ಬ್ಯಾಂಕ್ ಲೋನ್ ಪಡೆದವರಿಗೆ ಸಿಹಿ ಸುದ್ದಿ!ಸತತ ಮೂರನೇ ಬಾರಿಗೆ ಬಡ್ಡಿ ಕಡಿತಗೊಳಿಸಿದ RBI :ಸಾಲದ EMIನಲ್ಲೂ 0.50% ಕಡಿತ

RBI MPC Meet Updates: ರೆಪೊ ದರವನ್ನು ಶೇ.0.50 ರಷ್ಟು ಕಡಿಮೆ ಮಾದಿ  RBI ಆದೇಶ ಹೊರಡಿಸಿದೆ. RBI ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಗೃಹ ಸಾಲ ಮತ್ತು ಕಾರು ಸಾಲದಂತಹ ಸಾಲಗಳನ್ನು ತೆಗೆದುಕೊಂಡಿರುವ್ವಾರಿಗೆ EMI ಗಳಲ್ಲಿ ಪರಿಹಾರ  ನೀಡಿದೆ.  

Written by - Ranjitha R K | Last Updated : Jun 6, 2025, 01:48 PM IST
  • RBI ನ ಹಣಕಾಸು ನೀತಿ ಸಮಿತಿ ಮುಗಿದಿದೆ
  • ಸಭೆಯ ನಿರ್ಧಾರ ಪ್ರಕಟಿಸಿದ RBI ಗವರ್ನರ್ ಸಂಜಯ್ ಮಲ್ಹೋತ್ರಾ
  • ರೆಪೊ ದರವನ್ನು ಶೇಕಡಾ 0.50 ರಷ್ಟು ಕಡಿತಗೊಳಿಸಿದ್ದಾರೆ.
ಬ್ಯಾಂಕ್ ಲೋನ್ ಪಡೆದವರಿಗೆ ಸಿಹಿ ಸುದ್ದಿ!ಸತತ ಮೂರನೇ ಬಾರಿಗೆ ಬಡ್ಡಿ ಕಡಿತಗೊಳಿಸಿದ RBI :ಸಾಲದ EMIನಲ್ಲೂ 0.50% ಕಡಿತ

RBI MPC Meet Updates : RBI ನ ಹಣಕಾಸು ನೀತಿ ಸಮಿತಿ ಮುಗಿದಿದೆ. RBI ಗವರ್ನರ್ ಸಂಜಯ್ ಮಲ್ಹೋತ್ರಾ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. RBI ಸತತ ಮೂರನೇ ಬಾರಿಗೆ ರೆಪೊ ದರವನ್ನು ಕಡಿತಗೊಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯನ್ನು ವಹಿಸಿಕೊಂಡ ನಂತರ, ಸಂಜಯ್ ಮಲ್ಹೋತ್ರಾ ಸತತ ಮೂರನೇ ಬಾರಿಗೆ ರೆಪೊ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ರೆಪೊ ದರವನ್ನು ಶೇಕಡಾ 0.50 ರಷ್ಟು ಕಡಿತಗೊಳಿಸಿದ್ದಾರೆ. RBI ಯ ಈ ನಿರ್ಧಾರದೊಂದಿಗೆ, ರೆಪೊ ದರವು ಈಗ ಶೇಕಡಾ 6 ರಿಂದ 5.50 ಕ್ಕೆ ಇಳಿದಿದೆ. ರೆಪೊ ದರದಲ್ಲಿನ ಕಡಿತವು ಬ್ಯಾಂಕುಗಳ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಜನರಿಗೆ ಗೃಹ ಸಾಲದ ಹೊರೆ ಕಡಿಮೆಯಾಗುತ್ತದೆ. ಆದರೆ FD ಮೇಲಿನ ಬಡ್ಡಿದರವೂ ಕಡಿಮೆಯಾಗುತ್ತದೆ. .  

Add Zee News as a Preferred Source

 ಕಡಿಮೆಯಾಗುವುದು EMI ಹೊರೆ : 
ರೆಪೊ ದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್‌ಬಿಐ ಅದನ್ನು ಶೇಕಡಾ 0.50 ರಷ್ಟು ಕಡಿತಗೊಳಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಗೃಹ ಸಾಲ, ಕಾರು ಸಾಲದಂತಹ ಸಾಲಗಳನ್ನು ತೆಗೆದುಕೊಳ್ಳುವವರಿಗೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸುವ ಮೂಲಕ ಆರ್‌ಬಿಐ ಇಎಂಐನಲ್ಲಿ ಪರಿಹಾರ ನೀಡಿದೆ. ಇಂದಿನ ಕಡಿತದ ನಂತರ, ರೆಪೊ ದರ ಈಗ ಶೇಕಡಾ 5.5 ಆಗಿದೆ. 

ಇದನ್ನೂ ಓದಿ : ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮಹತ್ವದ ಬದಲಾವಣೆ..! ಇಲ್ಲಿದೆ ನಗರವಾರು ಸಂಪೂರ್ಣ ಮಾಹಿತಿ..!

ಏನಿದು ರೆಪೋ ರೇಟ್ ?: 
ರೆಪೊ ದರವು ಆರ್‌ಬಿಐ ಯಾವುದೇ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವಾಗಿದೆ. ಕಡಿಮೆ ಬಡ್ಡಿದರದಿಂದಾಗಿ, ಬ್ಯಾಂಕುಗಳು ಆರ್‌ಬಿಐನಿಂದ ಅಗ್ಗದ ದರದಲ್ಲಿ ಸಾಲಗಳನ್ನು ಪಡೆಯುತ್ತವೆ. ಇದರಿಂದಾಗಿ ಬ್ಯಾಂಕ್ ತನ್ನ ಸಾಲಗಳ ಬಡ್ಡಿದರಗಳನ್ನು ಸಹ ಕಡಿಮೆ ಮಾಡುತ್ತದೆ. ಹೀಗಾದಾಗ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕಾರು ಸಾಲದ ಇಎಂಐ ಕಡಿಮೆಯಾಗುತ್ತದೆ. ಇಎಂಐ ಕಡಿತದಿಂದಾಗಿ, ಜನರು ಹೆಚ್ಚಿನ ಹಣವನ್ನು ಉಳಿಸುವುದು ಸಾಧ್ಯವಾಗುತ್ತದೆ  ಆರ್ಥಿಕತೆಗೂ ಪ್ರಯೋಜನವಾಗುತ್ತದೆ.  

ಈ ವರ್ಷ ರೆಪೋ ದರವನ್ನು ಯಾವಾಗ ಕಡಿತಗೊಳಿಸಲಾಯಿತು? :   
ಈ ವರ್ಷ ಆರ್‌ಬಿಐ ಎರಡು ಬಾರಿ ರೆಪೊ ದರವನ್ನು ಕಡಿತಗೊಳಿಸಿದೆ. ಫೆಬ್ರವರಿ 2025ರಲ್ಲಿ ಮೊದಲ ಬಾರಿಗೆ, ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ 0.25 ಪ್ರತಿಶತದಷ್ಟು ಕಡಿತಗೊಳಿಸಲಾಯಿತು. ನಂತರ, ಏಪ್ರಿಲ್ 2025ರಲ್ಲಿ ನಡೆದ ಸಭೆಯಲ್ಲಿ, ಎರಡನೇ ಬಾರಿಗೆ ರೆಪೊ ದರವನ್ನು 0.25 ಪ್ರತಿಶತದಷ್ಟು ಕಡಿತಗೊಳಿಸಿ 6 ಪ್ರತಿಶತಕ್ಕೆ ಇಳಿಸಲಾಯಿತು. ಇದೀಗ ಮೂರನೇ ಬಾರಿಗೆ, ಆರ್‌ಬಿಐ 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸುವ ಮೂಲಕ ಜನರಿಗೆ ಡಬಲ್ ಸಂತೋಷವನ್ನು ನೀಡಿದೆ. 

ಇದನ್ನೂ ಓದಿ : 40-30-20-10 ಸೂತ್ರ ಅಳವಡಿಸಿಕೊಂಡರೆ ಅತೀ ಕಡಿಮೆ ವೇತನ ಇದ್ದರೂ ನೆಮ್ಮದಿಯ ಬದುಕು ಬದುಕಬಹುದು!ಭವಿಷ್ಯಕ್ಕೆ ಉಳಿತಾಯವೂ ಸಾಧ್ಯ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News