Post Office Scheme: ದೇಶದ ಸಾಮಾನ್ಯ ನಾಗರಿಕರ ಅಗತ್ಯಗಳನ್ನ ಆಧರಿಸಿ ದೇಶದ ಅಂಚೆ ಕಚೇರಿಯು ವಿವಿಧ ಉಳಿತಾಯ ಯೋಜನೆಗಳನ್ನ ನಡೆಸುತ್ತದೆ. ಅಂಚೆ ಕಚೇರಿಯಲ್ಲಿ ಟಿಡಿ, ಆರ್‌ಡಿ, ಎಂಐಎಸ್, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವು ವಿಭಿನ್ನ ಯೋಜನೆಗಳಲ್ಲಿ ಖಾತೆಗಳನ್ನ ತೆರೆಯಬಹುದು. ಇಂದು ಅಂಚೆ ಕಚೇರಿಯ MIS (ಮಾಸಿಕ ಆದಾಯ ಯೋಜನೆ) ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಪ್ರತಿ ತಿಂಗಳು 5,550 ರೂ.ಗಳ ಸ್ಥಿರ ಬಡ್ಡಿಯನ್ನ ಗಳಿಸಬಹುದು. ಹೌದು, ಈ ಯೋಜನೆಯಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಉತ್ತಮ ಆದಾಯವನ್ನ ಗಳಿಸಬಹುದು.
ಪೋಸ್ಟ್ ಆಫೀಸ್ MIS ಯೋಜನೆಯಲ್ಲಿ 7.4% ಬಡ್ಡಿ
ಪೋಸ್ಟ್ ಆಫೀಸ್ MIS ಅಡಿಯಲ್ಲಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ ಸಾಕು ನಂತರ ನೀವು ಪ್ರತಿ ತಿಂಗಳು ಸ್ಥಿರ ಬಡ್ಡಿಯನ್ನ ಪಡೆಯುತ್ತೀರಿ. ಪೋಸ್ಟ್ ಆಫೀಸ್ MIS ಯೋಜನೆಯು ಪ್ರಸ್ತುತ ವಾರ್ಷಿಕ ಶೇ.7.4ರಷ್ಟು ಬಡ್ಡಿದರವನ್ನ ನೀಡುತ್ತದೆ. ಮಾಸಿಕ ಆದಾಯ ಯೋಜನೆಯಡಿ ಕನಿಷ್ಠ ₹1,000 ಒಟ್ಟು ಹೂಡಿಕೆಯನ್ನ ಮಾಡಬಹುದು, ಗರಿಷ್ಠ ₹9 ಲಕ್ಷ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ MIS ಯೋಜನೆಯಡಿ ನೀವು ಜಂಟಿ ಖಾತೆಯಲ್ಲಿ ಗರಿಷ್ಠ ₹15 ಲಕ್ಷ ಠೇವಣಿ ಇಡಬಹುದು. MIS ಯೋಜನೆಯಡಿ ಗರಿಷ್ಠ 3 ಜನರನ್ನ ಜಂಟಿ ಖಾತೆಯಲ್ಲಿ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್
₹9 ಲಕ್ಷ ಠೇವಣಿ ಇಟ್ರೆ ಮಾಸಿಕ ₹5,550 ಸ್ಥಿರಬಡ್ಡಿ
ನೀವು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷ ರೂಪಾಯಿಗಳನ್ನ ಠೇವಣಿಯಾಗಿ ಇಟ್ಟರೆ, 5 ವರ್ಷಗಳವರೆಗೆ ಪ್ರತಿ ತಿಂಗಳು 5,550 ರೂಪಾಯಿಗಳ ಸ್ಥಿರ ಬಡ್ಡಿಯನ್ನ ಪಡೆಯಲು ಪ್ರಾರಂಭಿಸುತ್ತೀರಿ. ಬಡ್ಡಿ ಮೊತ್ತವನ್ನ ನೇರವಾಗಿ ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಲಾಗುತ್ತದೆ. ಅಂಚೆ ಕಚೇರಿ MIS ಯೋಜನೆಯು 5 ವರ್ಷಗಳಲ್ಲಿ ಪಕ್ವವಾಗುತ್ತದೆ. ಮುಕ್ತಾಯದ ನಂತರ ನಿಮ್ಮ MIS ಖಾತೆಯಲ್ಲಿ ಠೇವಣಿ ಇಟ್ಟಿರುವ ಎಲ್ಲಾ ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
MIS ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಅಂಚೆ ಕಚೇರಿ ಉಳಿತಾಯ ಖಾತೆಯನ್ನ ಹೊಂದಿರಬೇಕು ಎಂಬುದು ಗಮನಿಸಬೇಕಾದ ಸಂಗತಿ. ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನ ಹೊಂದಿಲ್ಲದಿದ್ದರೆ, ನೀವು ಮೊದಲು ಉಳಿತಾಯ ಖಾತೆಯನ್ನ ತೆರೆಯಬೇಕಾಗುತ್ತದೆ, ಅದರ ನಂತರವೇ ನೀವು ಮಾಸಿಕ ಆದಾಯ ಯೋಜನೆಯಲ್ಲಿ ಖಾತೆಯನ್ನ ತೆರೆಯಬಹುದು.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)
ಇದನ್ನೂ ಓದಿ: ಅಂಚೆ ಕಚೇರಿಯ ಈ ಯೋಜನೆಯಿಂದ ನಿಮಗೆ ಸಿಗಲಿದೆ 40 ಲಕ್ಷ ರೂಪಾಯಿ..!









