ವೆಸ್ಟ್ ಮಟೀರಿಯಲ್ ರೀ ಸೈಕಲ್ ಬಿಸ್ನೆಸ್ ಇದಾಗಿದೆ. ಮನೆಯಲ್ಲಿ ಸಂಗ್ರಹವಾಗುವ ಸ್ಕ್ರ್ಯಾಪ್ ಗಳಿಂದ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಉದ್ಯಮದಿಂದ ಹಲವರು ಲಕ್ಷಾಧಿಪತಿಗಳಾಗಿದ್ದಾರೆ.
ವಿಶ್ವಾದ್ಯಂತ, ಪ್ರತಿ ವರ್ಷ 2 ಶತಕೋಟಿ ಟನ್‌ಗಳಿಗಿಂತಲೂ ಹೆಚ್ಚು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಜನರು ಮನೆಯ ಅಲಂಕಾರ ವಸ್ತುಗಳು, ಆಭರಣಗಳು, ತ್ಯಾಜ್ಯ ವಸ್ತುಗಳಿಂದ ಪೇಂಟಿಂಗ್‌ಗಳಂತಹ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ಈ ದೊಡ್ಡ ಸಮಸ್ಯೆಯನ್ನು ವ್ಯಾಪಾರವಾಗಿ ಪರಿವರ್ತಿಸಿದ್ದಾರೆ
ತ್ಯಾಜ್ಯ ಪದಾರ್ಥಗಳಿಂದ ನೀವು ಹಲವು ಸಂಗತಿಗಳನ್ನು ಮಾಡಬಹುದು. ಉದಾಹರಣೆಗೆ ನೀವು ಟೈಯರ್ ಗಳಿಂದ ಕುಳಿತುಕೊಳ್ಳಲು ಆಸನಗಳನ್ನು ತಯಾರಿಸಬಹುದು. ಅಮೆಜಾನ್ ನಲ್ಲಿ ಇಂತಹ ಆಸನ ಸುಮಾರು 700 ರೂ.ಗಳಿಗೆ ಮಾರಾಟವಾಗುತ್ತದೆ. ಇದಲ್ಲದೆ ಕಪ್ ಗಳು, ಮರದ ಕರಕುಶಲ ವಸ್ತುಗಳು. ಕೆಟಲ್ ತಯಾರಿಸಬಹುದು, ಗ್ಲಾಸ್ ತಯಾರಿಸಬಹುದು.
ಈ ಬಿಸ್ನೆಸ್ ಆರಂಭಿಸಲು ಮೊದಲು ನೀವು ನಿಮ್ಮ ಮನೆಯ ಅಕ್ಕಪಕ್ಕದಲ್ಲಿರುವ ಅಥವಾ ನಿಮ್ಮ ಮನೆಯಲ್ಲಿಯೇ ಇರುವ ತ್ಯಾಜ್ಞವಸ್ತುಗಳನ್ನು ಸಂಗ್ರಹಿಸಬೇಕು. ಪಾಲಿಕೆಯಿಂದಲೂ ಕೂಡ ನೀವು ಅವುಗಳನ್ನು ಸಂಗ್ರಹಿಸಬಹುದು. ಗ್ರಾಹಕರೂ ಕೂಡ ತ್ಯಾಜ್ಯ ಪದಾರ್ಥಗಳನ್ನು ಒದಗಿಸುತ್ತಾರೆ ಮತ್ತು ಅವುಗಳನ್ನು ನೀವು ಖರೀದಿಸಬಹುದು. ಬಳಿಕ ಅವುಗಳನ್ನು ಸ್ವಚ್ಛಗೊಳಿಸಿ. ಬಳಿಕ ವಿವಿಧ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ ಅವುಗಳಿಗೆ ಬಣ್ಣ ಹಚ್ಚಿ.
ಈ ಕುರಿತು ಮಾತನಾಡಿರುವ 'ದಿ ಕಬಾಡಿ ಡಾಟ್ ಕಾಮ್' ನ ಮಾಲೀಕರಾಗಿರುವ ಶುಭಂ, ಆರಂಭದಲ್ಲಿ ಒಂದು ಆಟೋ ಹಾಗೂ ಮೂರು ಜನರು ಸೇರಿ ಮನೆ-ಮನೆಗೆ ತೆರಳಿ ತ್ಯಾಜ್ಯ ವಸ್ತುಗಳ ಸಂಗ್ರಹಣೆ ಆರಂಭಿಸಿದೆವು ಎನ್ನುತ್ತಾರೆ. ಇಂದು ತಮ್ಮ ಮಾಸಿಕ ಟರ್ನ್ ಓವರ್ 8 ರಿಂದ 10 ಲಕ್ಷಗಳಷ್ಟಾಗಿದೆ ಎಂದು ಅವರು ಹೇಳಿದ್ದಾರೆ.