ಕೇವಲ 11 ರೂಪಾಯಿಗೆ ವಿದೇಶಯಾನದ ಅವಕಾಶ !ಈ ವಿಮಾನಯಾನ ಸಂಸ್ಥೆ ನೀಡುತ್ತಿದೆ ಹೋಳಿ ಆಫರ್

ಈ ಕೊಡುಗೆಯಡಿಯಲ್ಲಿ, ಭಾರತೀಯ ಪ್ರಯಾಣಿಕರಿಗೆ ಏಕಮುಖ ಪ್ರಯಾಣದ ಇಕಾನಮಿ ಕ್ಲಾಸ್ ಶುಲ್ಕ ಕೇವಲ 11 ರೂ.ಗಳಿಂದ ಪ್ರಾರಂಭವಾಗುತ್ತದೆ.  

Written by - Ranjitha R K | Last Updated : Feb 26, 2025, 10:42 AM IST
  • ಈ ನಗರಗಳಿಂದ ವಿಮಾನಗಳು ಲಭ್ಯವಿರುತ್ತವೆ
  • ಸುಮಾರು 10 ಮಾರ್ಗಗಳಲ್ಲಿ ವಿಮಾನಗಳು ಪ್ರಾರಂಭ
  • ದ್ವಿಗುಣವಾಗುವುದು ಹೋಳಿ ಆಚರಣೆ
ಕೇವಲ 11 ರೂಪಾಯಿಗೆ ವಿದೇಶಯಾನದ ಅವಕಾಶ !ಈ ವಿಮಾನಯಾನ ಸಂಸ್ಥೆ ನೀಡುತ್ತಿದೆ ಹೋಳಿ ಆಫರ್

ವಿಮಾನ ಪ್ರಯಾಣದ ಬೇಡಿಕೆ ಹೆಚ್ಚುತ್ತಿರುವಂತೆ, ವಿಮಾನ ಟಿಕೆಟ್‌ಗಳು ಸಹ ದುಬಾರಿಯಾಗುತ್ತಿವೆ. ಆದರೆ ಈ ಮಧ್ಯೆ, ವಿಮಾನಯಾನ ಕಂಪನಿಗಳು ಅಗ್ಗದ ದರದಲ್ಲಿ ವಿದೇಶಯಾನ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ. ನೀವು ಕೂಡಾ ವಿದೇಶ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ, ವಿಯೆಟ್ನಾಂನ ವಿಯೆಟ್ಜೆಟ್ ಏರ್ಲೈನ್ಸ್ ಭಾರತೀಯರಿಗೆ ಉತ್ತಮ ಆಫರ್ ನೀಡುತ್ತಿದೆ. ಈ ಕೊಡುಗೆಯಡಿಯಲ್ಲಿ, ಭಾರತೀಯ ಪ್ರಯಾಣಿಕರಿಗೆ ಏಕಮುಖ ಪ್ರಯಾಣದ ಇಕಾನಮಿ ಕ್ಲಾಸ್ ಶುಲ್ಕ ಕೇವಲ 11 ರೂ.ಗಳಿಂದ ಪ್ರಾರಂಭವಾಗುತ್ತದೆ.

Add Zee News as a Preferred Source

ಆಫರ್ ಏನು? : 
ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದೆ. ಇದರ ಅಡಿಯಲ್ಲಿ, ಫೆಬ್ರವರಿ 28, 2025 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಈ ಕೊಡುಗೆಯ ಅಡಿಯಲ್ಲಿ, ಮಾರ್ಚ್ 10 ರಿಂದ ಸೆಪ್ಟೆಂಬರ್ 30, 2025 ರವರೆಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ಕೊಡುಗೆ ಭಾರತದಿಂದ ವಿಯೆಟ್ನಾಂಗೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಅನ್ವಯವಾಗುತ್ತದೆ. ಆದರೆ ಇಲ್ಲಿ ತೆರಿಗೆ ಮತ್ತು ವಿಮಾನ ನಿಲ್ದಾಣ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಏರ್‌ಟೆಲ್‌ನ 84 ದಿನಗಳ ರಿಚಾರ್ಜ್‌ ಪ್ಲ್ಯಾನ್‌; ಅನ್‌ಲಿಮಿಟೆಡ್‌ ಕಾಲ್‌, 5G ಡೇಟಾ ಮತ್ತಷ್ಟು ಪ್ರಯೋಜನಗಳು

ಈ ನಗರಗಳಿಂದ ವಿಮಾನಗಳು ಲಭ್ಯವಿರುತ್ತವೆ:
ವಿಯೆಟ್ಜೆಟ್ ಏರ್‌ಲೈನ್‌ನ ವಿಶೇಷ ಕೊಡುಗೆಯಡಿಯಲ್ಲಿ, ಭಾರತೀಯ ಪ್ರಯಾಣಿಕರು ನವದೆಹಲಿ, ಮುಂಬೈ, ಅಹಮದಾಬಾದ್, ಕೊಚ್ಚಿ, ಹೈದರಾಬಾದ್ ಮತ್ತು ಬೆಂಗಳೂರಿನಿಂದ ವಿಯೆಟ್ನಾಂನ ಪ್ರಮುಖ ನಗರಗಳಾದ ಹನೋಯ್, ಹೋ ಚಿ ಮಿನ್ಹ್ ಸಿಟಿ ಮತ್ತು ಡಾ ನಾಂಗ್‌ಗೆ ವಿಮಾನಗಳನ್ನು ತೆಗೆದುಕೊಳ್ಳಬಹುದು. ಟಿಕೆಟ್ ಬುಕಿಂಗ್ ಅನ್ನು ವಿಯೆಟ್ಜೆಟ್‌ನ ಅಧಿಕೃತ ವೆಬ್‌ಸೈಟ್ ( www.vietjetair.com ) ಮತ್ತು ವಿಯೆಟ್ಜೆಟ್ ಏರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.

ಸುಮಾರು 10 ಮಾರ್ಗಗಳಲ್ಲಿ ವಿಮಾನಗಳು ಪ್ರಾರಂಭ : 
ಭಾರತ ಮತ್ತು ವಿಯೆಟ್ನಾಂ ನಡುವೆ ಗರಿಷ್ಠ ಸಂಖ್ಯೆಯ ವಿಮಾನಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆಯಾಗುವತ್ತ ವಿಯೆಟ್ಜೆಟ್ ಏರ್ಲೈನ್ಸ್ ವೇಗವಾಗಿ ಸಾಗುತ್ತಿದೆ. ಮಾರ್ಚ್ 2025 ರಲ್ಲಿ, ವಿಯೆಟ್ಜೆಟ್ ಬೆಂಗಳೂರು ಮತ್ತು ಹೈದರಾಬಾದ್ ಅನ್ನು ಹೋ ಚಿ ಮಿನ್ಹ್ ನಗರಕ್ಕೆ ಸಂಪರ್ಕಿಸುವ ಎರಡು ಹೊಸ ನೇರ ವಿಮಾನಗಳನ್ನು ಪ್ರಾರಂಭಿಸಲಿದೆ.ಇದರೊಂದಿಗೆ, ಭಾರತ-ವಿಯೆಟ್ನಾಂ ನಡುವಿನ ಅದರ ಜಾಲವು ಒಟ್ಟು 10 ಮಾರ್ಗಗಳನ್ನು ಹೊಂದಲಿದ್ದು, ಪ್ರತಿ ವಾರ 78 ವಿಮಾನಗಳು ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ : ಏಪ್ರಿಲ್ 1 ರಿಂದ ಹೊಸ ಪಿಂಚಣಿ ವ್ಯವಸ್ಥೆ:ಈ ಹೊಸ ನಿಯಮದಿಂದ ಸಿಗುವ ವಿಶೇಷ ಸವಲತ್ತುಗಳ ವಿವರ ಇಲ್ಲಿದೆ

ದ್ವಿಗುಣವಾಗುವುದು ಹೋಳಿ ಆಚರಣೆ : 
ಹೋಳಿ ಆಚರಣೆಯನ್ನು ವಿಶೇಷವಾಗಿಸಲು, ವಿಯೆಟ್ಜೆಟ್ ವಿಮಾನದ ಸಮಯದಲ್ಲಿ ಪ್ರಯಾಣಿಕರಿಗೆ ವಿಶೇಷ ಮನರಂಜನೆ, ಹಬ್ಬದ ಉಡುಗೊರೆಗಳು ಮತ್ತು 10,000 ಮೀಟರ್ ಎತ್ತರದಲ್ಲಿ ವಿಶಿಷ್ಟ ಆಶ್ಚರ್ಯಗಳನ್ನು ಒದಗಿಸಲು ಯೋಜಿಸುತ್ತಿದೆ. ಇದು ನಿಮ್ಮ ಪ್ರವಾಸವನ್ನು ಇನ್ನಷ್ಟು ಮೋಜಿನಿಂದ ಕೂಡಿಸುತ್ತದೆ. ಐಷಾರಾಮಿ ಮತ್ತು ಪ್ರೀಮಿಯಂ ಅನುಭವವನ್ನು ಬಯಸುವ ಪ್ರಯಾಣಿಕರಿಗೆ, ವಿಯೆಟ್ಜೆಟ್ ಸ್ಕೈಬಾಸ್ ಮತ್ತು ಬಿಸಿನೆಸ್ ಕ್ಲಾಸ್ ಅನ್ನು ನೀಡುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News