ಅಗ್ಗದ ರೀಚಾರ್ಜ್ ಯೋಜನೆ

ಭಾರತೀಯ ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲಿ ಏರ್‌ಟೆಲ್‌ ಸಹ ಒಂದು. ಏರ್ಟೆಲ್ ತನ್ನ ಗ್ರಾಹಕರಿಗೆ ಹಬ್ಬದ ವಿಶೇಷ ಸಂದರ್ಭಗಳಲ್ಲಿ ಹಲವು ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತದೆ. ಅದೇ ರೀತಿ ಕಡಿಮೆ ಬೆಲೆಯ ಕೆಲವು ಅಗ್ಗದ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.

Puttaraj K Alur
Jan 14,2023

ಜಿಯೋಗೆ ಏರ್‌ಟೆಲ್‌ ಸೆಡ್ಡು!

ಜಿಯೋಗೆ ನಿರಂತರ ಪೈಪೋಟಿ ನೀಡುವ ಏರ್‌ಟೆಲ್‌ ಇದೀಗ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಆ ರೀಚಾರ್ಜ್ ಪ್ಲ್ಯಾನ್ ಯಾವುದು? ಮತ್ತು ಆಫರ್ಸ್ ಏನು ಅನ್ನೋದನ್ನು ತಿಳಿಯಿರಿ.

ಏರ್‌ಟೆಲ್‌ 35 ರೂ. ರೀಚಾರ್ಜ್ ಪ್ಲ್ಯಾನ್

ಏರ್‌ಟೆಲ್‌ ಹೊಸದಾಗಿ 35 ರೂ. ಬೆಲೆಯ ಹೊಸ ರೀಚಾರ್ಜ್ ಯೋಜನೆ ಪರಿಚಯಿಸಿದೆ. 2 ದಿನ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ ಗ್ರಾಹಕರಿಗೆ 2GB ಡೇಟಾ ಸಿಗಲಿದೆ. ಅಂದರೆ 1GB ಡೇಟಾಗೆ ನೀವು 17.5 ರೂ. ಪಾವತಿಸುತ್ತೀರಿ.

19 ರೂ.ರೀಚಾರ್ಜ್ ಪ್ಲ್ಯಾನ್

35 ರೂ. ರೀಚಾರ್ಜ್ ಬದಲು 19 ರೂ. ರೀಚಾರ್ಜ್ ಪ್ಲ್ಯಾನ್ ಕೂಡ ಇದೆ. ಇದು 1 ದಿನದ ವ್ಯಾಲಿಡಿಟಿ ಹೊಂದಿದ್ದು, ನಿಮಗೆ 1GB ಡೇಟಾ ಸಿಗಲಿದೆ. 19 ರೂ. ಪ್ಲ್ಯಾನ್ಗೆ ಹೋಲಿಕೆ ಮಾಡಿದ್ರೆ 35 ರೂ. ಪ್ಲ್ಯಾನ್ ಉತ್ತಮವಾಗಿದೆ.

319 ರೂ. ರೀಚಾರ್ಜ್ ಪ್ಲ್ಯಾನ್

ಏರ್‌ಟೆಲ್‌ ಇತ್ತೀಚೆಗೆ 319 ರೂ. ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ ದಿನಕ್ಕೆ 100 SMS ಸೇರಿ ಇನ್ನಿತರೆ ಪ್ರಯೋಜನಗಳು ಸಿಗಲಿವೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಏರ್‌ಟೆಲ್‌ 359 ರೂ. ರೀಚಾರ್ಜ್ ಪ್ಲ್ಯಾನ್

ಏರ್‌ಟೆಲ್‌ 359 ರೂ. ಪ್ರಿಪೇಯ್ಡ್ ಯೋಜನೆ ಸಹ ಬಹಳಷ್ಟು ಜನಪ್ರಿಯತೆ ಪಡೆದಿದೆ. 28 ದಿನ ವ್ಯಾಲಿಡಿಟಿಯ ಈ ಯೋಜನೆಯಲ್ಲಿ 2GB ದೈನಂದಿನ ಡೇಟಾ ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS ಸೌಲಭ್ಯವಿದೆ.

VIEW ALL

Read Next Story