ನಿಶ್ಚಿತ ಠೇವಣಿ

ಇಂದಿನ ಯುಗದಲ್ಲಿ ಜನಸಾಮಾನ್ಯರು ತಮ್ಮ ಭವಿಷ್ಯಕ್ಕಾಗಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡುತ್ತಾರೆ.

Puttaraj K Alur
May 03,2023

ಉತ್ತಮ ಬಡ್ಡಿ

ಉತ್ತಮ ಬಡ್ಡಿಯ ಉದ್ದೇಶದಿಂದ ಜನರು ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಡುತ್ತಾರೆ.

ವಿವಿಧ ರೀತಿಯ ಬಡ್ಡಿ

ಪ್ರತಿಯೊಂದು ಬ್ಯಾಂಕುಗಳು ಸ್ಥಿರ ಠೇವಣಿ ಮೇಲೆ ವಿವಿಧ ರೀತಿಯ ಬಡ್ಡಿದರಗಳನ್ನು ನಿಗದಿಪಡಿಸಿರುತ್ತವೆ.

ರೆಪೊ ದರ

ಕಳೆದೊಂದು ವರ್ಷದಲ್ಲಿ ಆರ್ಬಿಐ ರೆಪೊ ದರವನ್ನು 6 ಬಾರಿ ಹೆಚ್ಚಿಸುವ ಮೂಲಕ ಸಾರ್ವಜನಿಕರ ಮೇಲಿನ ಹೊರೆಯನ್ನು ಹೆಚ್ಚಿಸಿದೆ.

ಗ್ರಾಹಕರಿಗೆ ಉಡುಗೊರೆ

ಈ ಮಧ್ಯೆ ಅನೇಕ ಬ್ಯಾಂಕುಗಳು ತಮ್ಮ ಸ್ಥಿರ ಠೇವಣಿ ಮೇಲಿನ ಬಡ್ಡಿಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಉಡುಗೊರೆ ನೀಡಿವೆ.

ಶೇ.9.50ರಷ್ಟು ಬಡ್ಡಿ

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲೆ ಶೇ.9.50ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ.

ಹಿರಿಯರಿಗೆ ಶೇ.9.5ರಷ್ಟು ಬಡ್ಡಿ

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯರಿಗೆ ಶೇ.9.5ರಷ್ಟು ಬಡ್ಡಿಯನ್ನು ನೀಡುತ್ತದೆ.

ಶೇ.9ರಷ್ಟು ಬಡ್ಡಿ

ಚಿಲ್ಲರೆ ಹೂಡಿಕೆದಾರರಿಗೆ ಈ ಬ್ಯಾಂಕ್ ಶೇ.9ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಶೇ.8.75ರಷ್ಟು ಬಡ್ಡಿ

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ 501 ದಿನಗಳ ನಿಶ್ಚಿತ ಠೇವಣಿ ಯೋಜನೆಯಲ್ಲಿ ಬ್ಯಾಂಕ್ ಚಿಲ್ಲರೆ ಹೂಡಿಕೆದಾರರಿಗೆ ಶೇ.8.75ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಶೇ.9.25ರಷ್ಟು ಬಡ್ಡಿ

ಅದೇ 501 ದಿನಗಳ ನಿಶ್ಚಿತ ಠೇವಣಿ ಯೋಜನೆ ಮೇಲೆ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇ.9.25ರಷ್ಟು ಬಡ್ಡಿ ನೀಡುತ್ತಿದೆ.

VIEW ALL

Read Next Story