Tulsi Farming,: ಇದನ್ನ ಬೆಳಸಲು ನೀವು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಆದರೆ ಉತ್ತಮ ಆದಾಯವನ್ನು ಸುಲಭವಾಗಿ ಗಳಿಸಬಹುದಾಗಿದೆ.

Tulsi Farming: ನೀವು ಔಷಧೀಯ ಸಸ್ಯಗಳನ್ನು ಬೆಳೆಸುವ ಮೂಲಕ ಕಡಿಮೆ ಬಂಡವಾಳದಲ್ಲಿ ಉತ್ತಮ ಹಣವನ್ನು ಗಳಿಸಬಹುದಾಗಿದೆ. ಔಷಧಿಯ ಸಸ್ಯಗಳಲ್ಲಿ ಉತ್ತಮ ಆದಾಯ ತರುವ ಬೇಸಾಯದಲ್ಲಿ ಒಂದು ತುಳಸಿ. ಇದನ್ನ ಬೆಳಸಲು ನೀವು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಆದರೆ ಉತ್ತಮ ಆದಾಯವನ್ನು ಸುಲಭವಾಗಿ ಗಳಿಸಬಹುದಾಗಿದೆ.
ತುಳಸಿಯ ಒಂದು ಸಸಿಯ ಬೆಲೆ ನಿಮಗೆ 15 ರೂಪಾಯಿ ಆಗಬಹುದು. 1 ಎಕರೆಯಲ್ಲಿ ತುಳಸಿ ಕೃಷಿ ಮಾಡಲು ನೀವು ಕೇವಲ 15,000 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಬಿತ್ತನೆ ಮಾಡಿದ 3 ತಿಂಗಳ ನಂತರ ತುಳಸಿ ಬೆಳೆ ಸರಾಸರಿ 3 ಲಕ್ಷ ರೂ.ಗಳಿಗೆ ಮಾರಾಟವಾಗುತ್ತದೆ. ಡಾಬರ್, ಬೈದ್ಯನಾಥ್, ಪತಂಜಲಿ ಸೇರಿದಂತೆ ಮುಂತಾದ ಔಷಧ ಮಾರುಕಟ್ಟೆಯಲ್ಲಿ ಇರುವ ಆಯುರ್ವೇದ ಕಂಪನಿಗಳು ಒಪ್ಪಂದದ ಮೇಲೆ ತುಳಸಿಯನ್ನು ಖರೀದಿಸುತ್ತವೆ.
ಕೇಂದ್ರ ಸರ್ಕಾರ ಉತ್ತೇಜಿಸುತ್ತದೆ
ಕೇಂದ್ರ ಸರ್ಕಾರವು ಪ್ರಸ್ತುತ ದೇಶಾದ್ಯಂತ ಔಷಧೀಯ ಸಸ್ಯಗಳ ಕೃಷಿಯನ್ನು ಉತ್ತೇಜಿಸುವತ್ತ ಒತ್ತು ನೀಡುತ್ತಿದೆ. ಭಾರತ ಸರ್ಕಾರದ ಆಯುಷ್ ಸಚಿವಾಲಯವು ಮುಂದಿನ ವರ್ಷದ ವೇಳೆಗೆ 75 ಲಕ್ಷ ಮನೆಗಳಿಗೆ ಔಷಧೀಯ ಸಸ್ಯಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ, ತುಳಸಿ ಕೂಡ ಆ ಸಸ್ಯಗಳಲ್ಲಿ ಒಂದಾಗಿದೆ.
ತುಳಸಿಯನ್ನು ಹೇಗೆ ಬೆಳೆಸುವುದು?
ಒಂದು ಎಕರೆ ಭೂಮಿಯಲ್ಲಿ ತುಳಸಿ ಬೆಳೆಸಲು, 600 ಗ್ರಾಂ ಬೀಜಗಳನ್ನು ಪ್ರತ್ಯೇಕವಾಗಿ ಬಿತ್ತಿ ಸಸಿಗಳನ್ನು ತಯಾರಿಸಲಾಗುತ್ತದೆ. ತುಳಸಿ ಸಸಿಗಳನ್ನು ತಯಾರಿಸಲು ಸರಿಯಾದ ಸಮಯ ಏಪ್ರಿಲ್ ಮೊದಲ ವಾರ. ಸಸಿಗಳು ಸುಮಾರು 15-20 ದಿನಗಳಲ್ಲಿ ಸಿದ್ಧವಾಗುತ್ತವೆ. ಜೂನ್ - ಜುಲೈನಲ್ಲಿ ಮಾನ್ಸೂನ್ ವೇಳೆ ತುಳಸಿ ಸಸಿಗಳನ್ನು ತಯಾರಿಸಲಾಗುತ್ತದೆ. ಸಸಿಗಳು ಸಿದ್ಧವಾದ ನಂತರ, ಅವುಗಳನ್ನು ನರ್ಸರಿಯಿಂದ ಹೊರತೆಗೆದು ಸಾಲುಗಳಲ್ಲಿ ನೆಡಲಾಗುತ್ತದೆ.
ತುಳಸಿ ಗಿಡಗಳ ಅಂತರ
ತುಳಸಿ ಸಸಿಗಳನ್ನು ನೆಡುವಾಗ, ಸಸ್ಯಗಳ ನಡುವಿನ ಅಂತರವು 12-15 ಇಂಚುಗಳು ಮತ್ತು ಸಾಲುಗಳ ನಡುವಿನ ಅಂತರವು 15-18 ಇಂಚುಗಳಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ತುಳಸಿ ಬೆಳೆಯಲ್ಲಿ ಯಾವುದೇ ರೋಗ ಅಥವಾ ಕೀಟಗಳ ದಾಳಿ ಆಗುವುದಿಲ್ಲ. ತುಳಸಿ ಗಿಡಗಳನ್ನು ಬೆಳೆಸಲು ಹಸುವಿನ ಗೊಬ್ಬರವನ್ನು ಮಾತ್ರ ಬಳಸಲಾಗುತ್ತದೆ.
ತುಳಸಿ ಬೆಳೆ ಸಿದ್ಧ
ಸಸಿಗಳನ್ನು ನೆಟ್ಟ 65-70 ದಿನಗಳಲ್ಲಿ ತುಳಸಿ ಬೆಳೆ ಸಿದ್ಧವಾಗುತ್ತದೆ. ಇದರ ನಂತರ, ತುಳಸಿ ಗಿಡವನ್ನು ಕತ್ತರಿಸಿ ಒಣಗಿಸಲಾಗುತ್ತದೆ. ತುಳಸಿಯ ಎಲೆಗಳು ಒಣಗಿದಾಗ, ಅವುಗಳನ್ನು ಸಂಗ್ರಹಿಸಲಾಗುತ್ತದೆ. ಒಂದು ಎಕರೆ ಭೂಮಿಯಿಂದ ಇಳುವರಿಯಾಗಿ ಐದರಿಂದ ಆರು ಕ್ವಿಂಟಾಲ್ ಒಣ ಎಲೆಗಳನ್ನು ಪಡೆಯಲಾಗುತ್ತದೆ. ಡಾಬರ್, ಪತಂಜಲಿ, ಬೈದ್ಯನಾಥ್ ಅಂತಹ ಔಷಧೀಯ ಕಂಪನಿಗಳು ತುಳಸಿ ಎಲೆಗಳನ್ನು ಕ್ವಿಂಟಾಲ್ಗೆ 7000 ರೂ. ದರದಲ್ಲಿ ಖರೀದಿಸುತ್ತವೆ. ಒಂದು ಎಕರೆ ತುಳಸಿ ಬೆಳೆಯಲು 5000 ರೂ. ವೆಚ್ಚವಾಗುತ್ತದೆ. ಒಂದು ಎಕರೆ ತುಳಸಿ ಬೆಳೆಯಿಂದ ಒಂದು ಬೆಳೆಯಲ್ಲಿ 36,000 ರೂ. ಉಳಿತಾಯವಾಗುತ್ತದೆ. ಒಂದು ವರ್ಷದಲ್ಲಿ ಮೂರು ಬೆಳೆಗಳ ತುಳಸಿಯನ್ನು ಬೆಳೆಯಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.