ನೌಕರರ ಡಬ್ಬಲ್ ಧಮಾಕ.! ವೇತನ ಏರಿಕೆಗೆ ಕೂಡಿ ಬಂತು ಕಾಲ.! 30 ರೊಳಗೆ ಈ ಕೆಲಸ ಮುಗಿಸಿ..!
ಕೇಂದ್ರ ನೌಕರರಿಗೆ ಈ ಡಬ್ಬಲ್ ಧಮಾಕ. ಕೇಂದ್ರ ನೌಕರರ ವೇತನ ಏರಿಕೆಗೆ ಕಾಲ ಕೂಡಿ ಬಂದಿದೆ. ನೌಕರರ Appraisal ಸಮಯ ಇದು. ನೌಕರರು ತಮ್ಮ self-appraisal ಜೂನ್ 30 ರ ಒಳಗೆ ರಿಪೋರ್ಟಿಂಗ್ ಅಧಿಕಾರಿಗೆ ಒಪ್ಪಿಸಬೇಕಾಗಿದೆ.
ನವದೆಹಲಿ : ಕೇಂದ್ರ ನೌಕರರಿಗೆ ಈ ಡಬ್ಬಲ್ ಧಮಾಕ. ಕೇಂದ್ರ ನೌಕರರ ವೇತನ (Salary) ಏರಿಕೆಗೆ ಕಾಲ ಕೂಡಿ ಬಂದಿದೆ. ನೌಕರರ Appraisal ಸಮಯ ಇದು. ನೌಕರರು ತಮ್ಮ self-appraisal ಜೂನ್ 30 ರ ಒಳಗೆ ರಿಪೋರ್ಟಿಂಗ್ ಅಧಿಕಾರಿಗೆ ಒಪ್ಪಿಸಬೇಕಾಗಿದೆ. ಜುಲೈ 1 ರಿಂದ ಕೇಂದ್ರ ನೌಕರರ ಡಿಎ ಕೂಡಾ ಹೆಚ್ಚಾಗಲಿದೆ. ಜೊತೆಗೆ ಅಪ್ರೈಸಲ್ (Appraisal) ಸಮಯ ಕೂಡಾ ಬಂದಿದ್ದು, ಸಾಲರಿ ಏರಿಕೆಯ ಡಬ್ಬಲ್ ಖುಷಿ ಸರ್ಕಾರಿ ನೌಕರರದ್ದಾಗಿದೆ.
EPFO ವತಿಯಿಂದ Annual Performance Assessment Report (APAR) ಮಾಡ್ಯೂಲ್ ನ HR-Soft ಆನ್ ಲೈನ್ ವಿಂಡೋ ಲಾಂಚ್ ಮಾಡಲಾಗಿದೆ. ಈ ವಿಂಡೋ Group A, Group B ಮತ್ತು Group C ನೌಕರರಿಗೆ ಇದೀಗ ಲಭ್ಯವಿದೆ. ಇದಕ್ಕೆ ವಿಸಿಟ್ ಮಾಡಿ ಎಲ್ಲಾ ಕೇಂದ್ರ ನೌಕರರು (Central goverment employee) ತಮ್ಮ ರಿವ್ಯೂ ಮತ್ತು ರಿಪೋರ್ಟ್ ದಾಖಲಿಸಬಹುದಾಗಿದೆ. ಈ ಅಪ್ರೈಸಲ್ (Appraisal) ಪ್ರಕ್ರಿಯೆಯನ್ನು ಡಿಸೆಂಬರ್ 31ರ ಒಳಗೆ ಪೂರ್ಣಗೊಳಸಬೇಕಾಗಿದೆ.
ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ! ಜೂನ್ 30ರೊಳಗೆ ತಪ್ಪದೇ ಈ ಕೆಲಸ ಪೂರ್ಣಗೊಳಿಸಿ
ಎರಡು ಸಲ ಮುಂದೂಡಲಾಗಿತ್ತು :
ಅಪ್ರೈಸಲ್ (Appraisal) ಪ್ರಕ್ರಿಯೆಯನ್ನು ಎರಡು ಸಲ ಮುಂದೂಡಲಾಗಿತ್ತು. ಕೇಂದ್ರ ಸಿಬ್ಬಂದಿ ಸಚಿವಾಲಯ ಏಪ್ರಿಲ್ 14 ರಂದು ಈ ಸಂಬಂಧ ಒಂದು ಆದೇಶ ಜಾರಿ ಮಾಡಿತ್ತು. ಅದರ ಪ್ರಕಾರ CSS, CSSS ಮತ್ತುCSCS ಕೇಡರ್ ನ Group A, B ಮತ್ತು C ವಾರ್ಷಿಕ ಸಾಧನಾ ವರದಿ (APAR) ಸಲ್ಲಿಸುವ ದಿನಾಂಕ 31 ಡಿಸೆಂಬರ್ 2021 ತನಕ ವಿಸ್ತರಿಸಲಾಗಿತ್ತು. ಯಾರು 28, ಫೆಬ್ರವರಿಯಂದು ನಿವೃತ್ತರಾಗಿರುತ್ತಾರೆಯೋ ಅವರಿಗೂ ಇದರ ಲಾಭ ಸಿಗಲಿದೆ. 2019 – 20 ರಲ್ಲಿಯೂ ಎಪಿಎಆರ್ (APAR) ಸಲ್ಲಿಕೆಯನ್ನು ಮುಂದೂಡಲಾಗಿತ್ತು.
ತೆರೆದಿದೆ ಅಪ್ರೈಸಲ್ ವಿಂಡೋ :
ಕೇಂದ್ರ ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ ಮೇ 31ರ ಒಳಗೆ ಖಾಲಿಫಾರ್ಮ್ ವಿತರಿಸುವಅಥವಾ ಜನರೇಟ್ ಮಾಡುವ ಕೆಲಸ ಪೂರ್ಣ ಮಾಡಬೇಕಾಗಿತ್ತು. ಇದರ ನಂತರ ಜೂನ್ 30ರ ಒಳಗೆ ನೌಕರರ ಸೆಲ್ಫ್ ಅಪ್ರೈಸಲ್ (Self Appraisal) ರಿಪೋರ್ಟ್ ಅಧಿಕಾರಿಗೆ ಸಲ್ಲಿಸಬೇಕಾಗಿದೆ. ನಂತರ ಇದು ರಿವ್ಯೂ ಅಧಿಕಾರಿಯ ಬಳಿಗೆ ಹೋಗಲಿದೆ. ಎಲ್ಲಾ ಪ್ರಕ್ರಿಯೆಗಳು 31 ಡಿಸೆಂಬರ್ ಒಳಗೆ ಮುಗಿಯಬೇಕಿದೆ.
ಇದನ್ನೂ ಓದಿ : EPFO Good News: ಜುಲೈ ತಿಂಗಳಿನಲ್ಲಿ ಸಿಗುತ್ತಾ ಬಡ್ಡಿ? EPFOಗೆ ಸಿಕ್ತು ಕಾರ್ಮಿಕ ಸಚಿವಾಲಯದ ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.