)
Vegetables Price Hike: ಮೊಂತಾ ಚಂಡಮಾರುತ ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಸೈಕ್ಲೋನ್ ಅಕಾಲಿಕ ಮಳೆಯಿಂದಾಗಿ ರಾಜ್ಯದ ಕೆಲ ಭಾಗಗಳಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ, ವರುಣಾರ್ಭಟದಿಂದ ಹಲವೆಡೆ ಬೆಳೆ ಹಾನಿಯೂ ಸಂಭವಿಸಿದೆ.
ಹೌದು, ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆಲವೆಡೆ ಬೆಳೆಗಳು ನೆಲಕಚ್ಚಿವೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತರಕಾರಿ ಬೆಳೆ ಹಾಳಾಗಿದ್ದು, ಪ್ರಸ್ತುತ ತರಕಾರಿ ಬೆಲೆಗಳು ಗಗನಕ್ಕೇರಿವೆ.
ತರಕಾರಿ ಬೆಲೆಗಳು ಆಗಸ ಮುಟ್ಟುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರು ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ನಷ್ಟದಲ್ಲಿದ್ದಾರೆ.
| ತರಕಾರಿ (ಪ್ರತಿ ಕೆಜಿಗೆ) | ಬೆಲೆ(ರೂಪಾಯಿಗಳಲ್ಲಿ) |
| ಈರುಳ್ಳಿ | 40 ರಿಂದ 50 |
| ನುಗ್ಗೆಕಾಯಿ | 140 ರಿಂದ 150 |
| ಬೀನ್ಸ್ | 90 ರಿಂದ 100 |
| ಜವಳಿಕಾಯಿ | 100 ರಿಂದ 120 |
| ಶುಂಠಿ | 100 ರಿಂದ 110 |
| ಕ್ಯಾರೆಟ್ | 90 ರಿಂದ 100 |
| ತೊಗರಿಕಾಯಿ | 80 ರಿಂದ 100 |
| ಹಸಿ ಮೆಣಸಿನಕಾಯಿ | 80 ರಿಂದ 100 |
| ಟೊಮೊಟೋ | 30 ರಿಂದ 40 |
| ಆಲೂಗಡ್ಡೆ | 50 ರಿಂದ 60 |
| ಹೀರೇಕಾಯಿ | 50 ರಿಂದ 60 |
| ಬದನೆಕಾಯಿ | 60 ರಿಂದ 70 |
| ಬೆಂಡೆಕಾಯಿ | 70 ರಿಂದ 80 |
| ಬಿಟ್ರೂಟ್ | 70 ರಿಂದ 80 |
| ಹೂಕೋಸು | 80 ರಿಂದ 90 |
| ಕ್ಯಾಪ್ಸಿಕಂ | 80 ರಿಂದ 90 |
| ಬಟಾಣಿ ಫಾರಂ | 260 ರಿಂದ 270 |
ಇದನ್ನೂ ಓದಿ- ಇಪಿಎಫ್ಒ: ಪಿಂಚಣಿ ನಿಯಮದಲ್ಲಿ 5 ಪ್ರಮುಖ ಬದಲಾವಣೆ