SBI ಗ್ರಾಹಕರಿಗೊಂದು ಪ್ರಮುಖ ಸುದ್ದಿ; ಆನ್ ಲೈನ್ ನಲ್ಲಿಯೇ ಬದಲಾಯಿಸಿಕೊಳ್ಳಬಹುದು branch
ನೀವು ಎಸ್ ಬಿಐಯಲ್ಲಿ ಅಕೌಂಟ್ ಹೊಂದಿದ್ದು, ಬ್ಯಾಂಕಿನ ಶಾಖೆ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೇ ಅದನ್ನು ಮಾಡಬಹುದು.
ನವದೆಹಲಿ : SBI Latest News Update: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನೇನ್ನೋ ಜಾರಿಗೆ ತರುತ್ತಿದೆ. ಅದರೊಂದಿಗೆ ಪ್ರತಿಯೊಂದು ಹಂತದಲ್ಲೂ ಆನ್ ಲೈನ್ ಸೇವೆಯನ್ನು ಒದಗಿಸುತ್ತಿದ್ದು, ಗ್ರಾಹಕರ ಕೆಲಸವನ್ನು ಇನ್ನಷ್ಟು ಸರಳಗೊಳಿಸುತ್ತಿದೆ. ಇದೀಗ ಗ್ರಾಹಕರು ಆನ್ ಲೈನ್ (Online) ಮೂಲಕವೇ ತಮ್ಮ ಬ್ಯಾಂಕ್ ಶಾಖೆಯನ್ನು (Bank barnch) ಕೂಡಾ ಬದಲಾಯಿಸಿಕೊಳ್ಳಬಹುದು. ಅಂದರೆ, ಬ್ಯಾಂಕ್ ಶಾಖೆ ಬದಲಾವಣೆಗಾಗಿ ಗ್ರಾಹಕರು ಇನ್ನು ಬ್ಯಾಂಕ್ ಗೆ ಹೀಗಬೇಕಾಗಿಲ್ಲ.
Online ಮೂಲಕವೇ ಬದಲಾಯಿಸಿಕೊಳ್ಳಬಹುದು ಬ್ಯಾಂಕ್ ಶಾಖೆ :
ನೀವು ಎಸ್ ಬಿಐಯಲ್ಲಿ (SBI) ಅಕೌಂಟ್ ಹೊಂದಿದ್ದು, ಬ್ಯಾಂಕಿನ ಶಾಖೆ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಮೂಲಕವೇ ಅದನ್ನು ಮಾಡಬಹುದು. ನೀವು ಯಾವ ಶಾಖೆಗೆ ನಿಮ್ಮ ಅಕೌಂಟ್ ವರ್ಗಾವಣೆ ಮಾಡಲು ಇಷ್ಟಪಡುತ್ತೀರಿ ಆ ಬ್ರಾಂಚ್ ನ ಕೋಡ್ (Branch Code) ಇದ್ದರೆ ಸಾಕು. ಇದರೊಂದಿಗೆ ನಿಮ್ಮ ಮೊಬೈಲ್ ನಂಬರ್ ಬ್ಯಾಂಕ್ ನಲ್ಲಿ ರಿಜಿಸ್ಟರ್ ಆಗಿರಬೇಕು. ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ಚಾಲ್ತಿಯಲ್ಲಿರಬೇಕು. ಇಷ್ಟಿದ್ದರೆ ನೀವು ಬಯಸುವ ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ ಫರ್ ಮಾಡಲು ರಿಕ್ವೆಸ್ಟ್ ಸಲ್ಲಿಸಬಹುದು.
ಇದನ್ನೂ ಓದಿ : Aadhaar Card : 'ಆಧಾರ್ ಕಾರ್ಡ್'ನಲ್ಲಿ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು; ಹೇಗೆ ಇಲ್ಲಿದೆ
ಆನ್ ಲೈನ್ ಮೂಲಕ SBI ಶಾಖೆ ಬದಲಾಯಿಸುವುದು ಹೇಗೆ ?
1. ಮೊದಲನೆಯದಾಗಿ ಎಸ್‌ಬಿಐ ಅಧಿಕೃತ ವೆಬ್‌ಸೈಟ್ onlinesbi.com ಗೆ ಲಾಗ್ ಇನ್ ಆಗಿ
2.'Personal Banking' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
3. User Name ಮತ್ತು ಪಾಸ್‌ವರ್ಡ್ ಕ್ಲಿಕ್ ಮಾಡಿ
4. ಇದರ ನಂತರ e-service ಟ್ಯಾಬ್ ಕ್ಲಿಕ್ ಮಾಡಿ
5. Transfer Savings Account ಮೇಲೆ ಕ್ಲಿಕ್ ಮಾಡಿ
6. ಈಗ ನೀವು ವರ್ಗಾಯಿಸಲು ಬಯಸುವ ಖಾತೆಯನ್ನು ಆಯ್ಕೆಮಾಡಿ.
7. ನೀವು ಅಕೌಂಟ್ ವರ್ಗಾಯಿಸಲು ಬಯಸುವ ಶಾಖೆಯ ಐಎಫ್‌ಎಸ್‌ಸಿ ಕೋಡ್ ಬರೆಯಿರಿ
8. ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ Confirm ಬಟನ್ ಒತ್ತಿ
9. ನಿಮ್ಮ ನೋಂದಾಯಿತ ಮೊಬೈಲ್ ಗೆ OTP ಬರುತ್ತದೆ, ಅದನ್ನು ತುಂಬಿ Confirm ಬಟನ್ ಒತ್ತಿ
10. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸಲಾಗುತ್ತದೆ
ಇದನ್ನೂ ಓದಿ : SBI ಕಾಂಟಾಕ್ಟ್ ಲೆಸ್ ಸೇವೆ ಆರಂಭ, ಕೇವಲ ಒಂದು ಕರೆಯಿಂದ ಸಾಧ್ಯವಾಗುತ್ತೆ ಈ ಕೆಲಸ
ಆನ್‌ಲೈನ್ ಅಲ್ಲದೆ, YONO ಅಪ್ಲಿಕೇಶನ್ ಅಥವಾ YONO Lite ಮೂಲಕ ಕೂಡಾ ಬ್ರಾಂಚ್ ಬದಲಾಯಿಸಬಹುದು. ಇದಕ್ಕೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು. ಯಾಕೆಂದರೆ ಮೊಬೈಲ್ ಗೆ ಬ್ಯಾಂಕ್ ಮೂಲಕ ಬರುವ ಒಟಿಪಿ ಇಲ್ಲದೆ ಖಾತೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.