Triumph New Tiger 1200 Launch: ಮಾರುಕಟ್ಟೆಗೆ ಹೊಸ ಬೈಕ್ ಪರಿಚಯಿಸಿದ Triumph, ಆರಂಭಿಕ ಬೆಲೆ ಎಷ್ಟು ಗೊತ್ತಾ?
Triumph New Tiger 1200 Launch: ಸಾಹಸಿ ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. Triumph ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಬೈಕ್ ಪರಿಚಯಿಸಿದೆ. ಅಡ್ವೆಂಚರ್ ಟೂರಿಂಗ್ ಸೆಗ್ಮೆಂಟ್ ನಲ್ಲಿ ಈ ಬೈಕ್ BMW R 1250 GS ಹಾಗೂ Ducati Multistrada V4 ಬೈಕ್ ಗಳಿಗೆ ನೇರ ಪೈಪೋಟಿ ನೀಡಲಿದೆ.
Triumph New Tiger 1200 Launch: ಟ್ರಯಂಫ್ ಮಂಗಳವಾರ ಭಾರತದಲ್ಲಿ ತನ್ನ ಹೊಸ ಬೈಕ್ ನ್ಯೂ ಟೈಗರ್ 1200 ನ ವಿವಿಧ ರೂಪಾಂತರಿಗಳ ಬೆಲೆಗಳನ್ನು ಪ್ರಕಟಿಸಿದೆ. ಈ ಬೈಕ್ ನ ಆರಂಭಿಕ ಬೆಲೆ ರೂ. 19.19 ಲಕ್ಷ ಆಗಿದೆ. ಅಡ್ವೆಂಚರ್ ಟೂರಿಂಗ್ ವಿಭಾಗದಲ್ಲಿ, ಈ ಮೋಟಾರ್‌ಸೈಕಲ್ BMW R 1250 GS ಮತ್ತು ದುಕಾತಿ ಮಲ್ಟಿಸ್ಟ್ರಾಡಾ V4 ನಂತಹ ಬೈಕ್‌ಗಳೊಂದಿಗೆ ನೇರ ಪೈಪೋಟಿಗಿಳಿಯಲಿದೆ. ಹೊಸ ಟೈಗರ್ 1200 ಬೈಕ್ ಅತ್ಯಂತ ಶಕ್ತಿಶಾಲಿ ಮತ್ತು ಆಕರ್ಷಕ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ವಿವಿಧ ರೂಪಾಂತರಗಳ ಬೆಲೆ ಇಂತಿವೆ
>> Tiger 1200 GT Pro - Rs 19,19,000
>> Tiger 1200 GT Explorer - Rs 20,69,000
>> Tiger 1200 Rally Pro - Rs 20,19,000
>> Tiger 1200 Rally Explorer - Rs 21,69,000
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ
ಬೈಕ್ ಎಂಜಿನ್
ಈ ಬೈಕ್ ನ ಎಂಜಿನ್ ವಿಭಾಗದ ಕುರಿತು ಹೇಳುವುದಾದರೆ, ಹೊಸ ಟೈಗರ್ 1200 ಬೈಕ್ 1196ಸಿಸಿ, ಟಿ-ಪ್ಲೇನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಟ್ರಯಂಫ್ ನ್ಯೂ ಟೈಗರ್ 1200 ಬೈಕು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನಿಂದ ಸಂಯೋಜಿತಗೊಂಡಿದೆ. ಇದರ ಟ್ರಿಪಲ್ ಸಿಲಿಂಡರ್ ಎಂಜಿನ್ 148bhp ಪವರ್ ಮತ್ತು 130Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಸಣ್ಣ-ಪುಟ್ಟ ಬದಲಾವಣೆಗಳೊಂದಿಗೆ ಬೈಕ್ ಬಿಡುಗಡೆ
ಮುಖಭಾಗದಲ್ಲಿ ಹಾಗೂ ಇಂಧನ ಟ್ಯಾಂಕ್ ನಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳನ್ನು ಹೊರತುಪಡಿಸಿದರೆ, ಈ ಹೊಸ ರೂಪಾಂತರಿ ಬೈಕ್ ಬಹುತೇಕವಾಗಿ ಹಳೆ ಬೈಕ್ ಅನ್ನು ಹೋಲುತ್ತದೆ. ಇನ್ನುಳಿದಂತೆ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. ಇದು 7 ಇಂಚಿನ ಬಣ್ಣದ TFT ಪರದೆಯನ್ನು ಹೊಂದಿದ್ದು, ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀವು ಸಂಪರ್ಕಿಸಬಹುದು. ಬೈಕ್‌ನ ಎಕ್ಸ್‌ಪ್ಲೋರರ್ ರೂಪಾಂತರಿಯು 30 ಲೀಟರ್ ಪೆಟ್ರೋಲ್ ಸಾಮರ್ಥ್ಯದ ಅತಿದೊಡ್ಡ ಇಂಧನ ಟ್ಯಾಂಕ್ ಹೊಂದಿದೆ. ಈ ಬೈಕ್‌ನ ತೂಕ 245 ಕೆಜಿಯಿಂದ 261 ಕೆಜಿ ವರೆಗೆ ಇರಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.