)
UPI new rules : ಮುಂಬರುವ ದಿನಗಳಲ್ಲಿ, UPI ಪಾವತಿ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಅಕ್ಟೋಬರ್ 1 ರಿಂದ, UPI 'ಕಲೆಕ್ಟ್ ರಿಕ್ವೆಸ್ಟ್ಗಳು' ನಿಲ್ಲಿಸಲಾಗುವುದು. ಇದು ನಿಮ್ಮ ದೈನಂದಿನ ವಹಿವಾಟುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.
ಅಕ್ಟೋಬರ್ 1, 2025 ರಿಂದ ಪೀರ್-ಟು-ಪೀರ್ (P2P) UPI ವಹಿವಾಟುಗಳಿಗಾಗಿ 'ಕಲೆಕ್ಟ್ ರಿಕ್ವೆಸ್ಟ್ಗಳು' ವೈಶಿಷ್ಟ್ಯವನ್ನು ನಿಲ್ಲಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಿರ್ಧರಿಸಿದೆ. ವಂಚನೆ ಮತ್ತು ದುರುಪಯೋಗವನ್ನು ತಡೆಗಟ್ಟಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬದಲಾವಣನೆ ಏನು..? : 'ಕಲೆಕ್ಟ್ ರಿಕ್ವೆಸ್ಟ್' ವೈಶಿಷ್ಟ್ಯವು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಹಣ ಕೇಳಲು ವಿನಂತಿಯನ್ನು ಕಳುಹಿಸುವ ವಿಭಾಗವಾಗಿದೆ. ಉದಾಹರಣೆಗೆ, ಈ ವೈಶಿಷ್ಟ್ಯವನ್ನು ಸ್ನೇಹಿತರೊಂದಿಗೆ ರೆಸ್ಟೋರೆಂಟ್ನಲ್ಲಿ ಬಿಲ್ ಅನ್ನು ಹಂಚಿಕೊಳ್ಳಲು ಅಥವಾ ಸಾಲ ಮರುಪಾವತಿಯನ್ನು ನೆನಪಿಸಲು ಬಳಸಲಾಗುತ್ತದೆ. ಈ ವಿನಂತಿಯನ್ನು ಸ್ವೀಕರಿಸಿ ಹಣವನ್ನು ಕಳುಹಿಸಬಹುದು.. ತಿರಸ್ಕರಿಸಲೂ ಬಹುದು.
ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ಈ ವೈಶಿಷ್ಟ್ಯವನ್ನು ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮುಗ್ಧ ಬಳಕೆದಾರರಿಗೆ ನಕಲಿ ಹಣ ವರ್ಗಾವಣೆ ವಿನಂತಿಗಳನ್ನು ಕಳುಹಿಸಿ ಮತ್ತು ಅವುಗಳನ್ನು ಸ್ವೀಕರಿಸುವಂತೆ ಮೋಸಗೊಳಿಸುವ ಮೂಲಕ ವಂಚನೆಗಳುನ್ನು ಮಾಡಲಾಗುತ್ತಿದೆ. ಅಕ್ಟೋಬರ್ 1 ರಿಂದ, ಈ ವೈಶಿಷ್ಟ್ಯವನ್ನು ರದ್ದು ಮಾಡಲಾಗುತ್ತಿದೆ.
ಉದ್ದೇಶ : ಈ ಬದಲಾವಣೆಯನ್ನು ವಂಚನೆ ತಡೆಯಲು ಕೈಗೊಳ್ಳಲಾಗಿದೆ. ಈ ಮೂಲಕ UPI ಅನ್ನು ಹೆಚ್ಚು ಸುರಕ್ಷಿತವಾಗಿಸಲು ಸಂಸ್ಥೆ ಮುಂದಾಗಿದೆ. ಸ್ನೇಹಿತರಿಂದ ಹಣವನ್ನು ಸ್ವೀಕರಿಸಲು ಬಳಸುತ್ತಿದ್ದ ಈ ವಿಧಾನದ ಬದಲಿಗೆ ಪಾವತಿ ಲಿಂಕ್ಗಳು, QR ಕೋಡ್ಗಳು ಅಥವಾ ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳ ಮೂಲಕ ಮಾತ್ರ ಹಣವನ್ನು ವಿನಂತಿಸಬಹುದು.