ಸರ್ಕಾರ ಚಿನ್ನದ ಹಾಲ್ಮಾರ್ಕ್ ಅನ್ನು ಈಗ ಬೆಳ್ಳಿಗೂ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೇರುತ್ತಿದೆ. ಎರಡೂ ಲಕ್ಷ ರೂಪಾಯಿ ಗಡಿ ಮುಟ್ಟಿದೆ ಬೆಳ್ಳಿ. ಇನ್ನು ಇಷ್ಟು ಹಣ ಕೊಟ್ಟು ಖರೀದಿಸುತ್ತಿರುವ ಬೆಳ್ಳಿ ಎಷ್ಟು ಶುದ್ದ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಆತಂಕ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬೆಳ್ಳಿ ಖರೀದಿಗೂ ಸರ್ಕಾರ ಕೆಲವು ನಿಯಮಗಳನ್ನು ರೂಪಿಸಿದೆ. ಬೆಳ್ಳಿ ಆಭರಣಗಳಲ್ಲಿ ಕಲಬೆರಕೆ ತಡೆಯಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸರ್ಕಾರ ಚಿನ್ನದ ಹಾಲ್ಮಾರ್ಕ್ ಅನ್ನು ಈಗ ಬೆಳ್ಳಿಗೂ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.
ಬೆಳ್ಳಿ ಆಭರಣಗಳಿಗೆ ಹಾಲ್ಮಾರ್ಕ್ :
ಸೆಪ್ಟೆಂಬರ್ 1 ರಿಂದ, ಬೆಳ್ಳಿ ಆಭರಣಗಳ ಮೇಲೆ ಹಾಲ್ಮಾರ್ಕ್ನ 6-ಅಂಕಿಯ ಕೋಡ್ (HUID)ಅನ್ನು ಪರಿಚಯಿಸಬಹುದು. ಈ 6-ಅಂಕಿಯ ಕೋಡ್ಗಳು ಬೆಳ್ಳಿಯ ಶುದ್ಧತೆಯನ್ನು ಸಾರುತ್ತವೆ. ಪ್ರಸ್ತುತ, ಬೆಳ್ಳಿ ಹಾಲ್ಮಾರ್ಕಿಂಗ್ನಲ್ಲಿ ಕೋಡ್ಗಳು ಇಲ್ಲ. ನವದೆಹಲಿಯ ಭಾರತೀಯ ಹಾಲ್ಮಾರ್ಕಿಂಗ್ ಕೇಂದ್ರಗಳ ಸಂಘದ ಅಧ್ಯಕ್ಷ ಉದಯ್ ಗಜಾನನ್ ಶಿಂಧೆ ಅವರ ಪ್ರಕಾರ, ಇದನ್ನು ಶೀಘ್ರದಲ್ಲೇ ಜಾರಿಗೆ ತರಬಹುದು.
6-ಅಂಕಿಯ ಕೋಡ್ ಏನನ್ನು ಸೂಚಿಸುತ್ತದೆ :
ಸಾಮಾನ್ಯವಾಗಿ ಬೆಳ್ಳಿ ಆಭರಣಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಆಗ ಜನರು ಅದರ ಶುದ್ಧತೆಯ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಆದರೆ ಶೀಘ್ರದಲ್ಲೇ ಈ ಗೊಂದಲಕ್ಕೆ ತೆರೆ ಬೀಳಲಿದೆ. ಸರ್ಕಾರವು ಬೆಳ್ಳಿ ಆಭರಣಗಳ ಮೇಲೆ ವಿಶೇಷ 6-ಅಂಕಿಯ HUID ಸಂಖ್ಯೆಯ ಹಾಲ್ಮಾರ್ಕ್ ಹಾಕುವ ನಿಯಮವನ್ನು ತರಲಿದೆ. ಈ HUID ಸಂಖ್ಯೆಗಳು ಬೆಳ್ಳಿಯ ಶುದ್ಧತೆಯನ್ನು ಹೇಳುತ್ತವೆ. ಇದನ್ನು 6 ಶ್ರೇಣಿಗಳಾಗಿ ವಿಂಗಡಿಸಲಾಗುತ್ತದೆ. ಅದು 900, 800, 835, 925, 970 ಮತ್ತು 990 ಆಗಿರುತ್ತದೆ.
ಬೆಳ್ಳಿಯ ಹಾಲ್ಮಾರ್ಕಿಂಗ್ನ ಪ್ರಯೋಜನಗಳು :
ಬೆಳ್ಳಿಯ ಹಾಲ್ಮಾರ್ಕಿಂಗ್ನೊಂದಿಗೆ, ಖರೀದಿದಾರರಿಗೆ ಶುದ್ಧತೆಯ ಬಗ್ಗೆ ಯಾವುದೇ ಸಂದೇಹವಿರುವುದಿಲ್ಲ. ಆಭರಣಕಾರರಲ್ಲಿ ಅವರ ನಂಬಿಕೆ ಹೆಚ್ಚಾಗುತ್ತದೆ. ಹಾಲ್ಮಾರ್ಕ್ ನೋಡುವ ಮೂಲಕ ನೀವು ಬೆಳ್ಳಿಯ ಕಾಲ್ಗೆಜ್ಜೆಗಳು, ಉಂಗುರಗಳು, ಕಾಲ್ಬೆರಳ ಉಂಗುರಗಳು ಇತ್ಯಾದಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ನಕಲಿ ಬೆಳ್ಳಿ ಮಾರಟಕ್ಕೆ ತಡೆ ಬೀಳುತ್ತದೆ.