ದುಬೈನಲ್ಲಿ ಚಿನ್ನ ತುಂಬಾ ಅಗ್ಗ; ಒಂದು ತೊಲೆಯ ಬೆಲೆ ಎಷ್ಟು ಗೊತ್ತಾ? ಟೂರ್‌ಗೆ ಹೋದಾಗ ತಪ್ಪದೇ ಖರೀದಿಸಿ!!

Gold Rates in Dubai: ಒಂದೆಡೆ ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿವೆ. ಆದರೆ ಮತ್ತೊಂದೆಡೆ ಪ್ರಪಂಚದ ಕೆಲವು ದೇಶಗಳಲ್ಲಿ ಚಿನ್ನದ ಬೆಲೆ ತುಂಬಾ ಕಡಿಮೆ ಇವೆ. ಮಾಯಾನಗರಿ ದುಬೈನಲ್ಲಿ ಚಿನ್ನದ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳಿರಿ.

Written by - Puttaraj K Alur | Last Updated : Mar 4, 2025, 06:05 PM IST
  • ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, ಪ್ರಪಂಚದ ಕೆಲವು ದೇಶಗಳಲ್ಲಿ ಚಿನ್ನ ತುಂಬಾ ಅಗ್ಗವಾಗಿದೆ
  • ದುಬೈನಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ಹತ್ತು ಗ್ರಾಂ ₹81,752ಗೆ ಲಭ್ಯವಿದೆ
  • ದೆಹಲಿಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ₹1000 ದಷ್ಟು ಏರಿಕೆ ಕಂಡು, ₹98,000ಗೆ ತಲುಪಿದೆ
ದುಬೈನಲ್ಲಿ ಚಿನ್ನ ತುಂಬಾ ಅಗ್ಗ; ಒಂದು ತೊಲೆಯ ಬೆಲೆ ಎಷ್ಟು ಗೊತ್ತಾ? ಟೂರ್‌ಗೆ ಹೋದಾಗ ತಪ್ಪದೇ ಖರೀದಿಸಿ!!
ಇಂದಿನ ಚಿನ್ನದ ದರ ಎಷ್ಟಿದೆ?

Today's Gold Silver Rates: ಭಾರತದಲ್ಲಿ ಚಿನ್ನದ ಬೆಲೆಗಳು ಗಗನಕ್ಕೇರಿದ್ದು, ಒಂದು ತೊಲೆ ಅಂದರೆ ಹತ್ತು ಗ್ರಾಂನ ಚಿನ್ನದ ಬೆಲೆ ಸುಮಾರು ₹80,000ಗಳಷ್ಟಿದೆ. ಮತ್ತೊಂದೆಡೆ ಬೆಳ್ಳಿಯ ಬೆಲೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆ ಏರಿಕೆಯಿಂದ ಚಿನ್ನದ ಮೇಲಿನ ಹೂಡಿಕೆಯೂ ಹೆಚ್ಚಾಗಿದೆ.

Add Zee News as a Preferred Source

ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಕಳೆದ ವಾರ ಚಿನ್ನದ ಬೆಲೆಗಳು ಸ್ವಲ್ಪ ಕುಸಿದಿದ್ದರಿಂದ ಬುಲಿಯನ್ ಮಾರುಕಟ್ಟೆಯು ಬುಲಿಯನ್ ರ್ಯಾಲಿಗೆ ಸಾಕ್ಷಿಯಾಯಿತು. ಭಾರತೀಯ ಬೆಳ್ಳಿ ಮತ್ತು ಆಭರಣ ವ್ಯಾಪಾರಿಗಳ ಸಂಘದ ಪ್ರಕಾರ, ಇಂದು ಅಂದರೆ ಮಂಗಳವಾರ (ಮಾರ್ಚ್‌ 4) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹87,530ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲೆಗೆ ₹80,250ಗಳಾಗಿದೆ.

ಇದನ್ನೂ ಓದಿ: MG Comet EV: ಫುಲ್ ಚಾರ್ಜ್‌ನಲ್ಲಿ 230 ಕಿ.ಮೀ ಚಲಿಸಬಲ್ಲ ಎಲೆಕ್ಟ್ರಿಕ್ ಕಾರ್ ಅತಿ ಕಡಿಮೆ ಬೆಲೆಯಲ್ಲಿ ಲಭ್ಯ...!

ಮತ್ತೊಂದೆಡೆ ಬೆಳ್ಳಿ ಬೆಲೆಯೂ ಗಗನಕ್ಕೇರಿದೆ. ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಘೋಷಿಸಿದ ದರಗಳ ಪ್ರಕಾರ, ಇಂದು ದೆಹಲಿಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ₹1000 ದಷ್ಟು ಏರಿಕೆ ಕಂಡು, ₹98,000ಗೆ ತಲುಪಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಗರಗಳನ್ನು ಅವಲಂಬಿಸಿ ಬದಲಾಗುತ್ತವೆ.

ಏತನ್ಮಧ್ಯೆ, ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಆದರೂ ಸಹ ಪ್ರಪಂಚದ ಕೆಲವು ದೇಶಗಳಲ್ಲಿ ಚಿನ್ನವು ತುಂಬಾ ಅಗ್ಗವಾಗಿ ಲಭ್ಯವಿದೆ. ಇದರಲ್ಲಿ ದುಬೈ ಕೂಡ ಸೇರಿದೆ. ದುಬೈನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಿರಿ.

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಮಹತ್ವದ ಸುದ್ದಿ !ಮಾರ್ಚ್ 15ರೊಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮದೇ ಹಣ ಕೈ ತಪ್ಪಿ ಹೋಗುವುದು!

ದುಬೈನಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ಹತ್ತು ಗ್ರಾಂಗೆ 3432.50 AFD ಆಗಿದೆ. ಈ ದರ ಭಾರತಕ್ಕಿಂತಲೂ ಅಗ್ಗವಾಗಿದೆ. ಈ ದರವನ್ನು ಭಾರತೀಯ ರೂಪಾಯಿಗಳಲ್ಲಿ ಹೇಳುವುದಾರೆ, ದುಬೈನಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ತೊಲೆಗೆ ₹81,752 ಆಗಿದೆ. ಭಾರತ ಮತ್ತು ದುಬೈನಲ್ಲಿ ಚಿನ್ನದ ಬೆಲೆಗಳನ್ನು ಹೋಲಿಸಿದರೆ, ದುಬೈನಲ್ಲಿ ಚಿನ್ನ ಅಗ್ಗವಾಗಿದೆ. ಹೀಗಾಗಿ ನೀವೂ ಏನಾದರೂ ದುಬೈಗೆ ಟೂರ್‌ ಹೋದರೆ ಅಲ್ಲಿಂದಲೇ ಚಿನ್ನವನ್ನ ಖರೀದಿಸಿಕೊಂಡು ಬನ್ನಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News