ಮನೆ ಖರೀದಿಸಲು ಹೆಂಡತಿಯೊಂದಿಗೆ ಜಂಟಿಯಾಗಿ ಗೃಹ ಸಾಲ ಮಾಡಿ; ಲಕ್ಷಾಂತರ ರೂಪಾಯಿ ಉಳಿಸಬಹುದು!!

Home Loan: ನಿಮ್ಮ ಹೆಂಡತಿಯೊಂದಿಗೆ ಜಂಟಿಯಾಗಿ ಗೃಹ ಸಾಲ ಪಡೆಯುವ ಮೂಲಕ, ನೀವು PMAY ಸಬ್ಸಿಡಿಯಿಂದ ನೋಂದಣಿ ಮೇಲಿನ ಮುದ್ರಾಂಕ ಶುಲ್ಕದವರೆಗೆ ಉಳಿತಾಯವನ್ನು ಪಡೆಯುತ್ತೀರಿ.

Written by - Puttaraj K Alur | Last Updated : May 18, 2025, 09:42 PM IST
  • ನೀವು ಮನೆ ಖರೀದಿಸಲು ಯೋಜಿಸುತ್ತಿದ್ದರೆ ನಿಮ್ಮ ಪತ್ನಿಯೊಂದಿಗೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬೇಕು
  • ಜಂಟಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದರಿಂದ ನೀವು ಸುಲಭವಾಗಿ ಲಕ್ಷಾಂತರ ರೂಪಾಯಿ ಉಳಿಸಬಹುದು
  • ಜಂಟಿ ಗೃಹ ಸಾಲ ಪಡೆದ್ರೆ PMAY ಸಬ್ಸಿಡಿಯಿಂದ ನೋಂದಣಿ ಮೇಲಿನ ಮುದ್ರಾಂಕ ಶುಲ್ಕದವರೆಗೆ ಉಳಿತಾಯ ಸಿಗುತ್ತದೆ
ಮನೆ ಖರೀದಿಸಲು ಹೆಂಡತಿಯೊಂದಿಗೆ ಜಂಟಿಯಾಗಿ ಗೃಹ ಸಾಲ ಮಾಡಿ; ಲಕ್ಷಾಂತರ ರೂಪಾಯಿ ಉಳಿಸಬಹುದು!!

Joint home loan benefits: ನೀವು ಮನೆ ಖರೀದಿಸಲು ಯೋಜಿಸುತ್ತಿದ್ದರೆ ನಿಮ್ಮ ಪತ್ನಿಯೊಂದಿಗೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಅಂದರೆ ನೀವು ಜಂಟಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡುವುದರಿಂದ ನೀವು ಸುಲಭವಾಗಿ ಲಕ್ಷಾಂತರ ರೂಪಾಯಿಗಳನ್ನು ಉಳಿಸಬಹುದು. ನೀವು ನಿಮ್ಮ ಪತ್ನಿಯೊಂದಿಗೆ ಜಂಟಿಯಾಗಿ ಗೃಹ ಸಾಲ ಪಡೆದರೆ, PMAY ಸಬ್ಸಿಡಿಯಿಂದ ನೋಂದಣಿ ಮೇಲಿನ ಮುದ್ರಾಂಕ ಶುಲ್ಕದವರೆಗೆ ಉಳಿತಾಯ ಸಿಗುತ್ತದೆ. ನಿಮ್ಮ ಪತ್ನಿಯೊಂದಿಗೆ ಗೃಹ ಸಾಲ ಪಡೆಯುವ ಮೂಲಕ 5 ದೊಡ್ಡ ಪ್ರಯೋಜನಗಳನ್ನು ನೀವು ಹೇಗೆ ಪಡೆಯಬಹುದು ಎಂದು ತಿಳಿಯಿರಿ. 

ಪತ್ನಿಯೊಂದಿಗೆ ಜಂಟಿ ಸಾಲ ಪಡೆದರೆ ಸಿಗುವ 5 ಪ್ರಯೋಜನಗಳು

ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಹತೆ

ನಿಮ್ಮ ಪತ್ನಿಯೊಂದಿಗೆ ಜಂಟಿಯಾಗಿ ಗೃಹ ಸಾಲ ಪಡೆಯುವ ಮೂಲಕ ನೀವು ಹೆಚ್ಚಿನ ಸಾಲವನ್ನು ಪಡೆಯಬಹುದು. ನಿಮ್ಮ ಹೆಂಡತಿ ಕೆಲಸ ಮಾಡುತ್ತಿದ್ದರೆ ಬ್ಯಾಂಕ್ ನಿಮಗೆ ಸುಲಭವಾಗಿ ಸಾಲ ನೀಡುತ್ತದೆ. ಇದು ಉತ್ತಮ ಮತ್ತು ದುಬಾರಿ ಮನೆಯನ್ನು ಖರೀದಿಸಲು ಸುಲಭವಾಗುತ್ತದೆ. 

ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ !ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ !ಹಿಂದಿನ ಸ್ತರಕ್ಕೆ ಇಳಿದು ಮತ್ತೆ ಕೈಗೆಟಕುವುದು ಬಂಗಾರ

ಬಡ್ಡಿ ದರದಲ್ಲಿ ರಿಯಾಯಿತಿ

ನೀವು ನಿಮ್ಮ ಪತ್ನಿಯೊಂದಿಗೆ ಜಂಟಿಯಾಗಿ ಗೃಹ ಸಾಲ ಪಡೆದರೆ, ಅನೇಕ ಬ್ಯಾಂಕುಗಳು ಬಡ್ಡಿದರದಲ್ಲಿ 0.05%ವರೆಗೆ ರಿಯಾಯಿತಿ ನೀಡುತ್ತವೆ. ಈ ರೀತಿ ನೀವು ಸಂಪೂರ್ಣ ಸಾಲದ ಅವಧಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಉಳಿಸಬಹುದು. 

ಡಬಲ್ ತೆರಿಗೆ ವಿನಾಯಿತಿ

ಜಂಟಿ ಗೃಹ ಸಾಲದಲ್ಲಿ ನೀವು ಮತ್ತು ನಿಮ್ಮ ಪತ್ನಿ ₹1.5 ಲಕ್ಷ (ಸೆಕ್ಷನ್ 80C) ಮತ್ತು ₹2 ಲಕ್ಷ (ಸೆಕ್ಷನ್ 24b) ವರೆಗಿನ ಕಡಿತವನ್ನು ಪ್ರತ್ಯೇಕವಾಗಿ ಪಡೆಯಬಹುದು. ಅಂದರೆ ನೀವು ಒಟ್ಟು ₹7 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಸ್ಟಾಂಪ್ ಡ್ಯೂಟಿಯಿಂದ ವಿನಾಯಿತಿ (ಮಹಿಳಾ ಜಂಟಿ ಮಾಲೀಕರಿಗೆ)

ದೆಹಲಿ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಮಹಿಳೆಯರಿಗೆ ಶೇ.1–2ರಷ್ಟು ಸ್ಟಾಂಪ್ ಡ್ಯೂಟಿ ವಿನಾಯಿತಿ ಸಿಗುತ್ತದೆ. 

ಇದನ್ನೂ ಓದಿ: ₹12000 ಕೋಟಿ ಮೌಲ್ಯದ ಕಂಪನಿ, 37 ಅಂತಸ್ತಿನ ಮನೆ... ಈ ವ್ಯಕ್ತಿ ಒಂದು ಕಾಲದಲ್ಲಿ ಅಂಬಾನಿಗಿಂತ ಶ್ರೀಮಂತನಾಗಿದ್ದ!!

PMAY ಸಬ್ಸಿಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಹಿಳೆ ಸಹ-ಮಾಲೀಕರಾಗಿದ್ದರೆ ಮಾತ್ರ ₹2.5 ಲಕ್ಷದವರೆಗೆ ಸಬ್ಸಿಡಿ ಲಭ್ಯವಿರುತ್ತದೆ. ನಿಮ್ಮ ಪತ್ನಿಯೊಂದಿಗೆ ಗೃಹ ಸಾಲ ತೆಗೆದುಕೊಳ್ಳುವ ಮೂಲಕ ನೀವು ಈ ಪ್ರಯೋಜನವನ್ನು ಪಡೆಯಬಹುದು. ಇದು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಮಾತ್ರ ಮಾನ್ಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News