Twitter-Elon Musk Deal: ಎಲಾನ್ ಮಸ್ಕ್ ಟ್ವಿಟ್ಟರ್ ಗೆ ನೂತನ ಮುಖ್ಯಸ್ಥ! 3.25 ಲಕ್ಷ ಕೋಟಿಯ ಡೀಲ್ ಆಲ್ಮೋಸ್ಟ್ ಫೈನಲ್!
Twitter-Elon Musk Deal: ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಶೀಘ್ರದಲ್ಲೇ ಟ್ವಿಟರ್ನ ಹೊಸ ಮಾಲೀಕರಾಗಬಹುದು ಮತ್ತು ಟ್ವಿಟರ್ ಯಾವುದೇ ಕ್ಷಣದಲ್ಲಿ $43 ಶತಕೋಟಿ ಮೌಲ್ಯದ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು ಈ ಒಪ್ಪಂದದ ಮೌಲ್ಯ ಸುಮಾರು ಮೂರುವರೆ ಲಕ್ಷ ಕೋಟಿ ರೂ.ಗಳಾಗಿರಲಿದೆ.
Twitter set to accept Elon Musk Offer: ಅಮೇರಿಕನ್ ಬಿಲಿಯನೇರ್ ಮತ್ತು ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಶೀಘ್ರದಲ್ಲೇ ಮೈಕ್ರೋಬ್ಲಾಗಿಂಗ್ ಸೈಟ್ ಆಗಿರುವ Twitter ನ ಹೊಸ ಮಾಲೀಕರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೌದು, ಟ್ವಿಟ್ಟರ್ ನ ಒಂದು ಷೇರಿಗೆ ಎಲೋನ್ ಮಸ್ಕ್ $54.20 ಅಂದರೆ ಸುಮಾರು 4,152 ರೂ. ಬಿಡ್ ಮಾಡಿದ್ದರು. ರಾಯಿಟರ್ಸನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಟ್ವಿಟರ್ ಮಂಡಳಿಯು ಮಸ್ಕ್ ಅವರ ಈ ಪ್ರಸ್ತಾಪವನ್ನು ಅನುಮೋದಿಸಿದೆ ಎನ್ನಲಾಗಿದೆ. ಆದರೆ ಎಲೋನ್ ಮಸ್ಕ್ ಆಗಲಿ ಅಥವಾ ಟ್ವಿಟರ್ ಆಗಲಿ ಇನ್ನೂ ಅದನ್ನು ಅಧಿಕೃತವಾಗಿ ಒಪ್ಪಂದವನ್ನು ದೃಢಪಡಿಸಿಲ್ಲ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ.
3 ಲಕ್ಷ ಕೋಟಿ ಮೌಲ್ಯದ ಡೀಲ್
ಒಪ್ಪಂದದ ಕುರಿತು ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಟ್ವಿಟರ್ ಯಾವುದೇ ಸಮಯದಲ್ಲಿ 43 ಬಿಲಿಯನ್ ಡಾಲರ್ ಅಂದರೆ, ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಸುಮಾರು 3.25 ಲಕ್ಷ ಕೋಟಿ ರೂಪಾಯಿಗಳ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದರೂ ಕೂಡ. ಕೊನೆ ಗಳಿಗೆಯಲ್ಲಿ ಒಪ್ಪಂದ ಮುರಿದು ಬೀಳುವ ಸಾಧ್ಯತೆಯೂ ಇದೆ ತಿಳಿಸಿವೆ. ಟ್ವಿಟರ್ ಅನ್ನು ಖರೀದಿಸಲು ಈಗಾಗಲೇ ತಾವು $46.5 ಶತಕೋಟಿ ಹಣಕಾಸಿನ ವ್ಯವಸ್ಥೆಯನ್ನು ಮಾಡಿರುವುದಾಗಿ ಎಲೋನ್ ಮಸ್ಕ್ ಹೇಳಿದ್ದಾರೆ.
ಎಲೋನ್ ಮಸ್ಕ್ ಈಗಾಗಲೇ ಶೇ.9.2ರಷ್ಟು ಪಾಲನ್ನು ಖರೀದಿಸಿದ್ದಾರೆ.
ಇದನ್ನೂ ಓದಿ-Fake News ಚಲಾಯಿಸಿದ 16 ಯೂಟ್ಯೂಬ್ ಚಾನೆಲ್ ಗಳ ಮೇಲೆ ಕೇಂದ್ರ ಸರ್ಕಾರದ ನಿರ್ಬಂಧ
ಎಲೋನ್ ಮಸ್ಕ್ ಈಗಾಗಲೇ ಟ್ವಿಟರ್‌ನಲ್ಲಿ ಶೇ.9.2 ರಷ್ಟು ಪಾಲನ್ನು ಖರೀದಿಸಿದ್ದಾರೆ. ಸ್ವತ್ತು ನಿರ್ವಹಣಾ ಕಂಪನಿಯಾಗಿರುವ ವ್ಯಾನ್‌ಗಾರ್ಡ್ ಗ್ರೂಪ್ ಟ್ವಿಟರ್‌ನಲ್ಲಿ ಅತ್ಯಧಿಕ, ಅಂದರೆ ಶೇ.10.3 ರಷ್ಟು ಪಾಲನ್ನು ಹೊಂದಿದೆ. ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ತಲಾಲ್ ಸುಮಾರು ಶೇ.5.2 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅವರು ಈ ಹಿಂದೆ ಎಲೋನ್ ಮಸ್ಕ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
Twitter ಅನ್ನು ಮಸ್ಕ್ ಏಕೆ ಖರೀದಿಸಲು ಬಯಸುತ್ತಿದ್ದಾರೆ
ಎಲೋನ್ ಮಸ್ಕ್ ಅವರು ಏಪ್ರಿಲ್ 14 ರಂದು ಟ್ವಿಟರ್ ಖರೀದಿಗಾಗಿ ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ, ಆದರೆ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಹೇಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡಲಿದ್ದಾರೆ ಎಂಬುದನ್ನು ಅವರು ಹೇಳಿರಲಿಲ್ಲ. ಎಲೋನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಲು ಮುಂದಾಗಲು ಕಾರಣ ಎಂದರೆ, ಅದು ಮುಕ್ತ ಅಭಿವ್ಯಕ್ತಿಗೆ ವೇದಿಕೆಯಾಗಿದ್ದು, ಅದು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.