ಶಕ್ತಿಕಾಂತ್ ದಾಸ್ ಆರ್ ಬಿಐನ ಪ್ರಸ್ತುತ ಮತ್ತು 25 ನೇ ಗವರ್ನರ್.
ಹಿಂದಿನ ಹಣಕಾಸು ವರ್ಷದಲ್ಲಿ ಶಕ್ತಿಕಾಂತ್ ದಾಸ್ ಅವರ ಮಾಸಿಕ ವೇತನ 2.5 ಲಕ್ಷ (ಮಾಧ್ಯ ಮ ವರದಿಗಳ ಪ್ರಕಾರ).
ಮಾರ್ಚ್ ಅಂತ್ಯಕ್ಕೆ ಆರ್ ಬಿಐ ವೈಸ್ ಗವರ್ನರ್ ಮಾಸಿಕ ವೇತನ 2.25 ಲಕ್ಷ. ಈ ಬ್ಯಾಂಕ್ ಸದ್ಯ 4 ಮಂದಿ ವೈಸ್ ಗವರ್ನರ್ ಅವರನ್ನು ಹೊಂದಿದೆ.
ಆರ್ ಬಿಐ ಕಾರ್ಯ ನಿರ್ವಾಹಕ ನಿರ್ದೇಶಕರು ೨೦೨೨ ರ ಕೊನೆಯಲ್ಲಿ 2.16 ಲಕ್ಷ ವೇತನವನ್ನು ಪಡೆಯುತ್ತಿದ್ದರು.
ವೇತನದ ಹೊರತಾಗಿ ಗವರ್ನರ್ ಸರ್ಕಾರಿ ವಸತಿ, ಕಾರು, ಸಿಬ್ಬಂದಿ, ಚಾಲಕ ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುತ್ತಾರೆ.
ಶಕ್ತಿಕಾಂತ್ ದಾಸ್ ಡಿಸೆಂಬರ್ 12, 2018 ರಂದು ಆರ್ ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು.
ಕಳೆದ 38 ವರ್ಷಗಳಿಂದ ಹಣಕಾಸು, ತೆರಿಗೆ, ಕೈಗಾರಿಕೆ, ಮೂಲ ಸೌಕರ್ಯ, ಮುಂತಾದ ವಿವಿಧ ಕ್ಷೇತ್ರಗಳ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ.
ದಾಸ್ ತಮಿಳುನಾಡು ಕೇಡರ್ ನಲ್ಲಿ 1980 ಬ್ಯಾಚ್ ನ ಅಧಿಕಾರಿ.