Stock Market Live Update: ಸುಂಕ ಹೇರಿಕೆ ಬಗ್ಗೆ ಅಮೆರಿಕದ ಮೃದು ಧೋರಣೆಯ ನಂತರ ಭಾರತೀಯ ಷೇರುಪಟೆ ಚೇತರಿಕೆ ಹಾದಿಯತ್ತ ಹೊರಳಿದೆ. ಮಂಗಳವಾರವೂ ಷೇರುಪೇಟೆ ಭರ್ಜರಿ ಏರಿಕೆ ಕಂಡಿದ್ದು, ಒಂದೇ ದಿನ ಹೂಡಿಕೆದಾರರು ಬರೋಬ್ಬರಿ ₹10 ಲಕ್ಷ ಕೋಟಿ ಗಳಿಸಿದ್ದಾರೆ.
ಬಿಎಸ್‌ಇ ಸೆನ್ಸೆಕ್ಸ್ ವಹಿವಾಟಿನ ಅಂತ್ಯದಲ್ಲಿ 1577.63 ಅಂಕಗಳಷ್ಟು ಭರ್ಜರಿ ಏರಿಕೆಯಾಗಿ 76,734.89 ಮಟ್ಟದಲ್ಲಿ ಮುಕ್ತಾಯವಾಯಿತು. ಅದೇ ರೀತಿ ನಿಫ್ಟಿ50 ಕೂಡ 500 ಅಂಕಗಳ ಜಿಗಿತದ ಕಂಡು 23,328.55ಕ್ಕೆ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ ಕೂಡ 1377.15 ಅಂಕಗಳ ಭಾರೀ ಏರಿಕೆಯೊಂದಿಗೆ 52,379.50 ಮಟ್ಟದಲ್ಲಿ ಮುಕ್ತಾಯವಾಯಿತು. ಪರಿಣಾಮ ಕಳೆದ ವಾರ ಕೈಸುಟ್ಟುಕೊಂಡಿದ್ದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದ್ದು, ಭರ್ಜರಿ ಲಾಭ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: EPFO: ನಿಮ್ಮ UAN ಸಂಖ್ಯೆಯನ್ನು ಮರೆತಿದ್ದೀರಾ? ಅದನ್ನು ಸುಲಭವಾಗಿ ಪಡೆಯುವ ಮಾರ್ಗ ಇಲ್ಲಿದೆ..!
ಈ ಷೇರುಗಳಲ್ಲಿ ಭರ್ಜರಿ ಏರಿಕೆ!!
ಇಂದಿನ ವಹಿವಾಟಿನಲ್ಲಿ ಬಿಎಸ್‌ಇಯ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಮುಕ್ತಾಯಗೊಂಡವು. ಬಿಎಸ್‌ಇ ರಿಯಾಲ್ಟಿ, ಆಟೋ, ಬಂಡವಾಳ ಸರಕುಗಳು ಮತ್ತು ಕೈಗಾರಿಕೆಗಳು ಶೇ.5ರಷ್ಟು ಏರಿಕೆ ಕಂಡವು. ಸೆನ್ಸೆಕ್ಸ್ ಷೇರುಗಳಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಅತಿಹೆಚ್ಚು ಲಾಭ ಗಳಿಸಿತು. ಈ ಷೇರು ಶೇ.6.84ರಷ್ಟು ಏರಿಕೆಯಾದರೆ, ಟಾಟಾ ಮೋಟಾರ್ಸ್ ಶೇ.4.50ರಷ್ಟು ಲಾಭ ಗಳಿಸಿತು. ಲಾರ್ಸೆನ್ & ಟೂಬ್ರೊ, ಆಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಸಿಎಲ್ ಟೆಕ್ ಕೂಡ ಲಾಭ ಗಳಿಸಿದವು. ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕೊಂಚ ಕುಸಿತ ಕಂಡಿವೆ.
ಮಾರುಕಟ್ಟೆ ತಜ್ಞರು ಅಭಿಪ್ರಾಯವೇನು?
ಮಾರುಕಟ್ಟೆ ವಿಶ್ಲೇಷಕ ಸತೀಶ್ ಚಂದ್ರ ಅಲುರಿ ಮಾತನಾಡಿ, ಇತ್ತೀಚೆಗೆ ಟ್ರಂಪ್ ಸುಂಕ ಹೇರಿಕೆಯನ್ನ ಮುಂದೂಡಿರುವುದಾಗಿ ಘೋಷಿಸಿರುವುದು ಹೂಡಿಕೆದಾರರಲ್ಲಿ ಹೊಸ ಚೈತನ್ಯವನ್ನ ಮೂಡಿಸಿದೆ. ಇದು ಶ್ವೇತಭವನವು ಅಮೆರಿಕದ ಗ್ರಾಹಕರು ಮತ್ತು ವಿಶಾಲ ಆರ್ಥಿಕತೆಯ ಮೇಲಿನ ಒತ್ತಡವನ್ನು ಗುರುತಿಸುತ್ತದೆʼ ಅಂತಾ ಹೇಳಿದ್ದಾರೆ. ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIಗಳು) ಶುಕ್ರವಾರ 2,519.03 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.52ರಷ್ಟು ಕುಸಿದು 64.54 ಡಾಲರ್‌ಗೆ ತಲುಪಿದೆ.
ಏರಿಕೆಗೆ ತಾತ್ಕಾಲಿಕ ವಿನಾಯಿತಿ ಕಾರಣ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆ ವಿಧಿಸಲಾದ ಸುಂಕಗಳಿಂದ ಆಟೋ ಉದ್ಯಮಕ್ಕೆ ತಾತ್ಕಾಲಿಕವಾಗಿ ವಿನಾಯಿತಿ ನೀಡಬಹುದು ಎಂದು ಹೇಳಿದ್ದಾರೆ. ಟ್ರಂಪ್ ಅವರು ತಮ್ಮ ಸುಂಕದಿಂದ ತಾತ್ಕಾಲಿಕವಾಗಿ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ವಿನಾಯಿತಿ ನೀಡುವುದಾಗಿ ಹೇಳಿದ್ದಾರೆ. ಆಟೋ ಮೊಬೈಲ್‌ಗಳಿಗೆ ಈಗಾಗಲೇ ಜಾರಿಯಲ್ಲಿರುವ 25% ಸುಂಕವನ್ನು ಮನ್ನಾ ಮಾಡಬಹುದೆಂದು ಟ್ರಂಪ್ ಸೂಚಿಸಿದ್ದಾರೆ. ಈ ಅಂಶವು ಆಟೋ ಷೇರುಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ!!
ಅಮೆರಿಕ-ಚೀನಾ ತಿಕ್ಕಾಟದಿಂದ ಭಾರತಕ್ಕೆ ಲಾಭ?
ಅಮೆರಿಕ ಮತ್ತು ಚೀನಾ ನಡುವೆ ಇದೀಗ ʼಸುಂಕʼ ಸಮರ ನಡೆಯುತ್ತಿದೆ. ಭಾರತ ಸೇರಿದಂತೆ ಎಲ್ಲಾ ದೇಶಗಳ ಮೇಲಿನ ಸುಂಕವನ್ನ ೯೦ ದಿನಗಳ ಕಾಲ ಮುಂದೂಡುವುದಾಗಿ ಅಮೆರಿಕೆ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಆದರೆ ಚೀನಾದ ಮೇಲಿನ ಸುಂಕವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಚೀನಾ ಕೂಡ ಸುಂಕವನ್ನ ಹೆಚ್ಚಿಸಿದೆ. ಅಮೆರಿಕ-ಚೀನಾ ನಡುವಿನ ಈ ಸುಂಕ ಸಮರದಿಂದ ಭಾರತಕ್ಕೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಹೂಡಿಕೆದಾರರು ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









