)
ಹೆಚ್ಚಿನ ಹಿರಿಯ ನಾಗರಿಕರು ನಿವೃತ್ತಿಯ ನಂತರ ನೆಮ್ಮದಿಯ ಬದುಕು ಸಾಗಿಸಲು ಪಿಂಚಣಿಯನ್ನು ಅವಲಂಬಿಸಿರುತ್ತಾರೆ. ಆದರೆ, ಎಲ್ಲರಿಗೂ ಪಿಂಚಣಿ ಪಡೆಯುವ ಅವಕಾಶ ಸಿಗುವುದಿಲ್ಲ. ನಿವೃತ್ತಿಯ ನಂತರ ಪಿಂಚಣಿ ಸಿಗದೇ ಇರುವವರಿಗಾಗಿ ಸರ್ಕಾರ ಹಲವು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ಹಿರಿಯ ನಾಗರಿಕರ ಉಳಿತಾಯ ಯೋಜನೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ :
ಹಿರಿಯ ನಾಗರಿಕರಿಗೆ ಇದು ವಿಶ್ವಾಸಾರ್ಹ ಮತ್ತು ಸುರಕ್ಷಿತ ಯೋಜನೆಯಾಗಿದೆ. ಈ ಯೋಜನೆಯ ಮೂಲಕ, ಹಿರಿಯ ನಾಗರಿಕರು ಪ್ರತಿ ತಿಂಗಳು ಸುಮಾರು 20,000 ರೂ.ಗಳ ನಿಯಮಿತ ಆದಾಯವನ್ನು ಗಳಿಸಬಹುದು. ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಬ್ಯಾಂಕುಗಳ ಮೂಲಕ ಲಭ್ಯವಿರುವ ಈ ಸರ್ಕಾರಿ ಯೋಜನೆಯು ಸ್ಥಿರ ಬಡ್ಡಿದರದಲ್ಲಿ ನಿಯಮಿತ ಆದಾಯವನ್ನು ನೀಡುತ್ತದೆ. ಈ ರೀತಿಯಾಗಿ, ನಿವೃತ್ತಿಯ ನಂತರವೂ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು.
SCSS ನ ಪ್ರಮುಖ ಲಕ್ಷಣಗಳು :
1. ಕನಿಷ್ಠ ಮತ್ತು ಗರಿಷ್ಠ ಹೂಡಿಕೆ :
ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಒಂದೇ ಖಾತೆಯಲ್ಲಿ 30 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು. ಈ ಖಾತೆಗೆ ಸೇರಲು ಕನಿಷ್ಠ 1000 ರೂ.ಗಳ ಠೇವಣಿ ಅಗತ್ಯವಿದೆ. ಇಲ್ಲಿ ಹೂಡಿಕೆ ಮಾಡುವ ಮೊತ್ತವು 1 ಲಕ್ಷ ರೂ.ಗಳಿಗಿಂತ ಕಡಿಮೆಯಿದ್ದರೆ, ಹಣವನ್ನು ನಗದು ರೂಪದಲ್ಲಿ ಠೇವಣಿ ಮಾಡಬಹುದು. ಠೇವಣಿ ಮೊತ್ತವು 1 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ, ಹೂಡಿಕೆದಾರರು ಚೆಕ್ ಮೂಲಕ ಪಾವತಿಸಬೇಕಾಗುತ್ತದೆ. ಒಂದೇ ಮನೆಯಲ್ಲಿ 2 ವಿಭಿನ್ನ ಖಾತೆಗಳಿದ್ದರೆ, ಎರಡರಲ್ಲೂ ಗರಿಷ್ಠ 60 ಲಕ್ಷಗಳವರೆಗೆ ಠೇವಣಿ ಮಾಡಬಹುದು.
2. SCSS ಖಾತೆಯನ್ನು ಯಾರು ತೆರೆಯಬಹುದು? :
- 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು ಈ ಖಾತೆ ತೆರೆಯಬಹುದು.
- 55 ರಿಂದ 60 ವರ್ಷದೊಳಗಿನ ನಿವೃತ್ತ ವ್ಯಕ್ತಿಗಳು, ವಿಆರ್ಎಸ್ ಅಥವಾ ವಿಶೇಷ ವಿಆರ್ಎಸ್ ಅಡಿಯಲ್ಲಿ ನಿವೃತ್ತರಾದವರು ಕೂಡಾ ಈ ಖಾತೆ ತೆರೆಯಬಹುದು.
- ಭದ್ರತಾ ಸೇವೆಗಳಿಂದ ನಿವೃತ್ತರಾದವರು (ನಾಗರಿಕ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ) 50 ವರ್ಷ ವಯಸ್ಸಿನಿಂದ ಕೆಲವು ಷರತ್ತುಗಳೊಂದಿಗೆ ಖಾತೆಯನ್ನು ತೆರೆಯಬಹುದು.
3. ಪ್ರತ್ಯೇಕ ಅಥವಾ ಜಂಟಿ ಖಾತೆ :
ನೀವು ಈ ಖಾತೆಯನ್ನು ಪ್ರತ್ಯೇಕವಾಗಿ ಅಥವಾ ನಿಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ತೆರೆಯಬಹುದು.
4. ಬಡ್ಡಿ ಪಾವತಿ ವಿಧಾನ :
ಠೇವಣಿ ಮಾಡಿದ ದಿನಾಂಕದಿಂದ ತ್ರೈಮಾಸಿಕದ ಅಂತ್ಯದವರೆಗೆ (ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31) ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಮುಂದಿನ ತಿಂಗಳ ಮೊದಲ ಕೆಲಸದ ದಿನದಂದು (ಏಪ್ರಿಲ್ 1, ಜುಲೈ 1, ಅಕ್ಟೋಬರ್ 1, ಜನವರಿ 1) ಪಾವತಿಸಲಾಗುತ್ತದೆ.
5. ಖಾತೆಯನ್ನು ಯಾವಾಗ ಮುಚ್ಚಬಹುದು?:
ಖಾತೆ ತೆರೆದ 5 ವರ್ಷಗಳ ನಂತರ ಅದನ್ನು ಮುಚ್ಚಬಹುದು.
6. ಅವಧಿ ಮುಗಿದ ನಂತರವೂ ವಿಸ್ತರಣಾ ಸೌಲಭ್ಯ :
ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಆದರೆ ಈ ಯೋಜನೆ ಪೂರ್ಣಗೊಳ್ಳುವ ಮೊದಲು ಅರ್ಜಿ ಸಲ್ಲಿಸಿದರೆ, ಈ ಯೋಜನೆಯನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು. ಭಾರತದಲ್ಲಿ ವಾಸಿಸುವ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಒಟ್ಟು ಮೊತ್ತದ ಹೂಡಿಕೆಗಳನ್ನು ಮಾಡಬಹುದು. ಇದರ ಮೂಲಕ, ತೆರಿಗೆ ಪ್ರಯೋಜನಗಳ ಜೊತೆಗೆ ನಿಯಮಿತ ಆದಾಯವನ್ನು ಪಡೆಯಬಹುದು.
7. ಅಕಾಲಿಕವಾಗಿ ಖಾತೆ ಕ್ಲೋಸ್ ಮಾಡುವುದು :
SCSS ಯೋಜನೆಯು ಕೆಲವು ಷರತ್ತುಗಳ ಅಡಿಯಲ್ಲಿ ಅಗತ್ಯವಿದ್ದರೆ ಖಾತೆಯನ್ನು ಮುಂಚಿತವಾಗಿ ಮುಚ್ಚುವ ಸೌಲಭ್ಯವನ್ನು ಸಹ ಒದಗಿಸುತ್ತದೆ.
8. ತೆರಿಗೆ ವಿನಾಯಿತಿ :
ಈ ಯೋಜನೆಯಲ್ಲಿ ಠೇವಣಿ ಇಟ್ಟಿರುವ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ.
9. ಬಡ್ಡಿ ದರ :
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಅಂಚೆ ಕಚೇರಿಯ ಹೆಚ್ಚಿನ ಬಡ್ಡಿದರದ ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ, ಈ ಯೋಜನೆಯಲ್ಲಿ ಹೂಡಿಕೆಯು ವಾರ್ಷಿಕವಾಗಿ ಶೇಕಡಾ 8.2 ರಷ್ಟು ಬಡ್ಡಿಯನ್ನು ಪಡೆಯುತ್ತಿದೆ. ಭಾರತದಲ್ಲಿ ವಾಸಿಸುವ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬಹುದು. ಇದರ ಮೂಲಕ, ಅವರು ತೆರಿಗೆ ಪ್ರಯೋಜನಗಳ ಜೊತೆಗೆ ನಿಯಮಿತ ಆದಾಯವನ್ನು ಪಡೆಯಬಹುದು. ಗಂಡ ಮತ್ತು ಹೆಂಡತಿ ಇಬ್ಬರೂ 2 ಪ್ರತ್ಯೇಕ ಖಾತೆಗಳನ್ನು ತೆರೆದರೆ, ಅವರಿಗೆ ಎರಡು ಪಟ್ಟು ಲಾಭ ಸಿಗುತ್ತದೆ.
SCSS ವಾರ್ಷಿಕ 8.2% ಸ್ಥಿರ ದರದಲ್ಲಿ ಬಡ್ಡಿಯನ್ನು ಗಳಿಸುತ್ತದೆ ಮತ್ತು ಪ್ರತಿ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿಯಲ್ಲಿ ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಇದರಲ್ಲಿ ಹೂಡಿಕೆ ಮಾಡಬಹುದು ಮತ್ತು 5 ವರ್ಷಗಳವರೆಗೆ ಈ ಬಡ್ಡಿದರದ ಪ್ರಯೋಜನವನ್ನು ಪಡೆಯಬಹುದು.
ಹೂಡಿಕೆ ಮಾಡಿದ ಮೊತ್ತದ ಆಧಾರದ ಮೇಲೆ, ಈ ಯೋಜನೆಯು ಪ್ರತಿ 3 ತಿಂಗಳಿಗೊಮ್ಮೆ ಗರಿಷ್ಠ 61,500 ರೂ. ವರೆಗೆ ಬಡ್ಡಿಯನ್ನು ನೀಡುತ್ತದೆ. ಇದನ್ನು ತಿಂಗಳಿಗೆ ಲೆಕ್ಕ ಹಾಕಿದರೆ ಸರಾಸರಿ 20,500 ರೂ.
ಒಬ್ಬ ಹಿರಿಯ ನಾಗರಿಕ ಈ ಯೋಜನೆಯಲ್ಲಿ ವಾರ್ಷಿಕ ಶೇ. 8.2 ಬಡ್ಡಿದರದಲ್ಲಿ ಸುಮಾರು 30 ಲಕ್ಷ ರೂ. ಹೂಡಿಕೆ ಮಾಡಿದರೆ, ಅವರಿಗೆ ಪ್ರತಿ 3 ತಿಂಗಳಿಗೊಮ್ಮೆ 60,150 ರೂ. ಆದಾಯ ಸಿಗುತ್ತದೆ. ಅಂದರೆ ಪ್ರತಿ ತಿಂಗಳು 20,000 ರೂ. ಆದಾಯ ಕೈ ಸೇರುತ್ತದೆ.
ಒಂದೇ ಖಾತೆಯಲ್ಲಿ ಗರಿಷ್ಠ ಠೇವಣಿ: 30 ಲಕ್ಷಗಳು
ಬಡ್ಡಿ ದರ: ವಾರ್ಷಿಕ 8.2 ಪ್ರತಿಶತ
ಪಕ್ವತೆಯ ಅವಧಿ: 5 ವರ್ಷಗಳು
ತ್ರೈಮಾಸಿಕ ಬಡ್ಡಿ: 60,150 ರೂ.
ಮಾಸಿಕ ಬಡ್ಡಿ: 20,050 ರೂ.
5 ವರ್ಷಗಳಲ್ಲಿ ಒಟ್ಟು ಬಡ್ಡಿ: 12,03,000 ರೂ.
10. ಪಿಂಚಣಿ ಸೌಲಭ್ಯ ಯೋಜನೆ :
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸರ್ಕಾರಿ ಪಿಂಚಣಿ ಯೋಜನೆಯಂತಿದೆ. ಹಿರಿಯ ನಾಗರಿಕರು ಮಾತ್ರ ಈ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಖಾತೆಯಲ್ಲಿ ಠೇವಣಿ ಇಡುವ ಜನರು ಸರ್ಕಾರವು ನಿಗದಿಪಡಿಸಿದ ಠೇವಣಿಯ ಮೇಲೆ ಬಡ್ಡಿಯನ್ನು ಪಡೆಯುತ್ತಾರೆ. ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ.
SCSS: ಈ ಯೋಜನೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಯೋಜನೆಯು ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಬೆಂಬಲಿತವಾಗಿದೆ. ಆದ್ದರಿಂದ, ಇದು ಹೂಡಿಕೆ ಮೊತ್ತ ಮತ್ತು ಬಡ್ಡಿ ಎರಡಕ್ಕೂ ಖಾತರಿಯ ರಕ್ಷಣೆಯನ್ನು ಒದಗಿಸುತ್ತದೆ. ಇದು ನಿವೃತ್ತಿಯ ನಂತರ ಮಾರುಕಟ್ಟೆಯ ಏರಿಳಿತಗಳ ಪರಿಣಾಮಗಳಿಂದ ಪ್ರಭಾವಿತವಾಗದೆ ಸ್ಥಿರವಾದ ಆದಾಯವನ್ನು ಖಚಿತಪಡಿಸುತ್ತದೆ.
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು ಸ್ಥಿರವಾದ ನಿವೃತ್ತಿಯನ್ನು ಹುಡುಕುತ್ತಿದ್ದರೆ, SCSS ನಲ್ಲಿ ಹೂಡಿಕೆ ಮಾಡಬಹುದು ಮತ್ತು ಪ್ರತಿ ತಿಂಗಳು ಸ್ಥಿರವಾದ ಆದಾಯ ಪಡೆಯಬಹುದು.