಪು ಮಾಹಿತಿ ಮತ್ತು ವ್ಯಕ್ತಿತ್ವ ವಿನಾಶದ ಅಭಿಯಾನವನ್ನು ಕೈಗೊಂಡಿದ್ದಾರೆ ಎನ್ನುವುದು ಈಗ ಕಂಪನಿಯ ಗಮನಕ್ಕೆ ಬಂದಿದೆ.ಇದರ ಮೂಲ ಉದ್ದೇಶ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್ನ 55 ಲಕ್ಷಕ್ಕೂ ಹೆಚ್ಚು ಷೇರುದಾರರ ವಿಶ್ವಾಸವನ್ನು ಕುಗ್ಗಿಸುವುದಾಗಿದೆ 'ಎಂದು ರಿಲಯನ್ಸ್ ಕಂಪನಿ ಪ್ರತಿಕ್ರಿಯಿಸಿದೆ.
ಇನ್ನು ಮುಂದುವರೆದು 'ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ರಿಲಯನ್ಸ್ ಪವರ್ ಲಿಮಿಟೆಡ್, ಅನಿಲ್ ಡಿ. ಅಂಬಾನಿ ಮತ್ತು 55 ಲಕ್ಷಕ್ಕೂ ಹೆಚ್ಚು ಷೇರುದಾರರನ್ನು ಹೊಂದಿರುವ ಅತಿದೊಡ್ಡ ಕುಟುಂಬದಲ್ಲಿ ಒಬ್ಬರಾದ ಅನಿಲ್ ಡಿ. ಅಂಬಾನಿಯ ಖ್ಯಾತಿಗೆ ಕಳಂಕ ತರುವ ದುರುದ್ದೇಶಪೂರಿತ ಉದ್ದೇಶದಿಂದ ಕಾರ್ಪೊರೇಟ್ ಪ್ರತಿಸ್ಪರ್ಧಿಗಳು ಈ ಆಪಾದಿತ ಪ್ರಕ್ರಿಯೆಯನ್ನು ಆಯೋಜಿಸುತ್ತಿರುವಂತೆ ತೋರುತ್ತಿದೆ. ಅವರ ಮೂಲ ಉದ್ದೇಶ ಸಾರ್ವಜನಿಕ ಗ್ರಹಿಕೆಯನ್ನು ಪ್ರಭಾವಿಸುವುದು ಮತ್ತು ತಮ್ಮದೇ ಆದ ಸ್ಥಾಪಿತ ವಾಣಿಜ್ಯ ಹಿತಾಸಕ್ತಿಗಳನ್ನು ಪೂರೈಸಲು ಮಾರುಕಟ್ಟೆ ಭಾವನೆಯನ್ನು ಕೌಶಲ್ಯದಿಂದ ನಿರ್ವಹಿಸುವುದಾಗಿದೆ' ಎಂದು ರಿಲಯನ್ಸ್ ಗ್ರೂಪ್ ಕೋಬ್ರಾ ಪೋಸ್ಟ್ ನ ಆರೋಪಗಳಿಗೆ ತಿರುಗೇಟು ನೀಡಿದೆ.
ಕೋಬ್ರಾಪೋಸ್ಟ್ ಈಗಾಗಲೇ ಸಾರ್ವಜನಿಕವಾಗಿರುವ ಲಭ್ಯವಿರುವ ಹಳೆಯ ಮಾಹಿತಿಯನ್ನೇ ತನಗೇ ತಿಳಿದಂತೆ ತಿರುಚಿ ತಪ್ಪಾಗಿ ನಿರೂಪಿಸಲಾಗಿದೆ.ಸಿಬಿಐ, ಇಡಿ, ಸೆಬಿ ಮತ್ತು ಇತರ ಸಮರ್ಥ ಸಂಸ್ಥೆಗಳು ಸೇರಿದಂತೆ ಶಾಸನಬದ್ಧ ಅಧಿಕಾರಿಗಳು ಈಗಾಗಲೇ ಪರಿಶೀಲಿಸಿದ್ದಾರೆ.ಇದಲ್ಲದೆ, ಹೆಚ್ಚಿನ ಸಂಖ್ಯೆಯ ವಿಷಯಗಳು ವಿಚಾರಣೆಗೆ ಒಳಪಟ್ಟಿರುತ್ತವೆ ಮತ್ತು ಸಮರ್ಥ ನ್ಯಾಯಾಂಗ ವೇದಿಕೆಗಳ ಮುಂದೆ ವಿಚಾರಣೆಗೆ ಒಳಪಡುತ್ತಿವೆ.ಹಾಗಾಗಿ ಈ ಕುರಿತು ಯಾವುದೇ ಸ್ವಯಂಪ್ರೇರಿತ ಹೇಳಿಕೆಗಳನ್ನು ನೀಡುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಕ್ರಿಮಿನಲ್ ಸುಲಿಗೆ ಮತ್ತು ಬೆದರಿಕೆ, ಬ್ಲ್ಯಾಕ್ಮೇಲ್ ತಂತ್ರಗಳಿಗೆ ಖಂಡನೆ
ಕೋಬ್ರಾಪೋಸ್ಟ್ನ ಅನಿರುದ್ಧ ಬಹಾಲ್ 'ವೃತ್ತಿಪರ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ವೇಷವನ್ನು ಧರಿಸಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದ್ದಾರೆ.ಇಂತಹ ತಂತ್ರಗಳನ್ನು ರಿಲಯನ್ಸ್ ಗ್ರೂಪ್ ತೀವ್ರವಾಗಿ ಖಂಡಿಸುತ್ತದೆ.ಸಾಧ್ಯವಾದರೆ ನ್ಯಾಯಾಂಗ ನಿಂದನೆ ಜೊತೆಗೆ ಮಾನನಷ್ಟ ಕ್ರಮದಂತಹ ಕಾನೂನು ಕ್ರಮಗಳನ್ನು ಷೇರುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ.
ಕೋಬ್ರಾಪೋಸ್ಟ್ ಒಂದು ನಿಷ್ಕ್ರಿಯ ಮತ್ತು ಕುಖ್ಯಾತಿ ಪಡೆದ ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು, 2019 ರಿಂದ ಇದು ಹೆಚ್ಚಾಗಿ ನಿಷ್ಕ್ರಿಯವಾಗಿದೆ ಎಂದು ರಿಲಯನ್ಸ್ ಎಡಿಎ ಗುಂಪು ಹೇಳಿದೆ.'ಪ್ರಸ್ತಾವಿತ ಪತ್ರಿಕಾಗೋಷ್ಠಿಯು ರಿಲಯನ್ಸ್ ಗ್ರೂಪ್ ಮತ್ತು ಶ್ರೀ ಅನಿಲ್ ಡಿ. ಅಂಬಾನಿ ಅವರ ವರ್ಚಸ್ಸು, ವಿಶ್ವಾಸಾರ್ಹತೆಯನ್ನು ಹಾಳುಮಾಡುವ ಒಂದು ಉದ್ದೇಶಿತ ಪ್ರಯತ್ನವಾಗಿದೆ ಎಂದು ಕಂಪನಿ ಹೇಳಿದೆ.
ಷೇರುದಾರರ ರಕ್ಷಣೆಗೆ ಆಧ್ಯತೆ
'ಕಳೆದ ತ್ರೈಮಾಸಿಕದಲ್ಲಿ, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್ ಹಲವಾರು ವದಂತಿಗಳಿಂದ ಏರಿಳಿತಗಳನ್ನು ಕಂಡಿದೆ. ಹಾಗಾಗಿ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ, ಕಂಪನಿಗಳು ಸೆಬಿಗೆ ದೂರು ಸಲ್ಲಿಸಿದ್ದು, ವ್ಯಾಪಾರ ಮಾದರಿಗಳು ಮತ್ತು ಮಾರುಕಟ್ಟೆಯ ಸಮಗ್ರತೆಯನ್ನು ದುರ್ಬಲಗೊಳಿಸುವ ಮತ್ತು ಷೇರುದಾರರ ಮೌಲ್ಯವನ್ನು ಕುಗ್ಗಿಸುವ ಯಾವುದೇ ಚಟುವಟಿಕೆಗಳನ್ನು ತಕ್ಷಣ ಪರಿಶೀಲಿಸುವಂತೆ ಕೋರಿವೆ ಎಂದು ರಿಲಯನ್ಸ್ ಎಡಿಎ ಗ್ರೂಪ್ ತಿಳಿಸಿದೆ.