ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ಕೇವಲ 20 ರೂ.ಗೆ ನೀವು 2 ಲಕ್ಷ ಲಾಭ ಪಡೆಯಬಹುದು.
ಈ ಯೋಜನೆ ದೇಶದ ಬಡ ಜನರಗೆ ಸಾಕಷ್ಟು ಅನುಕೂಲಕರವಾಗಿದೆ. ಕನಿಷ್ಠ 20 ರೂ. ಪ್ರೀಮಿಯಂ ಕಟ್ಟಿದ್ರೆ 2ಲಕ್ಷದವರೆಗೂ ವಿಮಾ ರಕ್ಷಣೆ ಸಿಗಲಿದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಪಡೆಯಲು ನೀವು ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ಹೋಗಿ ಫಾರ್ಮ್ ಭರ್ತಿ ಮಾಡಿ. ವಿಮಾ ಏಜೆಂಟ್ಗಳ ಮೂಲಕವೂ ಈ ಪಾಲಿಸಿ ತೆಗೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ವರ್ಷಕ್ಕೆ 20 ರೂ. ಪ್ರೀಮಿಯಂ ಪಾವತಿಸಬೇಕು. ಈ ಯೋಜನೆಯು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಲಿದ್ದು, 20 ರೂ. ಕಡಿತಗೊಳಿಸಲಾಗುತ್ತದೆ.
ಬ್ಯಾಂಕ್ ಖಾತೆಯಿಂದ 20 ರೂ. ಸ್ವಯಂ ಕಡಿತಗೊಳ್ಳುತ್ತದೆ. ಪ್ರತಿ ವರ್ಷ ಮೇ 31ರಂದು ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ.
ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೆ ಪಾಲಿಸಿ ಇರುತ್ತೆ. ಖಾತೆ ಮುಚ್ಚಿದ್ರೆ ಈ ಪಾಲಿಸಿ ಲಭ್ಯವಿರಲ್ಲ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಕೇವಲ 1 ಬ್ಯಾಂಕ್ ಖಾತೆ ಲಿಂಕ್ ಮಾಡಬೇಕಾಗುತ್ತದೆ.
ಪ್ರೀಮಿಯಂ ಪಾವತಿಸಿದರೆ ಮಾತ್ರ ಪಾಲಿಸಿ ನವೀಕರಿಸಲಾಗುತ್ತದೆ. ಇಲ್ಲದಿದ್ದರೆ ಪಾಲಿಸಿಯನ್ನು ರದ್ದುಗೊಳಿಸಲಾಗುತ್ತದೆ. 18 ರಿಂದ 70 ವರ್ಷದೊಳಗಿನವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
ಪಾಲಿಸಿದಾರರ ಆಕಸ್ಮಿಕ ಮರಣದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 2 ಲಕ್ಷ ರೂ. ವಿಮೆ ನೀಡಲಾಗುತ್ತದೆ ಮತ್ತು ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದರೆ 1 ಲಕ್ಷ ರೂ. ನೀಡಲಾಗುತ್ತದೆ.