)
Lakhpati Small Saving Scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-ಎಸ್ಬಿಐ ಬ್ಯಾಂಕ್ ಪ್ರತಿಯೊಂದು ಮನೆಯಲ್ಲೂ ಲಕ್ಷಾಧಿಪತಿಗಳು ಇರುವಂತಾಗಬೇಕು ಎಂಬ ಮಹಾನ್ ಉದ್ದೇಶದಿಂದ 'ಹರ್ ಘರ್ ಲಕ್ಪತಿ' ಎಂಬ ಅದ್ಭುತ ಆರ್ಡಿ ಯೋಜನೆಯನ್ನು ಪರಿಚಯಿಸಿದೆ. ಎಸ್ಬಿಐ ಬ್ಯಾಂಕಿನ ಈ ಉಳಿತಾಯ ಯೋಜನೆಯಲ್ಲಿ ಕಡಿಮೆ ಹಣವನ್ನು ಸೇವ್ ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಲಕ್ಷಾಧಿಪತಿಯಾಗಬೇಕು ಎನ್ನುವ ಕನಸು ನನಸಾಗುತ್ತದೆ.
ಹರ್ ಘರ್ ಲಕ್ಪತಿ ಯೋಜನೆ (Har Ghar Lakhpati Scheme):
ಹರ್ ಘರ್ ಲಕ್ಪತಿ ಯೋಜನೆಯು ಹೆಸರೇ ಸೂಚಿಸುವಂತೆ ಪ್ರತಿ ಮನೆಯಲ್ಲೂ ಲಕ್ಷಾಧಿಪತಿ ಎಂಬ ಅತ್ಯದ್ಭುತ ಕಲ್ಪನೆಗೆ ರೆಕ್ಕೆ ಕಟ್ಟುವ ಒಂದು ಹೊಸ ಆರ್ಡಿ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಎಷ್ಟು ವರ್ಷಕ್ಕೆ ಎಷ್ಟು ಹಣ ಕಟ್ಟಿದರೆ ಒಂದು ಲಕ್ಷವನ್ನು ಕಲೆಹಾಕಬಹುದು. ಈ ಆರ್ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವೆಲ್ಲಾ ಮಾನದಂಡಗಳನ್ನು ಪೂರೈಸಬೇಕು. ಹೂಡಿಕೆಗಾಗಿ ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ.
ಅರ್ಹತಾ ಮಾನದಂಡ:
ಹರ್ ಘರ್ ಲಕ್ಪತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ:-
* 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಿವಾಸಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಒಂದೊಮ್ಮೆ ಅಪ್ರಾಪ್ತ ವಯಸ್ಸಿನವರ ಹೆಸರಿನಲ್ಲಿ ಖಾತೆ ತೆರೆಯಲು ಬಯಸಿದರೆ ಇದಕ್ಕಾಗಿ ಮಕ್ಕಳ ಪರವಾಗಿ ಪೋಷಕರು ಅಕೌಂಟ್ ಓಪನ್ ಮಾಡಬಹುದು.
* ಈ ಆರ್ಡಿ ಯೋಜನೆಯಲ್ಲಿ ಜಂಟಿ ಖಾತೆ ತೆರೆಯಲೂ ಅವಕಾಶವಿದ್ದು ಗಂಡ-ಹೆಂಡತಿ, ಪೋಷಕರು (ಅಪ್ಪ/ಅಮ್ಮ)-ಮಕ್ಕಳು ಜಂಟಿಯಾಗಿ ಆರ್ಡಿ ಅಕೌಂಟ್ ತೆರೆಯಲು ಅವಕಾಶವಿದೆ.
ಈ ಯೋಜನೆಯಲ್ಲಿ ಖಾತೆ ತೆರೆಯುವುದು ಹೇಗೆ?
ಎಸ್ಬಿಐ ಹರ್ ಘರ್ ಲಕ್ಪತಿ ಆರ್ಡಿ ಯೋಜನೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಖಾತೆ ತೆರೆಯಬಹುದು.
ಈಗಾಗಲೇ ಎಸ್ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರು ಎಸ್ಬಿಐ ನೆಟ್ ಬ್ಯಾಂಕಿಂಗ್ ಅಥವಾ ಯೋನೋ ಆಪ್ ಸಹಾಯದಿಂದ ಆನ್ಲೈನ್ ಮೂಲಕ ಆರ್ಡಿ ತೆರೆಯಬಹುದು.
ನೀವು ಆಫ್ಲೈನ್ ಮೂಲಕ ಈ ಆರ್ಡಿ ಅಕೌಂಟ್ ಓಪನ್ ಮಾಡಲು ಬಯಸಿದರೆ ಎಸ್ಬಿಐ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಗತ್ಯ ದಾಖಲೆಗಳು:
ಎಸ್ಬಿಐ ಹರ್ ಘರ್ ಲಕ್ಪತಿ ಯೋಜನೆಯಲ್ಲಿ ಅಕೌಂಟ್ ಓಪನ್ ಮಾಡಲು, ಮೊದಲಿಗೆ ಎಸ್ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು. ಇಲ್ಲವೇ ಹೊಸದಾಗಿ ಖಾತೆ ತೆರೆಯಬೇಕಾಗುತ್ತದೆ. ಬಳಿಕ, ಖಾತೆದಾರರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿದ್ಯುತ್ ಬಿಲ್/ವೋಟರ್ ಐಡಿ, ಪಾಸ್ಪೋರ್ಟ್ ಅಳತೆಯ ಒಂದು ಭಾವಚಿತ್ರ ಹೊಂದಿರುವುದು ಅಗತ್ಯವಾಗಿದೆ.
ಬಡ್ಡಿ:
ಎಸ್ಬಿಐ ಹರ್ ಘರ್ ಲಕ್ಪತಿ ಯೋಜನೆಯಲ್ಲಿ ಮೂರರಿಂದ ನಾಲ್ಕು ವರ್ಷದವರೆಗೆ ಆರ್ಡಿ ತೆರೆದರೆ ಇದರ ಮೇಲೆ 6.75% ಬಡ್ಡಿ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಅವಧಿಗೆ (ಐದು, ಏಳು ಮತ್ತು ಹತ್ತು ವರ್ಷ) ಆಯ್ಕೆ ಮಾಡಿದರೆ 6.50% ಬಡ್ಡಿದರವನ್ನು ನಿಗದಿಗೊಳಿಸಲಾಗಿದೆ. ಹಿರಿಯ ನಾಗರೀಕರಿಗೆ ಈ ಯೋಜನೆಯಲ್ಲಿ 7.25% ಬಡ್ಡಿ ಪಾವತಿಸಲಾಗುತ್ತದೆ.
ಲಕ್ಷಾಧಿಪತಿಯಾಗಲು ಈ ಯೋಜನೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು?
ಎಸ್ಬಿಐ ಪರಿಚಯಿಸಿರುವ ಹರ್ ಘರ್ ಲಕ್ಪತಿ ಎಂಬ ವಿಶೇಷ ಆರ್ಡಿ ಯೋಜನೆಯಲ್ಲಿ ಗ್ರಾಹಕರು ಒಂದು ಲಕ್ಷವನ್ನು ಕಲೆಹಾಕಲು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಮೂರು, ನಾಲ್ಕು, ಐದು, ಏಳು ಮತ್ತು ಹತ್ತು ವರ್ಷದವರೆಗೆ ಆರ್ಡಿ ಖಾತೆ ತೆರೆಯಬಹುದಾಗಿದ್ದು, ನೀವು ಎಷ್ಟು ವರ್ಷಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದರ ಆಧಾರದ ಮೇಲೆ ಮಾಸಿಕ ಎಷ್ಟು ಹಣವನ್ನು ಠೇವಣಿ ಮಾಡಬೇಕು ಎಂಬುದು ಅವಲಂಬಿಸಿರುತ್ತದೆ.
ಹರ್ ಘರ್ ಲಕ್ಪತಿ ಯೋಜನೆಯಲ್ಲಿ ಹೂಡಿಕೆ ಮೂಲಕ ನೀವು ಒಟ್ಟಿಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯಲು ಮಾಸಿಕ ಮಾಸಿಕ ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?
| ಹೂಡಿಕೆ ಅವಧಿ | ಮಾಸಿಕ ಠೇವಣಿ ಮೊತ್ತ |
| ಮೂರು | ₹2482/- |
| ಐದು | ₹1391/- |
| ಏಳು | ₹923/- |
| ಹತ್ತು | ₹593/- |
ಹತ್ತು ವರ್ಷಗಳವರೆಗೆ ನೀವು ಪ್ರತಿ ತಿಂಗಳು ₹593 ಹೂಡಿಕೆ ಮಾಡಿದರೆ 120 ತಿಂಗಳುಗಳವರೆಗೆ ನೀವು ಒಟ್ಟು 71,160 ಠೇವಣಿ ಮಾಡುತ್ತೀರಿ. ಮೆಚ್ಯೂರಿಟಿ ವೇಳೆಗೆ ಸುಮಾರು 30,000ಕ್ಕಿಂತ ಹೆಚ್ಚಿನ ಬಡ್ಡಿಯೊಂದಿಗೆ ನೀವು ಒಂದು ಲಕ್ಷ ರೂ.ಗಿಂತಲೂ ಒಟ್ಟು ಮೊತ್ತವನ್ನು ಪಡೆಯುತ್ತೀರಿ.