1. ಪ್ರಸ್ತುತ ಸಾರ್ವಜನಿಕ ವಲಯದ ಬಹುತೇಕ ಬ್ಯಾಂಕ್ ಗಳು ಎಫ್ಡಿ ಮೇಲೆ ಆಕರ್ಷಕ ಬಡ್ಡಿಯನ್ನು ನೀಡುತ್ತಿವೆ. ಹಾಗಾದರೆ ಬನ್ನಿ ಎಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ ತಿಳಿದುಕೊಳ್ಳೋಣ,
2. ಪ್ರಸ್ತುತ ಎಲ್ಲಾ ಸರ್ಕಾರಿ ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಇರಿಸಿದರೆ ನಿಮಗೆ ಸರಿಸುಮಾರು ಶೇ.7 ರಷ್ಟು ಬಡ್ಡಿ ಸಿಗಲಿದೆ. ಎಸ್ಬಿಐ 1 ವರ್ಷದ ಅವಧಿಯ ಸ್ಥಿರ ಠೇವಣಿ ಮೇಲೆ ಶೇ. 6.8 ರಷ್ಟು ಮತ್ತು 2 ವರ್ಷ(ಶೇ.6.5ರಷ್ಟು) ಮತ್ತು 5 ವರ್ಷ (ಶೇ.6.5 ರಷ್ಟು) ಬಡ್ಡಿಯನ್ನು ನೀಡುತ್ತಿದೆ.
3. ಬ್ಯಾಂಕ್ ಆಫ್ ಇಂಡಿಯ 1 ವರ್ಷ (ಶೇ.7), 2 ವರ್ಷ (ಶೇ. 6.5), 5 ವರ್ಷಗಳ ಸ್ಥಿರ ಠೇವಣಿ ಮೇಲೆ ಶೇ.6 ರಷ್ಟು ಬಡ್ಡಿ ನೀಡುತ್ತಿದೆ. ಬ್ಯಾಕ್ ಆಫ್ ಮಹಾರಾಷ್ಟ್ರ 1 ವರ್ಷ (ಶೇ.6.35), 2 ವರ್ಷ (ಶೇ.6) ಮತ್ತು 5 ವರ್ಷ (ಶೇ.5.75) ರಷ್ಟು ಬಡ್ಡಿ ನೀಡುತ್ತಿದೆ.
4. ಕೆನರಾ ಬ್ಯಾಂಕ್ 1 ವರ್ಷ (ಶೇ.7), 2 ವರ್ಷ (ಶೇ.6.80) ಮತ್ತು 5 ವರ್ಷಗಳ ಸ್ಥಿರ ಠೇವಣಿ ಮೇಲೆ ಶೇ.6.70 ರಷ್ಟು ಬಡ್ಡಿ ನೀಡುತ್ತಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ 1 ವರ್ಷ (ಶೇ.6.75), 2 ವರ್ಷ (ಶೇ. 6.25) ಮತ್ತು 5 ವರ್ಷ (ಶೇ.6.25 ರಷ್ಟು) ಬಡ್ಡಿ ನೀಡುತ್ತಿದೆ.
5. ಇಂಡಿಯನ್ ಬ್ಯಾಂಕ್ 1 ವರ್ಷ (ಶೇ.6.10), 2 ವರ್ಷ (ಶೇ.6.25) ಮತ್ತು 5 ವರ್ಷಗಳ ಸ್ಥಿರ ಠೇವಣಿ ಮೇಲೆ ಶೇ.6.25 ರಷ್ಟು ಬಡ್ಡಿ ನೀಡುತ್ತಿದೆ. (ಹಕ್ಕುತ್ಯಾಗ- ಯಾವುದೇ ಬ್ಯಾಂಕ್ ನಲ್ಲಿ ಎಫ್.ಡಿ ಠೇವಣಿ ಇರಿಸುವ ಮುನ್ನ ಆ ಬ್ಯಾಂಕಿನ ವೆಬ್ ಸೈಟ್ ಗೆ ಭೇಟಿ ನೀಡಲು ಮರೆಯಬೇಡಿ)