ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ಹಲವಾರು ವಿಶೇಷ ರೀಚಾರ್ಜ್ ಪ್ಲಾನ್‌ಗಳು ಪರಿಚಯಿಸಿದೆ. ಪ್ರತಿದಿನ 2GB ಡೇಟಾದೊಂದಿಗೆ ಅನಿಯಮಿತ ಕರೆಗಳು ಮತ್ತು SMS ಪ್ರಯೋಜನಗಳೊಂದಿಗೆ JioTV, JioCinema ಮತ್ತು JioSecurity ಸೇರಿ ಅನೇಕ ಅಪ್ಲಿಕೇಶನ್ಗಳಿಗೆ ಉಚಿತ Access ಲಭ್ಯವಿರಲಿದೆ.
Reliance Jio 249 ರೂ.ನ ಯೋಜನೆಯಡಿ ಗ್ರಾಹಕರಿಗೆ 23 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ದಿನಕ್ಕೆ 2GB ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯ ಸಿಗಲಿದೆ.
ಜಿಯೋದ 299 ರೂ.ನ ರಿಚಾರ್ಜ್ ಪ್ಲಾನ್ 28 ದಿನಗಳ ಮಾನ್ಯತೆ ಹೊಂದಿದೆ. ಪ್ರತಿದಿನ 2GB ಮೊಬೈಲ್ ಡೇಟಾ,ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶವಿರುತ್ತದೆ.
ಜಿಯೋದ 533 ರೂ.ಗಳ ಪ್ಲಾನ್ನಲ್ಲಿ ಗ್ರಾಹಕರಿಗೆ 56 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಒಟ್ಟು 112GB, ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆಯಿದೆ.
ಜಿಯೋದ 719 ರೂ.ಗಳ ರಿಚಾರ್ಜ್ ಯೋಜನೆಯಡಿ 84 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಪ್ರತಿ ದಿನ 2GB ಡೇಟಾ, ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 SMS ಮತ್ತು JioTV, JioCinema, JioSecurity ಮತ್ತು ಇತರ ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶವಿರುತ್ತದೆ.
ಜಿಯೋದ 799 ರೂ.ಗಳ ಯೋಜನೆ 56 ದಿನಗಳ ಮಾನ್ಯತೆ ಹೊಂದಿದೆ. ದಿನಕ್ಕೆ 2GBಯಂತೆ ಒಟ್ಟು 112GB ಹೈ-ಸ್ಪೀಡ್ ಡೇಟಾ, ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳು ಹಾಗೂ Disney+ Hotstarಗೆ 1 ವರ್ಷದ ಉಚಿತ ಚಂದಾದಾರಿಕೆ ದೊರೆಯುತ್ತದೆ.
ಜಿಯೋದ 1,066 ರೂ. ಯೋಜನೆಯಡಿ ನಿಮಗೆ 84 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2GB ಡೇಟಾ, ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಪ್ರವೇಶದೊಂದಿಗೆ 499 ರೂ. ಮೌಲ್ಯದ 1-ವರ್ಷದ Disney+ Hotstar ಮೊಬೈಲ್ ಚಂದಾದಾರಿಕೆ ಉಚಿತವಾಗಿರುತ್ತದೆ.