)
Amazon great indian festival 2025
: ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ 2025 ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಸೇಲ್ನಲ್ಲಿ ವಿವಿಧ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನ ನೀಡುತ್ತಿದೆ. ಸ್ಮಾರ್ಟ್ ಟಿವಿಗಳ ಖರೀದಯ ಮೇಲೆ ಗ್ರಾಹಕರಿಗೆ ಬಂಪರ್ ಡಿಸ್ಕೌಂಟ್ ಲಭ್ಯವಾಗಲಿದೆ. LG, Samsung, TCL ಮತ್ತು ಭಾರತೀಯ ಮಾರುಕಟ್ಟೆಯಲ್ಲಿನ ಇತರ ಪ್ರಮುಖ ಬ್ರ್ಯಾಂಡ್ಗಳ ಸ್ಮಾರ್ಟ್ಟಿವಿ ಮೇಲೆ 70% ವರೆಗೆ ರಿಯಾಯಿತಿ ಪಡೆಯಬಹುದು.
ಸ್ಮಾರ್ಟ್ ಟಿವಿಗಳ ಮೇಲೆ ಅದ್ಭುತ ಡೀಲ್ಗಳ ಜೊತೆಗೆ ನೀವು ವಿವಿಧ ಬ್ಯಾಂಕ್ಗಳಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳೊಂದಿಗೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ಈ ಅಮೆಜಾನ್ ಸೇಲ್ನಲ್ಲಿ ನೀವು LG QNED 55 ಇಂಚಿನ 4K ಸ್ಮಾರ್ಟ್ ಟಿವಿಯನ್ನ 49%ರ ದೊಡ್ಡ ರಿಯಾಯಿತಿಯಲ್ಲಿ ಪಡೆಯಬಹುದು. 4K ಸ್ಮಾರ್ಟ್ ಟಿವಿಗಳು, QNED ತಂತ್ರಜ್ಞಾನ ಹೊಂದಿರುವ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿದೆ.
ಅಮೆಜಾನ್ ಸೇಲ್ನಲ್ಲಿ TCL 55-ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ QLED ಗೂಗಲ್ ಟಿವಿ ಮೇಲೆ 70% ರಿಯಾಯಿತಿ ಸಿಗುತ್ತಿದೆ. ಉತ್ತಮ ಗುಣಮಟ್ಟದ ಟಿವಿಗಳ ಮೇಲೆ ಇಷ್ಟೊಂದು ದೊಡ್ಡ ರಿಯಾಯಿತಿ ಸಿಗುವುದು ಅಪರೂಪ. ಹೀಗಾಗಿ ಸ್ಮಾಟ್ಟಿವಿ ಖರೀದಿಸಲು ಇದು ನಿಮಗೆ ಸುವರ್ಣ ಅವಕಾಶ ಎಂದೇ ಹೇಳಬಹುದು.
Samsungನ 55 ಇಂಚಿನ ಸ್ಮಾರ್ಟ್ NEO QLED ಟಿವಿಯನ್ನ 60% ರಿಯಾಯಿತಿಯಲ್ಲಿ ಪಡೆಯಬಹುದು. ಇದು ಅತ್ಯುತ್ತಮ ಹೊಳಪು ಮತ್ತು ವ್ಯತಿರಿಕ್ತತೆಗಾಗಿ NEO QLED ತಂತ್ರಜ್ಞಾನದೊಂದಿಗೆ ಬರುತ್ತದೆ. ಪ್ರಸ್ತುತ ಈ Samsung 65 ಇಂಚಿನ QLED ಸ್ಮಾರ್ಟ್ ಟಿವಿ ಅಮೆಜಾನ್ ಮಾರಾಟದಲ್ಲಿ 34% ರಿಯಾಯಿತಿಯೊಂದಿಗೆ ಲಭ್ಯವಿದೆ.
TCL 98 ಇಂಚಿನ 4K ಸ್ಮಾರ್ಟ್ QD ಮಿನಿ LED ಟಿವಿಯೊಂದಿಗೆ ಅದ್ಭುತ ಮನರಂಜನಾ ಅನುಭವ ಪಡೆಯಬಹುದು. ಈಗ ಈ ಟಿವಿ 67% ರಿಯಾಯಿತಿಯಲ್ಲಿ ಲಭ್ಯವಿದೆ. ಇದಲ್ಲದೆ ಈ ಮಾರಾಟದಲ್ಲಿ LG, Samsung, Sony ಮತ್ತು ಇತರ ಎಲ್ಲಾ ಬ್ರಾಂಡ್ಗಳ ಸ್ಮಾರ್ಟ್ ಟಿವಿಗಳ ಮೇಲೆ ನೀವು ಭಾರೀ ರಿಯಾಯಿತಿ ಪಡೆಯಬಹುದು. ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವೆಂದೇ ಹೇಳಬಹುದು.