)
ವೈಯಕ್ತಿಕ ಸಾಲ ಸಿಗುವುದು ಅಂದುಕೊಂಡಷ್ಟು ಸುಲಭವಲ್ಲ. ಬ್ಯಾಂಕುಗಳು ವೈಯಕ್ತಿಕ ಸಾಲ ನೀಡಬೇಕಾದರೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸುತ್ತವೆ. ಕೆಲವೊಮ್ಮೆ, ದಾಖಲೆಗಳ ಸಮಸ್ಯೆಗಳಿಂದಾಗಿ, ವೈಯಕ್ತಿಕ ಸಾಲ ನೀಡುವ ಪ್ರಕ್ರಿಯೆ ವಿಳಂಬವಾಗುತ್ತವೆ. ಯಾಕೆಂದರೆ ವೈಯಕ್ತಿಕ ಸಾಲ ಸಿಗಬೇಕಾದರೆ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅತ್ಯಗತ್ಯ.
ಒಂದು ವೇಳೆ, ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ, ವೈಯಕ್ತಿಕ ಸಾಲ ಪಡೆಯುವುದು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿ 300 ರಿಂದ 900ರ ನಡುವೆ ಇರುತ್ತದೆ. ಆದರೆ, ಭಾರತದ ಹೆಚ್ಚಿನ ಬ್ಯಾಂಕುಗಳು ಮತ್ತು NBFCಗಳು 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಮಾತ್ರ ಸಾಲ ನೀಡುತ್ತದೆ. ಕ್ರೆಡಿಟ್ ಸ್ಕೋರ್ 750 ಕ್ಕಿಂತ ಕಡಿಮೆಯಿದ್ದರೆ, ಸಾಲ ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.
ಸಾಲ ಪಡೆಯುವ ಸಾಧ್ಯತೆಗಳು ಯಾವುವು? :
ದೇಶಾದ್ಯಂತ ಅನೇಕ ಫಿನ್ಟೆಕ್ ಕಂಪನಿಗಳು ಮತ್ತು ಸಣ್ಣ NBFCಗಳು ಸಾಲದ ಹಿಸ್ಟರಿ ಅಥವಾ ದುರ್ಬಲವಾದ ಜನರಿಗೆ ಸಾಲಗಳನ್ನು ನೀಡುತ್ತವೆ. ವೈಯಕ್ತಿಕ ಸಾಲಕ್ಕೆ ಅರ್ಹರಾಗಿದ್ದೀರಾ ಎಂದು ನಿರ್ಧರಿಸಲು ಈ ಕಂಪನಿಗಳು ನಿಮ್ಮ ಆದಾಯ, ಕೆಲಸದ ಪ್ರಕಾರ ಮತ್ತು ಖಾತೆಯ ಬಾಕಿಯನ್ನು ನಿರ್ಣಯಿಸುತ್ತವೆ. ಬ್ಯಾಂಕಿನಲ್ಲಿ ವೇತನ ಅಥವಾ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಅವರಿಂದ ಸಾಲ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಸಹ-ಅರ್ಜಿದಾರ ಅಥವಾ ಖಾತರಿದಾರರ ಹೆಸರನ್ನು ಸೇರಿಸಿ :
ನಿಮ್ಮ ಕ್ರೆಡಿಟ್ ಸ್ಕೋರ್ ಯಾವುದೇ ಕಾರಣಕ್ಕಾಗಿ ಕಡಿಮೆಯಿದ್ದರೆ, ಹೆಚ್ಚಿನ ಸ್ಕೋರ್ ಹೊಂದಿರುವ ಯಾರನ್ನಾದರೂ ಅರ್ಜಿದಾರ ಅಥವಾ ಖಾತರಿದಾರರನ್ನಾಗಿ ನೇಮಿಸಿ. ಇದು ವ್ಯಕ್ತಿಯು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುತ್ತಾನೆ ಎಂಬ ವಿಶ್ವಾಸವನ್ನು ಬ್ಯಾಂಕಿಗೆ ನೀಡುತ್ತದೆ. ಸಾಲದ ಕಂತು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಅದು ಎರಡೂ ಪಕ್ಷಗಳ ಕ್ರೆಡಿಟ್ ದಾಖಲೆಗಳ ಮೇಲೆ ಪರಿಣಾಮ ಬೀರುತ್ತದೆ.
ಇವುಗಳ ಮೇಲೆ ಸಾಲವನ್ನೂ ಪಡೆಯಬಹುದು :
ವೈಯಕ್ತಿಕ ಸಾಲ ಪಡೆಯಲು ಹಲವಾರು ಮಾರ್ಗಗಳಿವೆ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ, ಆಸ್ತಿ, ಚಿನ್ನ ಅಥವಾ ಸ್ಥಿರ ಠೇವಣಿಯ ಮೇಲೆ ಸಾಲ ಪಡೆಯಬಹುದು. ಇದನ್ನು ಸುರಕ್ಷಿತ ಸಾಲ ಎಂದೂ ಕರೆಯುತ್ತಾರೆ. ಇದು ಬ್ಯಾಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.